Advertisement

ಸುಬ್ರಹ್ಮಣ್ಯ, ಧರ್ಮಸ್ಥಳ ಪುಣ್ಯ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ

09:12 AM Nov 30, 2020 | Suhan S |

ಸುಬ್ರಹ್ಮಣ್ಯ/ಬೆಳ್ತಂಗಡಿ, ನ. 29: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಜಾ ದಿನವಾದ ಶನಿವಾರ ಹಾಗೂ ರವಿವಾರ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ.

Advertisement

ದೂರದೂರುಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ, ಸೇವೆಗಳನ್ನು ನೆರವೇರಿಸಿ ಶ್ರೀ ದೇವರ ದರುಶನ ಪಡೆದುಕೊಂಡರು.

ಚಂಪಾ ಷಷ್ಠಿಗೆ ಸಿದ್ಧತೆ :

ಇನ್ನು ಕೆಲವು ದಿನಗಳಲ್ಲಿಯೇ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಜಾತ್ರೆ ಆರಂಭವಾಗಲಿದ್ದು, ಕ್ಷೇತ್ರದಲ್ಲಿ ಪೂರ್ವ ತಯಾರಿಗಳ ಸಿದ್ಧತಾ ಕೆಲಸಗಳು ಭರದಿಂದ ನಡೆಯುತ್ತಿವೆ.

ತಾಂಬೂಲ ಪ್ರಶ್ನೆ :

Advertisement

ದೇವಸ್ಥಾನದಿಂದ ಪ್ರತಿವರ್ಷ ಪುರುಷರಾಯ ಬೆಟ್ಟದಲ್ಲಿ ನೆರವೇರಿಸಿಕೊಂಡು ಬರುತ್ತಿದ್ದ ದೈವಗಳ ನಡಾವಳಿ, ದೇಗುಲದ ತೋಟಗಳಲ್ಲಿ ಇರುವ ದೈವಗಳ ಗುಡಿಗಳಲ್ಲಿ ನೇಮ, ದೇವರಗದ್ದೆ ಹೊಸಳಿಗಮ್ಮ ದೈವದ ಗುಡಿಯ ಕುರಿಮುದ್ರೆ ಕಾರ್ಯಕ್ರಮ 2020-21ನೇ ಸಾಲಿನಲ್ಲಿ ನಡೆಯದೇ ಇರುವ ಸಂಬಂಧ ಕ್ಷೇತ್ರದಲ್ಲಿ ರವಿವಾರ ತಾಂಬೂಲ ಪ್ರಶ್ನೆ ಚಿಂತನೆ ನಡೆಯಿತು. ದೈವಜ್ಞರಾದ ಶಶಿಕುಮಾರ್‌ ಪಂಡಿತ್‌ ತಾಂಬೂಲ ಪ್ರಶ್ನೆ ನಡೆಸಿಕೊಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ :

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರವಿವಾರ ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರವಿವಾರ 26,000  ಭಕ್ತರು ಆಗಮಿಸಿದ್ದರು. ಸೋಮವಾರ ವಿಶೇಷ ದಿನವಾದ್ದರಿಂದ ಕ್ಷೇತ್ರಕ್ಕೆ ಇನ್ನಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next