Advertisement

ಅಯೋಧ್ಯೆಗೆ ಭಕ್ತರ ದಂಡು

09:50 AM Nov 16, 2019 | Hari Prasad |

ಅಯೋಧ್ಯೆ: ರಾಮಲಲ್ಲಾ ಪರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ಅಯೋಧ್ಯೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಿದ್ದಾರೆ.

Advertisement

ಬಿಹಾರದಿಂದ ಗುಜರಾತ್‌ವರೆಗೂ ಅಯೋಧ್ಯೆಯ ರಾಮಜನ್ಮಭೂಮಿಗೆ ಜನಜಾತ್ರೆಯೇ ಆಗಮಿಸುತ್ತಿದೆ. ಇಲ್ಲಿಗೆ ಬರುವವರ ಪೈಕಿ ಬಹುತೇಕರು ಮೊದಲ ಬಾರಿ ಅಯೋಧ್ಯೆಯ ಮಣ್ಣನ್ನು ಸ್ಪರ್ಶಿಸಿ ಪುಳಕಗೊಳ್ಳುತ್ತಿರುವವರು. ಜೈ ಶ್ರೀರಾಮ್‌ ಎಂದು ಬರೆದಿರುವಂಥ ಕೇಸರಿ ಕುರ್ತಾ ಧರಿಸಿ ಬಿಹಾರದಿಂದ ಅಯೋಧ್ಯೆಗೆ ಬಂದಿದ್ದ 16 ವರ್ಷದ ಶಿವಂ ಕುಮಾರ್‌ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆಗಳನ್ನೂ ಹೊತ್ತು ತಂದಿದ್ದಾನೆ.

ನನ್ನ ಸ್ನೇಹಿತರ ಜೊತೆ ಇಲ್ಲಿಗೆ ಬಂದಿದ್ದೇನೆ. ಮಂದಿರ ನಿರ್ಮಾಣಕ್ಕೆ ಸೇವೆ ಮಾಡುತ್ತೇನೆ ಎಂದಿದ್ದಾನೆ. ಕರಸೇವಕಪುರದಲ್ಲಿ ನಡೆವ ಕಾರ್ಯಾಗಾರದಲ್ಲಿ 1,000 ಜನರು ಸೇರುತ್ತಿದ್ದರು. ಆದರೆ ತೀರ್ಪು ಹೊರಬಿದ್ದ ಬಳಿಕ 5,000 ಜನರು ಭಾಗವಹಿಸಿದ್ದಾರೆ. ಕರಸೇವಕಪುರ ಕೂಡಾ ಯಾತ್ರಾ ಸ್ಥಳವಾಗಿ ಮಾರ್ಪಾಡಾಗುತ್ತಿದೆ ಎಂದು ವಿಎಚ್‌ಪಿ ವಕ್ತಾರ ಶರದ್‌ ಶರ್ಮ ತಿಳಿಸಿದ್ದಾರೆ.

ರಿಜ್ವಿ ದೇಣಿಗೆ
ರಾಮಮಂದಿರ ನಿರ್ಮಾಣಕ್ಕಾಗಿ 51,000 ರೂ. ದೇಣಿಗೆ ನೀಡುವುದಾಗಿ ಉತ್ತರ ಪ್ರದೇಶ ಶಿಯಾ ಸೆಂಟ್ರಲ್‌ ವಕ್ಫ್ ಬೋರ್ಡ್‌ ಅಧ್ಯಕ್ಷ ವಾಸಿಂ ರಿಜ್ವಿ ಗುರುವಾರ ಘೋಷಿಸಿದ್ದಾರೆ. ದಶಕಗಳ ಕಾಲ ದೇಶವನ್ನು ಕಂಗೆಡಿಸಿದ್ದ ವಿವಾದಕ್ಕೆ ಸುಪ್ರೀಂ ಕೋರ್ಟ್‌ ಸೂಕ್ತ ರೀತಿಯಲ್ಲಿ ತೆರೆ ಎಳೆಯತು.

ಈಗ ರಾಮ ಮಂದಿರ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. ಶ್ರೀ ರಾಮ ನಮ್ಮೆಲ್ಲರ ಪೂರ್ವಿಕ ಕೂಡಾ ಹೌದು. ವಾಸಿಂ ರಿಜ್ವಿ ಫಿಲ್ಮ್ಸ್ ವತಿಯಿಂದ ಮಂದಿರ ನಿರ್ಮಾಣಕ್ಕೆ 51,000 ರೂ. ದೇಣಿಗೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next