Advertisement

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

05:17 PM Oct 16, 2024 | Team Udayavani |

ಉದಯವಾಣಿ ಸಮಾಚಾರ
ತೇರದಾಳ: ಭಕ್ತರು ಕೊಟ್ಟ ದೇಣಿಗೆ ಹಣವನ್ನು ಮಾತ್ರ ಬಳಸುವ ಸಂಕಲ್ಪ ಮಾಡಿದಂತೆ, ಯಾವುದೇ ಸರಕಾರಗಳ ಅನುದಾನವನ್ನು ಪಡೆಯದೆ 5-6 ಕೋಟಿ ರೂ. ಖರ್ಚು ಮಾಡಿ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನ ಜೀರ್ಣೋದ್ಧಾರ ಮಾಡಿ ನೂತನ ದೇವಸ್ಥಾನ ದೇವಸ್ಥಾನ ಸಿದ್ಧಗೊಂಡಿದೆ. ಇದು ಭಕ್ತರ ಸಂಕಲ್ಪವಾಗಿತ್ತು ಎಂದು ಜಮಖಂಡಿ ಶಾಸಕ, ನಾಡೋಜ ಜಗದೀಶ ಗುಡಗುಂಟಿಮಠ ಹೇಳಿದರು.

Advertisement

ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜೀರ್ಣೋದ್ಧಾರಗೊಂಡ ದೇವಾಲಯದ ಲೋಕಾರ್ಪಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಬಸವ ಮಹಾಪುರಾಣ ಆರಂಭೋತ್ಸವದಲ್ಲಿ ಅವರು ಮಾತನಾಡಿದರು.

ಕೊರೊನಾ ಹಿನ್ನೆಲೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವುದಕ್ಕಾಗಿ 10ವರ್ಷಗಳವರೆಗೆ ಕಟ್ಟಡ ನಡೆದುಬಂದಿದೆ. ಇದರಿಂದಾಗಿ ಅರ್ಚಕರಿಗೆ, ಭಕ್ತರಿಗೆ ಅಡಚಣೆಯಾಗಿದೆ. ಅದಕ್ಕಾಗಿ ಎಲ್ಲರಲ್ಲೂ ಕ್ಷಮೆಯಾಚಿಸುವೆ. ಪರಮಶ್ರೇಷ್ಠವಾದ 12 ಜ್ಯೋತಿರ್ಲಿಂಗ ದೇವಸ್ಥಾನಗಳ ಮಾದರಿಗಳೊನ್ನೊಳಗೊಂಡ ಅಪ್ಪಟ ಚಾಲುಕ್ಯ ಶೈಲಿಯಲ್ಲಿ ಉಡುಪಿಯ ವಾಸ್ತು ತಜ್ಞ ಮತ್ತು ಗುತ್ತಿಗೆದಾರ ರಾಜಶೇಖರ ಹೆಬ್ಟಾರ ಅವರು ಭಕ್ತರ ನಿರೀಕ್ಷೆಯಂತೆ ದೇವಮಂದಿರ ನಿರ್ಮಿಸಿಕೊಟ್ಟಿದ್ದಾರೆ.

ನ.11ರಂದು ಲೋಕಾರ್ಪಣೆಯಾಗುವ ದೇವಸ್ಥಾನದ ಕಾರ್ಯಕ್ರಮಗಳಿಗೆ ಈ ನಾಡಿನ ಸದ್ಭಕ್ತರು ತನು, ಮನ, ಧನದಿಂದ ಸ್ವಯಂಪ್ರೇರಣೆಯಿಂದ ಸೇವೆಗೈಯುವ ಪರಿ ಅನುಕರಣೀಯವಾಗಿದೆ ಎಂದರು. ಬಳ್ಳಿಗಾವಿಯಿಂದ, ಅಲ್ಲಮಗಿರಿಯಿಂದ
ಬಂದಿರು ಪ್ರಭು ಪರಂಜ್ಯೋತಿಯ ಸ್ವಾಗತದಲ್ಲಿ 16-18ಸಾವಿರ ಭಕ್ತರು ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ತಿಂಗಳ ಪರ್ಯಂತ ಜರುಗುವ ಎಲ್ಲ ಕಾರ್ಯಕ್ರಮಗಳು ಭಕ್ತಾದಿಗಳ ಸೇವೆ, ಭಕ್ತಿಯನ್ನೆ ಅವಲಂಭಿಸಿದೆ ಎಂದರು.

ಪರಯ್ಯ ಸ್ವಾಮೀಜಿ ಗ್ರಂಥ ಪೂಜೆ ನೆರವೇರಿಸಿದರು. ಬೆಳಗಾವಿ ಜಿಲ್ಲೆಯ ಶೇಗುಣಸಿ ವಿರಕ್ತಮಠದ ಡಾ| ಮಹಾಂತಪ್ರಭು ಶ್ರೀಗಳು ಬಸವ ಮಹಾಪುರಾಣ ಆರಂಭಿಸಿದರು. ನೇತೃತ್ವ ವಹಿಸಿದ್ದ ಹಂದಿಗುಂದ-ಆಡಿ ಮಠದ ಶಿವಾನಂದ ಶ್ರೀ, ರಬಕವಿ ಬ್ರಹ್ಮಾನಂದಾಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಚಿಮ್ಮಡ ಪ್ರಭು ಶ್ರೀ ಆಶೀರ್ವಚನ ನೀಡಿದರು. ಹಳಿಂಗಳಿ ಕಮರಿಮಠದ ಶಿವಾನಂದ ಶ್ರೀ, ಹಿರೇಮಠದ ಬಾಲಗಂಗಾಧರ ದೇವರು, ಅರ್ಚಕ ಮಂಡಳಿ ಅಧ್ಯಕ್ಷ ಗುಹೇಶ್ವರ ಪುರಾಣಿಕಮಠ, ವಿಜಯಮಹಾಂತೇಶ ನಾಡಗೌಡ, ಪೃಥ್ವಿರಾಜ ನಾಡಗೌಡ, ಗೌತಮ ರೋಡಕರ, ಪ್ರಸಾಧ ಸಮಿತಿ ಅಧ್ಯಕ್ಷ ಸಿದ್ಧಪ್ಪ ಗುಡ್ಡಿ ಹಾಜರಿದ್ದರು.

Advertisement

ಸಂಗಮೇಶ ಪಾಟೀಲ, ತೋಟೇಂದ್ರಕುಮಾರ, ಷಣ್ಮುಖಯ್ಯ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಬನಹಟ್ಟಿಯ ವಿದ್ಯಾರ್ಥಿನಿಯರು ಮಾಲಾ ಜಡಿಯವರ ಮಾರ್ಗದರ್ಶನದಲ್ಲಿ ವಚನನೃತ್ಯ ಪ್ರದರ್ಶಿಸಿದರು. ಎಂ.ಬಿ. ಮಾಳೇದ, ಎಂ.ಕೆ. ಮೇಗಾಡಿ, ಜಿ.ಎಂ. ಮೋಪಗಾರ, ಸಚಿನ್‌ ಜಯಪ್ಪನವರ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next