Advertisement

ಗೋವಾ ವಿಧಾನಸಭಾ ಚುನಾವಣೆ: ದೇವೇಂದ್ರ ಫಡ್ನವೀಸ್ ನಾಳೆ ಗೋವಾಕ್ಕೆ ಆಗಮನ

07:20 PM Oct 13, 2021 | Team Udayavani |

ಪಣಜಿ: ಗೋವಾದಲ್ಲಿ ವಿಧಾನಸಭಾ ಚುನಾವಣೆಯ ಗಾಳಿ ಜೋರಾಗಿ ಬೀಸುತ್ತಿದ್ದು, ಅಧಿಕಾರದಲ್ಲಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಬಿಜೆಪಿ ಚುನಾವಣಾ ಪ್ರಭಾರಿ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ ಗೋವಾಕ್ಕೆ ಆಗಮಿಸಿದ್ದು, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಗುರುವಾರ ಗೋವಾಕ್ಕೆ ಆಗಮಿಸಲಿದ್ದಾರೆ.

Advertisement

2022 ರ ಜನವರಿಯಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ 6 ತಿಂಗಳು ಮುಂಚಿತವಾಗಿಯೇ ಎಲ್ಲ ಪಕ್ಷಗಳೂ ಭಾರಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿವೆ. ಕಾಂಗ್ರೆಸ್ ಚುನಾವಣಾ ಪ್ರಭಾರಿ ಪಿ.ಚಿದಂಬರಂ ಸದ್ಯ ಗೋವಾದಲ್ಲಿ ಕಾರ್ಯಕರ್ತರ ಸಭೆಯಲ್ಲಿ ತೊಡಗಿದ್ದಾರೆ.

ತೃಣಮೂಲ ಕಾಂಗ್ರೇಸ್ ಗೋವಾದಲ್ಲಿ ಪಾದಾರ್ಪಣೆ ಮಾಡಿದೆ. ಆಮ್ ಆದ್ಮಿ ಪಕ್ಷ ಕೂಡ ಗೋವಾದಲ್ಲಿ ಭಾರಿ ಪ್ರಚಾರ ನಡೆಸುತ್ತಿದೆ. ಶಿವಸೇನೆ ಗೋವಾದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದೆ. ಗೋವಾದ ಸ್ಥಳೀಯ ಪಕ್ಷಗಳಾದ ಎಂಜಿಪಿ ಹಾಗೂ ಗೋವಾ ಫೊರ್‍ವರ್ಡ ಪಕ್ಷಗಳು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಗೋವಾದಲ್ಲಿ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next