ಬೆಂಗಳೂರು/ಬಳ್ಳಾರಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದೂ ಪಿಯು ಕಾಲೇಜು ಕಲಾ ವಿಭಾಗದಲ್ಲಿ ಒಟ್ಟು ಒಂಬತ್ತು Rankಗಳನ್ನು ಪಡೆಯುವ ಮೂಲಕ ಮಹತ್ವದ ಸಾಧನೆಗೆ ಪಾತ್ರವಾಗಿದೆ. ಅಲ್ಲದೇ ಈ ಕಾಲೇಜಿನ ಕುಸುಮಾ ಉಜ್ಜಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ.
ಕೊಟ್ಟೂರಿನ ದೇವೇಂದ್ರಪ್ಪ-ಜಯಮ್ಮ ದಂಪತಿಯ ಪುತ್ರಿಯಾಗಿರುವ ಕುಸುಮಾ ಕಲಾ ವಿಭಾಗದಲ್ಲಿ 594 ಅಂಕ ಗಳಿಸಿದ್ದಾರೆ. ತಂದೆ ದೇವೇಂದ್ರಪ್ಪನವರು ಪಂಕ್ಚರ್ ಶಾಪ್ ನಡೆಸುತ್ತಿದ್ದಾರೆ. ಬಿಡುವಿನ ವೇಳೆ ಈಕೆಯೂ ಅಪ್ಪನ ಅಂಗಡಿಯಲ್ಲಿ ಪಂಕ್ಚರ್ ಹಾಕುವ ಮೂಲಕ ಸಹಾಯ ಮಾಡುತ್ತಿದ್ದಳಂತೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ತನಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ತುಂಬಾ ಖುಷಿ ತಂದಿದೆ. ತಂದೆ ಕಷ್ಟ ಪಟ್ಟು ದುಡಿದು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ತಾನು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಕುಸುಮಾಳ ಮನದಾಳದ ಮಾತು.
ಕಳೆದ ವರ್ಷ ಇದೇ ಕೊಟ್ಟೂರಿನ ಇಂದು ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಅನಿತಾ ಪೂಜಾರ್ 585 ಅಂಕ ಪಡೆದು ರಾಜ್ಯಕ್ಕೆ ಫಸ್ಟ್ ಬಂದಿದ್ದಳು, ಈಕೆ ತಳ್ಳುಗಾಡಿಯಲ್ಲಿ ಬಾಳೆಹಣ್ಣು ಮಾರಿ ಹೊಟ್ಟೆ ಹೊರೆಯುವ ಬಡವ್ಯಾಪಾರಿಯ ಮಗಳಾಗಿದ್ದಳು.