Advertisement

ಮೂರು ಶಾಲೆ ಸೌಕರ್ಯಕ್ಕೆ 80 ಲಕ್ಷ ನಿಗದಿ

04:04 PM Dec 20, 2020 | Suhan S |

ಯಾದಗಿರಿ: ಜಿಲ್ಲೆಯ ಸುರಪುರ ಕ್ಷೇತ್ರದ ಶಾಸಕ ನರಸಿಂಹ ನಾಯಕ ಜುಮಾಲಪುರ ದೊಡ್ಡ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಏದಲ್‌ಬಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಂಗಂಪೇಟೆಯ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ದತ್ತು ಪಡೆದು ಮೂರು ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು 80.35 ಲಕ್ಷ ರೂ. ನಿಗದಿಯಾಗಿದೆ.

Advertisement

ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಜಟಿಲ ಸಮಸ್ಯೆಗಳು ಬೇರೂರಿದ್ದು, ಪ್ರಮುಖವಾಗಿ ಒಂದರಿಂದ ದ್ವಿತೀಯ ಪಿಯುವರೆಗೆ ತರಗತಿಗಳು ನಡೆಯುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯು ಕನ್ನಡ, ಉರ್ದು ಹಾಗೂ ಇಂಗ್ಲಿಷ್‌ ಮಾಧ್ಯಮ ವ್ಯಾಸಂಗ ವ್ಯವಸ್ಥೆಯಿದ್ದು, ಕಾಲೇಜು ಹಂತದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗಗಳಲ್ಲಿ ಸುಮಾರು 1400ರಷ್ಟು ವಿದ್ಯಾರ್ಥಿಗಳ ದಾಖಲಾತಿಯಿದೆ.

ಪ್ರಮುಖವಾಗಿ ಒಂದೇ ಒಂದು ಶೌಚಾಲಯವಿದ್ದು, ಇತ್ತ ಮಕ್ಕಳಿಗೆ ಇನ್ನೊಂದೆಡೆ ಶಿಕ್ಷಕ, ಉಪನ್ಯಾಸಕ ವೃಂದಕ್ಕೂ ತೊಂದರೆಯಾಗಿದೆ. ಕೆಲವು ವರ್ಷಗಳ ಹಿಂದೆ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯಕ್ಕೆ ಅ ಧಿಕಾರಿಗಳು ನೀರಿನ  ಸಂಪರ್ಕವೇ ನೀಡದಿರುವುದು ನಿರುಪಯುಕ್ತವಾಗಿದೆ.

ಶೌಚಾಲಯ ಸಮಸ್ಯೆಯಿಂದ ಮಕ್ಕಳು ಪರಿತಪಿಸುವಂತಾಗಿದ್ದು, ಶಾಸಕರು ಮೊದಲ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಪ್ರಾಥಮಿಕಶಾಲೆಯ ಕೊಠಡಿಗಳು ಚಿಕ್ಕದಾಗಿದ್ದು, ಮಕ್ಕಳಿಗೆಬೋಧನೆ ಕೊಠಡಿಗಳ ಸಮಸ್ಯೆಯುಂಟಾಗಿದೆ.ಅಭ್ಯಾಸಕ್ಕೆ ಹೆಚ್ಚಿನ ಕೊಠಡಿಗಳ ಅಗತ್ಯವೂ ಇದೆ. ಇನ್ನು ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿದ್ದು, ಅದಕ್ಕೂ ಪರಿಹಾರ ಕಲ್ಪಿಸಬೇಕಿದೆ.

ಜುಮಾಲಪುರ ದೊಡ್ಡ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 20ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ಜೂನ್‌-ಜುಲೈ ತಿಂಗಳು ಬಂತೆಂದರೆನೀರಿಗಾಗಿ ಅಲೆಯುವ ಪರಿಸ್ಥಿತಿಯಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಕಾಳಜಿ ವಹಿಸಬೇಕಿದೆ. ಇಲ್ಲಿಯೂ ಮಕ್ಕಳಿಗೆ ಶೌಚಾಲಯ, ಗ್ರಂಥಾಲಯ, ಕಾಂಪೌಂಡ್‌ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಸಾಕಷ್ಟು ಅನಾನುಕೂಲಗಳ ಮಧ್ಯೆಯೇ ಮಕ್ಕಳು ಪಾಠಕೇಳುವ ಅನಿವಾರ್ಯತೆಎದುರಾಗಿದೆ.

Advertisement

ಏದಲಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಶೈಕ್ಷಣಿಕವಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ ಬೋಧಿ ಸಲು ಸಿದ್ಧತೆ ನಡೆಸಿದ್ದು, ಇಲ್ಲಿ ಅಗತ್ಯವಿರುವ ಕಂಪ್ಯೂಟರ್‌, ಪ್ರೊಜೆಕ್ಟರ್‌ ಜತೆ ಸ್ಕ್ರೀನ್‌, ಯುಪಿಎಸ್‌ ಬ್ಯಾಟರಿ,ರಂಗಮಂದಿರ, ಶುದ್ಧ ನೀರು ಹಾಗೂ ಹೈಟೆಕ್‌ ಶೌಚಾಲಯ , ಟೇಬಲ್‌, ಕುರ್ಚಿ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುತ್ತಿದೆ.

ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ದತ್ತು ಪಡೆದ ಶಾಲೆಗಳಿಗೆ ಶೀಘ್ರವೇ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮಕ್ಕಳ ಕಲಿಕೆಗೆ ಪ್ರೋತ್ಸಾಹವಾಗುವ ವಾತಾವರಣ ನಿರ್ಮಾಣವಾಗಲಿ ಎನ್ನುವುದು ಶಿಕ್ಷಣ ಪ್ರೇಮಿಗಳ ಮಾತು

ಶಾಲೆಗೆ ಕಂಪ್ಯೂಟರ್‌, ಟೇಬಲ್‌ ಕುರ್ಚಿ, ರಂಗಮಂದಿರ ಸೇರಿದಂತೆ ಪ್ರಯೋಗಾಲಯದ ಬೇಡಿಕೆಯಿದೆ. ಇನ್ವರ್ಟರ್‌ ಸೇರಿದಂತೆ ನೀರಿನ ಸಿಂಟೆಕ್ಸ್‌ ಟ್ಯಾಂಕ್‌ ಅಳವಡಿಸಿದರೆ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ. – ಸಂಗಪ್ಪ ಡಿ.ವಿಶ್ವಕರ್ಮ, ಮುಖ್ಯಗುರು, ಏದಲಭಾವಿ.

ಶಾಲೆಗೆ ಹೆಚ್ಚಿನ ಕೊಠಡಿಗಳ ಅಗತ್ಯವಿತ್ತು. ಶಾಸಕರು ಬೇಡಿಕೆಗೆ ಸ್ಪಂದಿಸಿದ್ದರಿಂದ ಈಗಾಗಲೇ 4 ಕೊಠಡಿಗಳು ಮುಕ್ತಾಯ ಹಂತದಲ್ಲಿದೆ. ಗ್ರಂಥಾಲಯದ ಅಗತ್ಯವಿದೆ. ನೀರಿನ ಸಮಸ್ಯೆ ವಿಪರೀತವಾಗಿದ್ದು, ಶಾಶ್ವತ ಪರಿಹಾರ ಅಗತ್ಯವಾಗಿದೆ. ಕಾಂಪೌಂಡ್‌ ಗೋಡೆ ನಿರ್ಮಿಸಬೇಕಿದೆ.  -ಅಚ್ಚಪ್ಪ ಗೌಡ, ಮುಖ್ಯಗುರು ಜುಮಾಲಪುರ ದೊಡ್ಡ ತಾಂಡಾ.

ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 1400ರಷ್ಟು ಮಕ್ಕಳಿದ್ದಾರೆ. ಶೌಚಾಲಯ ಸಮಸ್ಯೆ ಕಾಡುತ್ತಿದ್ದು, ಕೇವಲ ಒಂದು ಶೌಚಗೃಹವಿದೆ. ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ನೀರಿನ ಸಂಪರ್ಕವಿಲ್ಲದೇ ಉಪಯೋಗಕ್ಕೆ ಬಾರದೆ ಉಳಿದಿದೆ. ಹೆಚ್ಚಿನ ಕೊಠಡಿಗಳ ಅಗತ್ಯ ಸೇರಿದಂತೆ ಬೇಡಿಕೆ ಸಲ್ಲಿಸಲಾಗಿದೆ. – ಬಸವರಾಜ ಕೊಡೇಕಲ್‌, ಪ್ರಾಚಾರ್ಯರು, ಕರ್ನಾಟಕ ಪಬ್ಲಿಕ್‌ ಶಾಲೆ

 

-ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next