ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ನಿರಂತವಾಗಿ ನಡೆಯುತ್ತಲೇ ಇರುತ್ತವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ರೂ.4.20 ಕೋಟಿ ರೂಪಾಯಿಗೂ ಹೆಚ್ಚು ಅನುದಾನದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು ಅವಳಿ ತಾಲೂಕನ್ನು ಸುಂದರ ನಗರವನ್ನಾಗಿ ಕಾಣುವಂತೆ ಮಾಡಲು ಪಣ ತೊಟ್ಟಿದ್ದೇನೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಅನುದಾನ ಹಾಕುವ ಮೂಲಕ ಅವುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದರು.
Related Articles
ಕುಳಗಟ್ಟೆ ಗ್ರಾಮದಿಂದ ನಲ್ಲೂರಿಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.10ಕೋಟಿ ಅನುದಾನ ಬಿಡುಗಡೆಯಾಗಿದೆ. ಕುಳಗಟ್ಟೆಯಿಂದ ಹೊನ್ನಾಳಿ ಗಡಿವರೆಗ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು ಸದ್ಯದರಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ರೂ. 55 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟನೆ, ರೂ.75 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಭೈರನಹಳ್ಳಿ ಗ್ರಾಮದಲ್ಲಿ ರೂ.30.20 ಲಕ್ಷ ವೆಚ್ಚದ ಸಿಸಿ ರಸ್ತೆ ರೂ.35 ಲಕ್ಷ ವೆಚ್ಚದ ಡಾಂಬರ್ ರಸ್ತೆ ಉದ್ಘಾಟನೆ. ತ್ಯಾಗದಕಟ್ಟೆ ಗ್ರಾಮದಲ್ಲಿ ರೂ.30 ಲಕ್ಷ ಮೌಲ್ಯದ ಸಿಸಿ ರಸ್ತೆ ಉದ್ಘಾಟನೆ, ರೂ.10.50 ಲಕ್ಷ ಮೌಲ್ಯದಲ್ಲಿ ನಿರ್ಮಿಸಿದ ನೂತನ ಶಾಲಾ ಕೊಠಡಿ ಉದ್ಘಾಟನೆ, ಲಿಂಗಾಪುರ ಗ್ರಾಮದಲ್ಲಿ ರೂ. 30 ಲಕ್ಷ ವೆಚ್ಚದ ಸಿಸಿ ರಸ್ತೆ ಉದ್ಘಾಟನೆ, ರೂ.90 ಲಕ್ಷ ವೆಚ್ಚದಲ್ಲಿ ಲಿಂಗಾಪುರದಿಂದ ಹನಗವಾಡಿ ಕೂಡು ರಸ್ತೆ ಕಾಮಗಾರಿ ಉದ್ಘಾಟನೆ, ಹನಗವಾಡಿ ಗ್ರಾಮದಲ್ಲಿ ರೂ.40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನು ಉದ್ಘಾಟನೆ, ರೂ.10.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಕೊಠಡಿಯನ್ನು ಉದ್ಘಾಟನೆ, ಐನೂರು ಗ್ರಾಮದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ ಉದ್ಘಾಟನೆ ಸೇರಿದಂತೆ ಒಟ್ಟು ರೂ.4.20 ಕೋಟಿ ಅಧಿಕ ವೆಚ್ಚದಲ್ಲಿ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ತಾಪಂ ಮಾಜಿ ಅಧ್ಯಕ್ಷ ಕೆ.ಎಲ್. ರಂಗನಾಥ್, ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ಹನುಮಮ್ಮ ಮಂಜಪ್ಪ, ಸದಸ್ಯರಾದ ರಮೇಶ್, ಹನುಮಂತಪ್ಪ, ಬಂಪರ್‌ಹಾಲೇಶಪ್ಪ, ಗೀತಾಮಲ್ಲೇಶಪ್ಪ, ಬಗರ್ ಹುಕ್ಕುಂ ಕಮಿಟಿ ಸದಸ್ಯ ಎಂ.ಆರ್.ಮಹಾಂತೇಶ್, ಎಟಿಎಂ ಬಸವರಾಜ್, ಕೆ.ಬಿ.ಕರಿಬಸಪ್ಪ, ಸಿಸಿ ಮಂಜುನಾಥ್, ಚೀಲೂರು ರುದ್ರಪ್ಪ ಇದ್ದರು.