Advertisement

ಅಭಿವೃದ್ಧಿ ಕಾಮಗಾರಿ ಪೂರ್ಣ; ಮೇ 24ರಂದು ಉದ್ಘಾಟನೆ

10:46 AM May 23, 2022 | Team Udayavani |

ಕೈಕಂಬ: ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನು ದಾನದಲ್ಲಿ ಬಡಗ ಎಡಪದವು ಗ್ರಾ.ಪಂ. ವ್ಯಾಪ್ತಿಯ ಎಡಪದವು – ಪೂಪಾಡಿಕಲ್ಲು -ಉರ್ಕಿ – ಮಿಜಾರು (ಬೆಳ್ಳೆಚಾರು) ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮೀಣ ಪ್ರದೇಶದ ಬಹುಪಯೋಗಿ ರಸ್ತೆಯನ್ನು ಮೇ 24ರಂದು ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕ ಡಾ| ಭರತ್‌ ಶೆಟ್ಟಿ ವೈ. ಉದ್ಘಾಟಿಸಲಿದ್ದಾರೆ.

Advertisement

ಬಡಗ ಎಡಪದವು ಗ್ರಾ.ಪಂ. ವ್ಯಾಪ್ತಿಯ ಉರ್ಕಿ, ಶಾಸ್ತಾವು, ತಿಪ್ಲಬೆಟ್ಟು ಪ್ರದೇಶ ಜನರಿಗೆ ಈ ರಸ್ತೆ ಅತೀ ಪ್ರಾಮುಖ್ಯವಾಗಿದ್ದು, ಸುಮಾರು 8 ವರ್ಷಗಳಿಂದ ದುರಸ್ತಿಯಾಗದೇ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ರಿಕ್ಷಾ ಚಾಲಕರಿಗೆ, ದ್ವಿಚಕ್ರವಾಹನ ಚಾಲಕರಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಕ್ಲಿಷ್ಟಕರವಾಗಿತ್ತು. ಸ್ಥಳೀಯ ಜನರು ಹಾಗೂ ಪಂಚಾಯತ್‌ ಆಡಳಿತದವರ ಮನವಿಗೆ ಸ್ಪಂದಿಸಿದ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಈ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು.

ಈ ಯೋಜನೆಯಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್‌, ಡಾಮರು ಕಾಮಗಾರಿ, ಚರಂಡಿ, ಸುರಕ್ಷಾ ಕ್ರಮದ ಫಲಕಗಳು ಸೇರಿ ವೆ. ಬೆಳ್ಳೆಚಾರ್‌ನಿಂದ ಉರ್ಕಿ ತನಕ 2.6 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದರಲ್ಲಿ 600 ಮೀಟರ್‌ಗಳಷ್ಟು ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿದ್ದು, 7 ಮೀಟರ್‌ಗಳಷ್ಟು ವಿಸ್ತರಿಸಲಾಗಿದೆ. ಉಳಿದ ರಸ್ತೆಗೆ ಡಾಮರು ಹಾಕಲಾಗಿದ್ದು, 5.5 ಮೀಟರ್‌ ವಿಸ್ತರಿಸಲಾಗಿದೆ. ಈ ರಸ್ತೆ ಸಮಸ್ಯೆಯ ಬಗ್ಗೆ ಹಿಂದೆ ‘ಉದಯ ವಾಣಿ ಸುದಿನ’ ವರದಿ ಮಾಡಿ ಗಮನ ಸೆಳೆದಿತ್ತು.

ನಗರದ ವ್ಯವಸ್ಥೆ ಇಲ್ಲಿ ಅಳವಡಿಕೆ

ಲತ್ರೋಟ್‌ ಎಂಬಲ್ಲಿ ಕಾಂಕ್ರೀಟ್‌ ಕಾಮಗಾರಿಯ ವೇಳೆ ಕೊಳವೆ ಬಾವಿಯ ಪಂಪ್‌ ಹೌಸ್‌ ಹಾಗೂ ಪೈಪ್‌ಲೈನ್‌ಗಳು ಬದಿಯಲ್ಲಿ ಇದ್ದು, ರಸ್ತೆಯ ವಿಸ್ತರಣೆಗೆ ತೊಂದರೆಯಾಗಿತ್ತು. ಕಂಬ, ಪಂಪ್‌ ಹೌಸ್‌ ಅನ್ನು ಅಲ್ಲೇ ಹತ್ತಿರಕ್ಕೆ ಸ್ಥಳಾಂತರಿಸಿ, ತಡೆಗೋಡೆ ನಿರ್ಮಿಸಿ, ಕೊಳವೆಬಾವಿಯನ್ನು 4×4 ಸ್ಲ್ಯಾಬ್‌ ಮಾಡಿ ಅಗತ್ಯವಿರುವಾಗ ತೆಗೆದು ಮುಚ್ಚುವ ರೀತಿ ಅಭಿವೃದ್ಧಿ ಪಡಿಸಲಾಗಿದೆ. ನಗರದ ರಸ್ತೆಗಳಲ್ಲಿ ಇಂತಹ ವ್ಯವಸ್ಥೆಯನ್ನು ಇಲ್ಲಿ ಕಾಣಬಹುವುದಾಗಿದೆ.

Advertisement

2 ರಾ. ಹೆ. ಗಳನ್ನು ಸಂಪರ್ಕಿಸುವ ರಸ್ತೆ

ಮೂಡುಬಿದಿರೆ-ಮಂಗಳೂರು ರಾ. ಹೆದ್ದಾರಿಗೆ ಇದು ಸಂಪರ್ಕ ರಸ್ತೆಯಾಗಿದೆ. ಈ ರಸ್ತೆ ಮುಂದೆ ಮೂಲರ ಪಟ್ನ -ಆರಳ – ಸೊರ್ನಾಡ್‌ ಮೂಲಕ ಬಿ.ಸಿ. ರೋಡ್‌ ಗೆ ಹೋಗುತ್ತದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಮೂಡುಬಿದಿರೆ – ಮಂಗಳೂರಿನಿಂದ ಎಡಪದವು – ಪೂಪಾಡಿಕಲ್ಲು – ಉರ್ಕಿ – ಬೆಳ್ಳೆಚಾರು – ಮೂಲರಪಟ್ನ – ಅರಳ – ಸೊರ್ನಾಡ್‌ ಆಗಿ ಬಿ.ಸಿ.ರೋಡ್‌ನ‌ಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ.

ಪಿಡಬ್ಲ್ಯುಡಿ ಅನುದಾನದಿಂದ ಅಭಿವೃದ್ಧಿ

ಎಡಪದವು ಪೂಪಾಡಿಕಲ್ಲು-ಬೆಳ್ಳೆಚಾರು ರಸ್ತೆ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಒಟ್ಟು 2.6ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಸಂಜೀವ ನಾಯ್ಕ, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಜನರ ಬೇಡಿಕೆಗೆ ಸ್ಪಂದನೆ

ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಪರ್ಕ ರಸ್ತೆಗಳು ಪ್ರಾಮುಖ್ಯ ಪಡೆದಿವೆ. ಬಡಗ ಎಡಪದವು ಗ್ರಾ.ಪಂ. ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜನರ ಬೇಡಿಕೆಗೆ ಸ್ಪಂದಿಸಲಾಗಿದೆ. ರಸ್ತೆ ಸಮರ್ಪಕವಿಲ್ಲದೆ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಜನರಿಗೆ ಹೆಚ್ಚು ತೊಂದರೆಯಾಗುತ್ತಿತ್ತು. ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿತ್ತು. ಇದು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಅತೀ ಮುಖ್ಯವಾಗಿದ್ದು, ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. – ಡಾ| ಭರತ್‌ ಶೆಟ್ಟಿ ವೈ., ಶಾಸಕರು ಮಂಗಳೂರು ನಗರ ಉತ್ತರ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next