Advertisement

ಅಭಿವೃಧಿ ಕುರಿತು ಪರಿಶೀಲನೆ ನಡೆಸಿದ ಶಾಸಕ ಸಿದ್ದು ಸವದಿ

02:55 PM Jan 23, 2022 | Team Udayavani |

ರಬಕವಿ-ಬನಹಟ್ಟಿ: ಜನಪ್ರತಿನಿಧಿಗಳ ನಡೆ ವಾರ್ಡ್ ಕಡೆ ಕಾರ್ಯಕ್ರಮದ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಬನಹಟ್ಟಿಯ ವಿವಿಧ ವಾರ್ಡಗಳಲ್ಲಿ ಭಾನುವಾರ ಬೆಳಗ್ಗೆ ಶಾಸಕ ಸಿದ್ದು ಸವದಿ ಸೇರಿದಂತೆ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರ ತಂಡ ವಿಕ್ಷಣೆ ಮಾಡಿ ನಗರದ ಅಭಿವೃಧಿ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

Advertisement

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿದ್ದು ಸವದಿ, ನಗರಸಭೆಯಲ್ಲಿ ವಿಶೇಷ ಅನುದಾನ 35 ಕೋಟಿ ಮಂಜೂರಾಗಿದ್ದು, ಅದರಲ್ಲಿ ಯಾವ ಯಾವ ಕಾಮಗಾರಿ ಹಾಕಿಕೊಳ್ಳಬೇಕು ಎಂಬ ಸಮೀಕ್ಷೆಯನ್ನು ವಾರ್ಡ್ ನ ಮೂಲಭೂತ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಖುದ್ದಾಗಿ ಪರೀಶೀಲಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಬೇಸಿಗೆ ಸಂದರ್ಭದಲ್ಲಿ ನೀರಿನ ತೊಂದರೆ ನಿವಾರಿಸಲು ಬನಹಟ್ಟಿ ಕೆರೆ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುವುದು. ಒಟ್ಟಾರೆ ನಗರಸಭೆಯಾದ್ಯಂತ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಅಬಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ, ಪೌರಾಯುಕ್ತ ಶ್ರೀನಿವಾಸ ಜಾಧವ, ರಾಜೇಂದ್ರ ಅಂಬಲಿ, ಪ್ರವೀಣ ಧಬಾಡಿ, ಜಯಶ್ರೀ ಬಾಗೇವಾಡಿ, ಕಾಡು ಕೊಣ್ಣೂರ, ಶಂಕರ ಅಂಗಡಿ, ಚನ್ನು ಮಾಲಾಪೂರ, ವಿದ್ಯಾ ಧಬಾಡಿ, ನಗರಸಭೆ ಅಧಿಕಾರಿಗಳಾದ ಬಿ.ಎಂ.ಡಾಂಗೆ, ಬಸವರಾಜ ಶರಣಪ್ಪನವರ, ಎಂ. ಎಂ. ಮುಘಳಖೋಡ, ರಾಜಕುಮಾರ ಹೊಸೂರ, ಶೊಭಾ ಹೊಸಮನಿ, ಸಂಗೀತಾ ಕೋಳಿ, ಸುರೇಂದ್ರ ಪರಕಾಳೆ, ಸದಾಸಿವ ಉಂಕಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next