Advertisement
ಅಂಗೀಕಾರಗೊಂಡ ಯೋಜನೆಗಳು1. ಕ್ಯೂ ಕಾಂಪ್ಲೆಕ್ಸ್:
ವರ್ಷ ಕಳೆದಂತೆ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ರತ ನಿರ್ವಹಣೆಗಾಗಿ ತಿರುಚನೂರ್‌ನಲ್ಲಿ 23.5 ಕೋಟಿ ರೂ. ವೆಚ್ಚದಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ.
2. ಅವಳಿ ರಸ್ತೆಯಲ್ಲಿ ಸುರಕ್ಷ ಕ್ರಮ
ತಿರುಮಲಕ್ಕೆ ಹೋಗುವ ಮತ್ತು ಬರುವ ಅವಳಿ ಘಾಟ್ ರಸ್ತೆಯಲ್ಲಿ ಪ್ರಯಾಣಿಕರ ಸುರಕ್ಷ ಕ್ರಮ ಕೈಗೊಳ್ಳಲು 24 ಕೋಟಿ ರೂ. ವೆಚ್ಚದ ಯೋಜನೆ.
3. ಶ್ರೀನಿವಾಸ ಸೇತು
ತಿರುಪತಿಯಲ್ಲಿ ಈಗಾಗಲೇ ಆರಂಭವಾಗಿರುವ ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರಸ್‌ವೇ ಕಾಮಗಾರಿಗಾಗಿ ನಿರ್ಮಾಣ ಕಂಪೆನಿಗೆ 118 ಕೋಟಿ ರೂ. ಬಿಡುಗಡೆ.
4. ವೈದ್ಯಕೀಯ ಸೌಲಭ್ಯ
ಶ್ರೀ ಪದ್ಮಾವತಿ ಮಕ್ಕಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಸುಧಾರಣೆಗಾಗಿ 75.86 ಕೋಟಿ ರೂ. ಅನುದಾನ.
5. ತುಪ್ಪ ಉತ್ಪಾದನೆ ಘಟಕ
ತಿರುಪತಿಯ ಎಸ್‌ವಿ ಗೋಶಾಲೆಯ ಆವರಣದಲ್ಲಿ 4.25 ಕೋಟಿ ರೂ. ವೆಚ್ಚದಲ್ಲಿ ತುಪ್ಪ ಉತ್ಪಾದನೆ ಘಟಕ ಸ್ಥಾಪನೆ.
6. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ
ತಿರುಪತಿಯಲ್ಲಿ ಬಕುಳಾಮಾತಾ ದೇವಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 9.85 ಕೋಟಿ ರೂ., ಎಸ್‌ವಿ ಆಯುರ್ವೇದ ಆಸ್ಪತ್ರೆಗೆ 14 ಕೋಟಿ ರೂ., ಎಸ್‌ವಿಆರ್‌ಆರ್ ಸರಕಾರಿ ಆಸ್ಪತ್ರೆಯಲ್ಲಿ ಟಿಬಿ ವಾರ್ಡ್ ನಿರ್ಮಾಣಕ್ಕೆ 2.2 ಕೋಟಿ ರೂ., ಎಸ್‌ವಿ ಮ್ಯೂಸಿಕ್ ಕಾಲೇಜಿನಲ್ಲಿ ಹೊಸ ಹಾಸ್ಟೆಲ್ ವಿಭಾಗ ಸ್ಥಾಪನೆಗೆ 11 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.