Advertisement

ಗುಲಾಮಗಿರಿಯಿಂದ ಹೊರ ಬಂದರೆ ಅಭಿವೃದ್ಧಿ

12:40 AM Jan 26, 2020 | Lakshmi GovindaRaj |

ಬೆಂಗಳೂರು: ಸಮಾಜವು ಗುಲಾಮಗಿರಿಯಿಂದ ಹೊರಬರದ ಹೊರತು ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಅಕ್ಕನಮನೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಅಕ್ಕನಮನೆ ಪ್ರತಿಷ್ಠಾನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇಸಿ ದಿಬ್ಬಣ ಹಾಗೂ ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಮೇಲ್ವರ್ಗಗಳು ಕೆಲ ಮೌಡ್ಯ, ಕಟ್ಟುಪಾಡುಗಳು, ಕಂದಾಚಾರಗಳನ್ನು ಹುಟ್ಟು ಹಾಕಿದ್ದಾರೆ. ಇಂದಿಗೂ ಸಮಾಜದಲ್ಲಿ ಅವುಗಳು ಜೀವಂತವಾಗಿವೆ. ಇದರಿಂದ ಮೇಲ್ಜಾತಿಯವರನ್ನು ಕಂಡರೇ ಇಂದಿಗೂ ಬುದ್ದೀ, ಸಾರ್‌ ಎಂದು ಮಾತನಾಡಿಸುವುದು, ಕೆಳಜಾತಿಯವರನ್ನು ಕಂಡರೇ ಲೇ ಎಂದು ಮಾತನಾಡಿಸುತ್ತಾರೆ ಎಂದು ಹೇಳಿದರು.

ಸಮಾಜದ ಬಹುಸಂಖ್ಯಾಂತರು ಚಾತುರ್ವಣ ಪದ್ಧತಿಯಿಂದ ಶಿಕ್ಷಣ ವಂಚಿತರಾಗಿದ್ದಾರೆ. ಇದರಿಂದ ಇಂದಿಗೂ ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಾಧ್ಯವಾಗಿಲ್ಲ. ಸಮಾಜದ ಎಲ್ಲಾ ಜನರರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗದೇ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದರು. ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿಗಳ ವರ್ಗದವರನ್ನು ಖುಷಿ ಪಡೆಸಲು ನಾನಾ ಶರಣರ ಜಯಂತಿ ಮಾಡಲಿಲ್ಲ.

ಜಾತಿ ವರ್ಗ ರಹಿತವಾಗಿರುವರು ಮಾತ್ರ ಮೀರಿದವರು ಶರಣ ಶರಣೆಯರು. ಅಂತಹವರ ಜಯಂತಿಗಳನ್ನು ಸರ್ಕಾರ ಮಾಡಿದರೆ ಕೋಟಿ ಜನರಿಗೆ ಅವರ ಬಗ್ಗೆ ಗೊತ್ತಾಗುತ್ತದೆ ಎಂದು ಜಯಂತಿಗಳಿಗೆ ಆದ್ಯತೆ ನೀಡಿದೆ. ಬದುಕಿನಲ್ಲಿ ಸಮಾಜಕ್ಕೆ ಏನು ಮಾಡಿದೆ ಎಂಬ ಪ್ರಶ್ನೆ ಹಾಕಬೇಕು. ಉತ್ತರ ಸಮಾಧಾನ ನೀಡಿದರೆ ಬದುಕು ಸಾರ್ಥಕವಾಗುತ್ತದೆ.

ಮನುಷ್ಯ ಮನುಷ್ಯನಾಗಿ ಬದುಬೇಕು. ಚರಿತ್ರೆಯಲ್ಲಿ ದಾಖಲಾದ ಯುವಪುರುಷರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ತಿಳಿಸಿದರು. ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ದೇಸಿಯತೇ ಎನ್ನುವುದು ಹಳ್ಳಿಯಲ್ಲಿ ಮಾತ್ರ ಇರುತ್ತೆ ಅನ್ನುವುದು ಮೂಢನಂಬಿಕೆ.

Advertisement

ಬಹುಸಂಸ್ಕೃತಿಗಳ ಸ್ವರೂಪ ಹೊಂದಿರುವುದೇ ದೇಸಿ ಸಂಸ್ಕೃತಿ. ಸಾಮಾನ್ಯ ಸಂವೇದನೆ ಅರ್ಥ ಮಾಡಿಕೊಳ್ಳುವವರು ಹಾಗೂ ಕಟ್ಟಕಡೆಯ ವ್ಯಕ್ತಿಗೆ ಮೊಟ್ಟಮೊದಲು ಆದ್ಯತೆ ನೀಡುವವರೇ ನಿಜವಾದ ದೇಶಪ್ರೇಮಿ. ಓದಿದವರೆಲ್ಲ ವಿವೇಕಿಗಳಲ್ಲ, ಓದದೇ ಇರುವವರು ಅವಿವೇಕಿಗಳಲ್ಲ ಎಂದು ಹೇಳಿದರು. ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್‌, ವೈದ್ಯೆ ಡಾ.ಪದ್ಮನಿ ಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next