ಮಾಲೂರು: ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷಗಳ ಪ್ರತಿಷ್ಠೆ ತೋರಿಸಿ. ಜನಪ್ರತಿ ನಿಧಿಗಳು ಪಕ್ಷಾತೀತವಾಗಿ, ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಯ ಕಡೆ ಶ್ರಮಿಸಿದರೆ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ತಾಲೂಕಿನ ಡಿ.ಎನ್.ದೊಡ್ಡಿ ಗ್ರಾಮದಲ್ಲಿ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿಯಾಗಬೇಕಾದರೆ ಜನಪ್ರತಿನಿಧಿಗಳು ಚುನಾ ವಣೆ ಸಮಯದಲ್ಲಿ ಮಾತ್ರ ಪಕ್ಷ ಪ್ರತಿಷ್ಠೆ ಮಾಡಬೇಕು. ನಂತರ ಪಕ್ಷಾತೀತವಾಗಿ ಸರ್ಕಾರದ ಅನುದಾನ ತಂದು ಒಗ್ಗಟ್ಟಿನಿಂದ ದುಡಿಯಬೇಕು. ಪಕ್ಷಪಾತ ಮಾಡಿಕೊಂಡು ಹೋದರೆ ಮತ ಹಾಕಿ ನಮ್ಮನ್ನು ಆಯ್ಕೆ ಮಾಡಿರುವ ಜನರಿಗೆ ನಾವು ಯಾವ ಸೇವೆಯೂ ಮಾಡಲು ಸಾಧ್ಯವಾಗುವುದಿಲ್ಲ. ಪ್ರತಿ ಗ್ರಾಮದಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆ ಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ನೂತನವಾಗಿ ಮಳಿಗೆಗಳನ್ನು ನಿರ್ಮಾಣ ಮಾಡಿ ಕಂದಾಯ ವಸೂಲಿ ಮಾಡುವುದರಿಂದ ಪಂಚಾಯಿತಿಗೆ ಆರ್ಥಿಕ ಅಭಿವೃದ್ಧಿ ಹೆಚ್ಚುತ್ತದೆ ಎಂದರು.
ಅಭಿವೃದ್ಧಿಗೆ ಸಹಕಾರಿ: ಶಾಸಕ ಕೆ.ವೈ.ನಂಜೇ ಗೌಡ ಮಾತನಾಡಿ, ಮಾಸ್ತಿ ಮತ್ತು ದೊಡ್ಡಿ ಗ್ರಾಪಂ ಆರ್ಥಿಕವಾಗಿ ತುಂಬಾ ಹಿಂದೆ ಉಳಿದಿದ್ದು, ಗ್ರಾಮ ಅಭಿವೃದ್ಧಿಗೆ ಸಂಸದರು ಮತ್ತು ಶಾಸಕರ ಅನುದಾನದಲ್ಲಿ ಹೆಚ್ಚಿಗೆ ಕಾರ್ಯಕ್ರಮ ನಡೆಸಲಾಗುವುದು. ದೊಡ್ಡಿ ಗ್ರಾಮದ ಸರ್ಕಾರಿ ಜಮೀನಿ ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿ ರುವ ಅಂಗಡಿ ತೆರವುಗೊಳಿಸಿ, ಕಂದಾಯ ಇಲಾಖೆ ವಶಪಡಿಸಿ ಕೊಂಡು ಸರ್ವೆ ಮಾಡಿಸಿ ನೂತನವಾಗಿ ಗ್ರಾಪಂನಿಂದ ಮಳಿಗೆ ನಿರ್ಮಾಣ ಮಾಡಿದರೆ ಗ್ರಾಪಂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ. ಈಗಾಗಲೇ ತಾಲೂಕು ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ತಾಲೂಕು ದಂಡಾಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ಜಮೀ ನನ್ನು ತಮ್ಮ ವಶಕ್ಕೆ ಪಡೆದು ಪಂಚಾಯಿತಿಯ ಸುಪರ್ದಿಗೆ ಒಳಪಡಿಸಬೇಕು ಎಂದರು.
ತಹಶೀಲ್ದಾರ್ ರಮೇಶ್, ತಾಪಂ ಇಒ ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷ ಚಿಕ್ಕತಿಮ್ಮರಾಯಪ್ಪ, ಉಪಾಧ್ಯಕ್ಷೆ ರಾಧಾ, ಸದಸ್ಯ ಶ್ರೀನಾಥ್, ಪುರಸಭಾ ಸದಸ್ಯ ಎ.ರಾಜಪ್ಪ, ಮಂಜುನಾಥ್, ಮುಖಂಡರ ಬಾಳಿಗಾನಹಳ್ಳಿ ಶ್ರೀನಿವಾಸ್, ಅಗ್ರಿ ನಾರಾಯಣಪ್ಪ, ಎಂ.ಆಂಜಿನಪ್ಪ, ಸಿ.ಲಕ್ಷ್ಮೀ ನಾರಾಯಣ್, ಸಂಪಂಗೆರೆ ರಘು, ಬಂಟಹಳ್ಳಿ ನಾರಾಯಣಪ್ಪ, ಪಾಲಾಕ್ಷಬಾಬು, ರಾಜಪ್ಪ, ಕೃಷ್ಣಪ್ಪ, ವಸಂತ್‌ಕುಮಾರ್, ನವೀನ್, ವೇಣು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್, ಚನ್ನರಾಯಪ್ಪ, ಮುಜರಾಯಿ ಇಲಾಖೆ ಹರಿ ಪ್ರಸಾದ್, ಪಿಡಿಒ ಲೋಕೇಶ್, ಕಾರ್ಯದರ್ಶಿ ದಯಾನಂದರೆಡ್ಡಿ ಇದ್ದರು.