Advertisement

ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ: ಪ್ರಿಯಾಂಕ್‌

02:47 PM Jun 08, 2022 | Team Udayavani |

ಚಿತ್ತಾಪುರ: ದೇಶದ ಅಭಿವೃದ್ಧಿ ಶಿಕ್ಷಣವನ್ನೇ ಅವಲಂಬಿಸಿದೆ. ಏನೇ ಬದಲಾವಣೆ ಕಾಣಬೇಕಾದರೂ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ತಾಲೂಕಿನ ಮುಗುಟಾ ಗ್ರಾಮದಲ್ಲಿ 1.22 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರ ಗಟ್ಟಿಯಾಗಬೇಕಾದರೆ ಮಾನವ ಸಂಪನ್ಮೂಲ ಗಟ್ಟಿಯಾಗಿರಬೇಕು. ಆ ಗಟ್ಟಿತನ ಪ್ರತಿಯೊಬ್ಬರು ಶಿಕ್ಷಣ ಪಡೆಯುವುದರಿಂದ ಬರುತ್ತದೆ ಎಂದರು.

ಬರೀ ಬಾಯಿ ಮಾತಿನಿಂದ ಅಭಿವೃದ್ಧಿ ಅಸಾಧ್ಯ ಎನ್ನುವುದು ಮನವರಿಕೆ ಯಾಗಬೇಕು. ಶೈಕ್ಷಣಿಕ ಅಭಿವೃದ್ಧಿ ಪ್ರಥಮಾದ್ಯತೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷ ಸಿದ್ಧುಗೌಡ ಅಫಜಲಪುರಕರ್‌ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಕೇವಲ ಶಾಸಕರಲ್ಲ, ಅವರಲ್ಲಿ ಒಬ್ಬ ಶಿಕ್ಷಣ ಪ್ರೇಮಿ ಇದ್ದಾರೆ. ಹೀಗಾಗಿ, ಅವರು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದರು.

ಜಿಪಂ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಹಿತ ಕಾಪಾಡುವಲ್ಲಿ ವಿಫಲವಾಗಿವೆ. ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನೆಡೆಯಾಗಿದೆ ಎಂದು ಹೇಳಿದರು.

Advertisement

ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಅವರನ್ನು ಬಿಜೆಪಿಯವರು ಸೋಲಿಸಲು ಓಡಾಡುತ್ತಿದ್ದರಂತೆ. ಮೊದಲು ಅವರು ಸರಿಯಾದ ಅಭ್ಯರ್ಥಿಯನ್ನ ಹೆಸರಿಸಲಿ ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ಯಲ್ಲಾಲಿಂಗ ಅವರು 11000ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಿದ ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಯ್ಯಮ್ಮ, ಸುನೀಲ ದೊಡ್ಡಮನಿ, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಬೆಂಕಿ, ಯಲ್ಲಾಲಿಂಗ ದಿಡ್ಡಿಮನಿ, ಮನ್ಸೂರು ಪಟೇಲ್‌, ಶಿವರಾಜ ಪಾಟೀಲ, ಜಗನ್ನಾಥ ಪೂಜಾರಿ, ಅಸೂದ್‌ ಪಟೇಲ್‌, ಸೈಯದ್‌ ಪಟೇಲ್‌, ಈಶ್ವರಯ್ಯ ಮಠಪತಿ, ಅಯ್ಯೂಬ್‌ ಪಟೇಲ್‌, ಮಹೆಮೂದ ಪಟೇಲ್‌, ರಾಹುಲ್‌ ಹದನೂರ, ಗುಂಡುಗೌಡ ಹದನೂರ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next