Advertisement

ಕ್ರಿಯಾಶೀಲತೆಯಿಂದ ದೇಶ ಅಭಿವೃದ್ಧಿ

11:01 AM Sep 09, 2017 | Team Udayavani |

ಕಲಬುರಗಿ: ಎನ್‌ಎಸ್‌ಎಸ್‌ ಎಂದರೆ ನಾನು ಸೇವೆಗೆ ಸಿದ್ಧ ಎನ್ನುವ ಅರ್ಥ ನೀಡುತ್ತದೆ. ಗ್ರಾಮ, ನಗರಗಳನ್ನು ಹಸಿರುಮಯಗೊಳಿಸಿ ಸ್ವತ್ಛವಾಗಿಟ್ಟುಕೊಂಡರೆ ಆರೋಗ್ಯವಾಗಿರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು, ಪೋಷಿಸಿ ಪರಿಸರ ರಕ್ಷಿಸಬೇಕು. ಜೀವನದಲ್ಲಿ ಕೆಟ್ಟ ವಿಚಾರಗಳಿಗೆ ಆಸ್ಪದ ನೀಡದೆ ಮಹತ್ತರ ಕಾರ್ಯ ಕೈಗೊಂಡು ಉತ್ತಮ ನಾಗರಿಕರು ಎನಿಸಿಕೊಳ್ಳಬೇಕೆಂದು ಪಿಯು ಡಿಡಿ ಬಸವರಾಜ ಡಿ. ಕಲಬುರಗಿ ಹೇಳಿದರು.

Advertisement

ಸೂಪರ್‌ ಮಾರ್ಕೇಟ್‌ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2017-18 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಎನ್‌ಎಸ್‌ಎಸ್‌ ಕಾರ್ಯಚಟುವಟಿಕೆಗಳ ಆರಂಭೋತ್ಸವ ಹಾಗೂ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಮೊಹ್ಮದ ಅಲ್ಲಾವುದ್ದಿನ್‌ ಸಾಗರ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಂದೆ, ತಾಯಿ , ಗುರುಹಿರಿಯರನ್ನು ಗೌರವ ಭಾವನೆಯಿಂದ ಕಾಣಿ. ಹುಟ್ಟಿದಾಗಿನಿಂದ ಯಾರೂ ದಡ್ಡರಲ್ಲ, ಯಶಸ್ಸು ಸಾಧಿಸಲು ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು. ದೇಶ ಅಭಿವೃದ್ಧಿ ಆಗಬೇಕಾದರೆ ಯುವಕರು ಕ್ರೀಯಾಶೀಲರಾದಾಗ ಮಾತ್ರ ಯಶಸ್ಸು ಸಾಧ್ಯ ಎಂದರು. 

ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ವಿಜೇತ ಮೊಹ್ಮದ ಅಲ್ಲಾವುದ್ದಿನ್‌ ಸಾಗರ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ಲಭಿಸಿರುವುದು ಕಾಲೇಜಿಗೆ ಹೆಮ್ಮೆಯ ವಿಷಯ, ಜೀವನದಲ್ಲಿ ನಿರಾಸೆಯಾಗದೆ ಆಶಾವಾದಿಯಾಗಿ ಸಾಧನೆಯತ್ತ ಸಾಗಬೇಕು.

ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಈ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ಸಮರ್ಪಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವಶರಣಪ್ಪ ಮುಳೆಗಾಂವ ಮಾತನಾಡಿ, ಎಲ್ಲರ ಸಹಕಾರದಿಂದ ಕಾಲೇಜು
ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣದೆಡೆಗೆ ಒತ್ತು ನೀಡಿ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆಯನ್ನು
ಗಣನೀಯವಾಗಿ ಹೆಚ್ಚಿಸಲಾಗುವುದು. 

ಸಂಸ್ಥೆಯಲ್ಲಿ ಇಬ್ಬರು ಉಪನ್ಯಾಸಕರು ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದವರಾಗಿದ್ದಾರೆ ಎಂದರು.
ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಅಶೋಕ ತಳಕೇರಿ, ಮಹಿಳಾ ಆಪ್ತ ಸಮಾಲೋಚಕಿ ಸಂಗೀತಾ ಕಟ್ಟಿಮನಿ,
ಮಹಿಳಾ ಪ್ರತಿನಿಧಿ ಪ್ರೀತಿ ಹಾಜರಿದ್ದರು. ಭಾಗ್ಯಶ್ರೀ ಪ್ರಾರ್ಥನೆ, ಝಡ್‌. ಎನ್‌. ಜಾಗೀರದಾರ ಸ್ವಾಗತ, ದೇವಿದಾಸ ಪವಾರ ನಿರೂಪಣೆ, ಪಂಡಿತರಾವ ಪಾಟೀಲ ವಂದಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next