ಹಳ್ಳಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಭಾಗ್ಯ

ಅಫಜಲಪುರ ಶಾಸಕರಿಂದ ಮೂರು ಶಾಲೆ ದತ್ತು,ಪ್ರಗತಿ ನಿರೀಕ್ಷೆಯಲ್ಲಿ ಕಲ್ಲೂರ, ಕರಜಗಿ, ಮಲ್ಲಾಬಾದ್‌ ಶಾಲೆ

Team Udayavani, Dec 25, 2020, 5:18 PM IST

ಹಳ್ಳಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಭಾಗ್ಯ

ಕಲಬುರಗಿ: ಸರ್ಕಾರಿ ಶಾಲೆಗಳ ಬಲಪಡಿಸುವ ನಿಟ್ಟಿನಲ್ಲಿ ಅಫಜಲಪುರ ಶಾಸಕ ಎಂ.ವೈ.ಪಾಟೀಲ್‌ ತಮ್ಮ ಮತಕ್ಷೇತ್ರದ ವ್ಯಾಪ್ತಿಯ ಮೂರು ಶಾಲೆಗಳನ್ನು ದತ್ತು ಪಡೆದಿದ್ದಾರೆ. ತಮ್ಮ ಸ್ವಂತ ಊರಾದ ದೇಸಾಯಿ ಕಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಕರಜಗಿ, ಮಲ್ಲಾಬಾದ್‌ಗ್ರಾಮಗಳ ಶಾಲೆಗಳನ್ನು ದತ್ತು ಪಡೆದು 1.20 ಲಕ್ಷ ರೂ. ವೆಚ್ಚದಲ್ಲಿ ಕಾಯಕಲ್ಪ ಕಲ್ಪಿಸಲು ಮುಂದಾಗಿದ್ದಾರೆ.

ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಆಯ್ಕೆಮಾಡಿಕೊಂಡಿದ್ದು, ಪ್ರಾಥಮಿಕ ಶಾಲೆ, ಪ್ರೌಢ ಶಾಲೆಹಾಗೂ ಪದವಿಪೂರ್ವ ಕಾಲೇಜು ಒಂದೆಡೆ ಇವೆ.ಕೆಪಿಎಸ್‌ ಶಾಲೆಗೆ ಕಾಯಕಲ್ಪ ನೀಡಲು 60 ಲಕ್ಷರೂ. ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ.ಶಾಲಾ ಕಾಂಪೌಂಡ್‌ ನಿರ್ಮಾಣ, ಗ್ರಂಥಾಲಯ,ವಿಜ್ಞಾನ ಪ್ರಯೋಗಾಲಯ ಮತ್ತು ಆಟದ ಸಾಮಾಗ್ರಿಒದಗಿಸಲು ಯೋಜಿಸಲಾಗಿದೆ. ಜತೆಗೆ ಕೈತೋಟಮತ್ತು ಮಕ್ಕಳಿಗೆ ಆಟದ ಮೈದಾನ ಅಭಿವೃದ್ಧಿಪಡಿಸಲೂಶಾಸಕರು ಯೋಜನೆ ಹಾಕಿಕೊಂಡಿದ್ದಾರೆ. 60 ಲಕ್ಷರೂ.ಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿನಿಯೋಗಿಸಲಾಗುತ್ತಿದೆ.

ಸ್ವಗ್ರಾಮದಲ್ಲಿ 2 ಶಾಲೆಗಳು: ದೇಸಾಯಿ ಕಲ್ಲೂರ ಗ್ರಾಮವು ಶಾಸಕ ಎಂ.ವೈ.ಪಾಟೀಲ್‌ ಅವರ ಸ್ವಗ್ರಾಮವಾಗಿದ್ದು, ಇಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢ ಶಾಲೆಗಳು ಬೇರೆ-ಬೇರೆಆವರಣ ಹೊಂದಿವೆ. ಈ ಎರಡೂ ಶಾಲೆಗಳನ್ನುಶಾಸಕರು ದತ್ತು ಸ್ವೀಕಾರ ಮಾಡಿದ್ದಾರೆ. ಪ್ರತಿಶಾಲೆಗೆ ಕಾರ್ಯಕಲ್ಪ ಕಲ್ಪಿಸಲು ತಲಾ 20 ಲಕ್ಷ ರೂ. ಮೀಸಲಿಡಲು ಶಾಸಕರು ಮುಂದಾಗಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನ ಅಭಿವೃದ್ಧಿ, ಕಾಂಪೌಂಡ್‌ ನಿರ್ಮಾಣ, ಗ್ರಂಥಾಲಯಸ್ಥಾಪನೆ, ವಿಜ್ಞಾನ ಉಪಕರಣಗಳ ಖರೀದಿಗೆ ಅನುದಾನಬಳಸಲಾಗುತ್ತಿದೆ. ಅದೇ ರೀತಿ ಪ್ರೌಢಶಾಲೆಗೂ ವಿಜ್ಞಾನ ಪ್ರಯೋಗಾಲದ ಸಾಮಾಗ್ರಿ ಖರೀದಿ, ಆಟದ ಮೈದಾನ ಅಭಿವೃದ್ಧಿ, ಗ್ರಂಥಾಲಯಕ್ಕೆ ಪುಸಕ್ತಗಳ ಖರೀದಿ, ಕಾಂಪೌಂಡ್‌ ಕಾಮಗಾರಿ ಮಾಡಿಸಲು ಯೋಜನೆಹಾಕಿಕೊಳ್ಳಲಾಗಿದೆ. ಮಲ್ಲಾಬಾದ್‌ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಾಸಕರು ದತ್ತು ಪಡೆದಿದ್ದಾರೆ. ಈ ಶಾಲೆಯಲ್ಲಿ ವಿಜ್ಞಾನ ಉಪಕರಣಗಳಖರೀದಿ, ಗ್ರಂಥಾಲಯ, ಆಟದ ಮೈದಾನ ಅಭಿವೃದ್ಧಿಹಾಗೂ ಆಟದ ಸಾಮಾಗ್ರಿಗಳು ಖರೀದಿ ಮಾಡಲು 20 ಲಕ್ಷ ರೂ. ವಿನಿಯೋಗಿಸಲು ಶಾಸಕರು ಕ್ರಿಯಾ ಯೋಜನೆ ರೂಪಿಸಲಾಗಿದೆ.

ಖರ್ಚಾಗದ ಎರಡು ಕೋಟಿ ರೂ.: ಕರಜಗಿ ಗ್ರಾಮದ ಕೆಪಿಎಸ್‌ ಶಾಲೆಯಲ್ಲಿ ಪ್ರಾಥಮಿಕ ವಿಭಾಗದಿಂದಹಿಡಿದು ಪದವಿಪೂರ್ವ ಕಾಲೇಜಿನವರೆಗೆ1,500ಕ್ಕೂ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಶಾಲೆಕಟ್ಟಡ ಮಾತ್ರ ಸುಸಜ್ಜಿತವಾಗಿಲ್ಲ. ಆವರಣವೂಕಿರಿದಾಗಿದೆ. ತರಗತಿಗಳಲ್ಲಿ ಮಕ್ಕಳ ಸಂಖ್ಯೆಅಧಿಕವಾಗಿದ್ದು, ಕೊಠಡಿಗಳು ಮಾತ್ರ ಚಿಕ್ಕ-ಚಿಕ್ಕದಾಗಿವೆ. ಹೀಗಾಗಿ 10 ಕೊಠಡಿಗಳನ್ನು ಕಡೆವಿ, ವಿಪತ್ತು ಪರಿಹಾರ ನಿಧಿಯಡಿ ಹೊಸದಾಗಿ 8 ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆಮಾಡಲಾಗಿದೆ. ಆದರೂ, ಕಾಮಗಾರಿ ಮಾತ್ರ ಸಾಗಿಲ್ಲ.ಇದಲ್ಲದೇ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಮಂಡಳಿಯಿಂದ 2 ಕೋಟಿ ಮಂಜೂರು ಆಗಿದೆ. ಈ ಅನುದಾನ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಉಳಿದಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಭಾಗದಲ್ಲಿ ತಲಾ 150ರಂತೆ 300 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಕೂಡಿಸಲು ಕೊಠಡಿಗಳ ಸ್ಥಳ ಸಾಲುತ್ತಿಲ್ಲ. ವಿಪತ್ತು ಪರಿಹಾರ ನಿಧಿಯಡಿ ಹೊಸ 8 ಕೊಠಡಿಗಳ ನಿರ್ಮಾಣಕ್ಕೆ ವೇಗ ನೀಡಬೇಕು. ಕೆಕೆಆರ್‌ಡಿಬಿ ಯಿಂದ ಮಂಜೂರಾದ 2 ಕೋಟಿ ರೂ. ಅನುದಾನದಲ್ಲಿ ಅಗತ್ಯ ಕಾಮಗಾರಿಮಾಡಬೇಕು. ಆಗ ಶಾಲೆಯ ಸಮಸ್ಯೆ ನೀಗಲು ಸಾಧ್ಯವಾಗಲಿದೆ. ಜತೆಗೆ ಈಗಶಾಲೆ ದತ್ತು ಕಾರ್ಯಕ್ರಮದಡಿ ರೂಪಿಸಿರುವ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಶಾಲೆಗೆ ಕಾಯಕಲ್ಪ ಸಿಕ್ಕಂತೆ ಆಗಲಿದೆ. –ಚಂದ್ರಶೇಖರ್‌ ಗುರುಕಲ್‌, ಪ್ರಾಂಶುಪಾಲರು, ಪಿಯುಸಿ ವಿಭಾಗ, ಕೆಪಿಎಸ್‌ ಶಾಲೆ, ಕರಜಗಿ

ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿ ಸೇರಿ 117 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.ಶಾಲೆಯ ಕಾಂಪೌಂಡ್‌ ಚಿಕ್ಕದ್ದು, ಭದ್ರತೆ ಇಲ್ಲದಂತೆಆಗಿದೆ. ಬೋರ್‌ವೆಲ್‌ ನೀರು ಲಭ್ಯವಿದ್ದು, ಅದನ್ನು ಫಿಲ್ಟರ್‌ ಮಾಡುವ ವ್ಯವಸ್ಥೆ ಆಗಬೇಕು. ಮಕ್ಕಳಿಗೆಕಂಪ್ಯೂಟರ್‌ ಕಲ್ಪಿಸಬೇಕು. ಈಗ ಶಾಸಕರು ಶಾಲೆ ದತ್ತು ಪಡೆದಿದ್ದರಿಂದ ಪ್ರಗತಿ ಕಾಣುವ ನಿರೀಕ್ಷೆ ಇದೆ. -ಎನ್‌.ಆರ್‌.ಪಾಟೀಲ್‌, ಮುಖ್ಯೋಪಾಧ್ಯಾಯರು, ಪ್ರೌಢ ಶಾಲೆ, ದೇಸಾಯಿ ಕಲ್ಲೂರ

ಎಂ.ವೈ.ಪಾಟೀಲ್‌ ಸ್ವಗ್ರಾಮದ ದೇಸಾಯಿ ಕಲ್ಲೂರ ಗ್ರಾಮದ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯೇ ಇದೆ. ಸರಿಯಾದ ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯಗಳು ಇಲ್ಲ. ಪ್ರಾಥಮಿಕ ಶಾಲೆಯಲ್ಲಿಒಂದರಿಂದ 8ನೇ ತರಗತಿಯವರೆಗೆ 292 ಮಕ್ಕಳು ಇದ್ದಾರೆ. ಮಂಜೂರಾತಿ ಪ್ರಕಾರ 12 ಶಿಕ್ಷಕರ ಇದ್ದಾರೆ.ಇತ್ತೀಚೆಗೆ ಇಬ್ಬರು ಶಿಕ್ಷಕರು ನಿಧನವಾಗಿದ್ದು, ಅವರ ಸ್ಥಾನಕ್ಕೆ ಮತ್ತೂಬ್ಬರನ್ನು ನಿಯೋಜಿಸುವ ನಿರೀಕ್ಷೆ ಇದೆ. -ಚಂದ್ರಕಾಂತ ರಾಠೊಡ, ಮುಖ್ಯ ಶಿಕ್ಷಕರು

ಮಲ್ಲಾಬಾದ್‌ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 8ನೇ ತರಗತಿಯವರೆಗೆ 347 ಮಕ್ಕಳು ಓದುತ್ತಿದ್ದಾರೆ. 11 ಶಿಕ್ಷಕರ ಮಂಜೂರಾತಿ ಇದ್ದು, ಸದ್ಯ 8 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 3 ಶಿಕ್ಷಕರ ಹುದ್ದೆ ಖಾಲಿ ಇದೆ. ಈ ಶಾಲೆ ಸುಮಾರು 60 ವರ್ಷಗಳ ಹಳೆಯದಾಗಿದ್ದು, ಕಟ್ಟಡ ಶಿಥಿಲ ಅವ್ಯವಸ್ಥೆ ತಲುಪಿದೆ. ಒಟ್ಟು 11ಕೊಠಡಿಗಳು ಇದ್ದು, 6 ಕೊಠಡಿಗಳ ಚಾವಣಿಯ ಪದರು ಆಗಾಗ್ಗೆ ಉದುರಿ ಬೀಳುತ್ತಿದೆ. ಮಕ್ಕಳು ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿರುತ್ತದೆ. ಶಾಸಕರು ನಮ್ಮ ಶಾಲೆಯನ್ನು ದತ್ತು ಪಡೆದಿರುವುದು ಖುಷಿಯ ವಿಷಯವಾಗಿದೆ. -ಅಶೋಕ ಜಗದಿ, ಮುಖ್ಯ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾಬಾದ್‌

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕೆಂದು ಮೂರು ಶಾಲೆಗಳನ್ನು ದತ್ತು ಪಡೆದಿದ್ದೇನೆ. ಈ ಮೂರು ಶಾಲೆಗಳಲ್ಲಿ ಮೊದಲು ಮೂಲ ಸೌಕರ್ಯ ಕಲ್ಪಿಸುವುದು,ಶಿಕ್ಷಕರ ಕೊರತೆ ನೀಗಿಸಲು ಒತ್ತು ಕೊಡಲಾಗುತ್ತದೆ. ಜತೆಗೆ ಶಾಲೆ ಬಿಟ್ಟ ನಂತರ ಮಕ್ಕಳಿಗೆ ಒಂದು ಗಂಟೆ ಕೋಚಿಂಗ್‌ ಕೊಡಿಸುವ ಚಿಂತನೆ ಇದೆ. ಕರಜಗಿ ಕೆಪಿಎಸ್‌ ಶಾಲೆ ಒಂದೇ ಆವರಣದಲ್ಲಿ ಇರಬೇಕೆಂಬ ನಿಯಮ ಇದೆ. ಆದರೆ, ಅಲ್ಲಿ ಸ್ಥಳ ಅವಕಾಶ ಕಡಿಮೆ ಇರುವುದು ನಿಜವಾಗಿದ್ದು, ಇದನ್ನು ಪರಿಹರಿಸುವ ಕೆಲಸವಾಗಿದೆ. ಜಿಡಗ ಅಪ್ಪವರಿಗೆ ಸೇರಿದ ಜಾಗ ಇದಾಗಿದ್ದು, ಸದ್ಯಎರಡು ಎಕರೆ ಇದೆ. ಮತ್ತೆ ಎರಡು ಎಕರೆ ನೀಡಲು ಅಪ್ಪವರ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈಗಿರುವ ಸ್ಥಳದಲ್ಲೇ ಎರಡು ಕೋಟಿ ಅನುದಾನ ಬಳಸಿಕೊಂಡು ಕೆಪಿಎಸ್‌ ಶಾಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. -ಎಂ.ವೈ.ಪಾಟೀಲ್‌, ಶಾಸಕರು, ಅಫಜಲಪುರ.

 

-ರಂಗಪ್ಪ ಗಧಾರ

ಟಾಪ್ ನ್ಯೂಸ್

Crickter-Mansoor

Mulki: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್‌ ಸಾವು

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Alankaru

Alankaru: ಅಂತಾರಾಜ್ಯ ಕಳ್ಳನ ಬಂಧನ; ಮಹಜರು ಪ್ರಕ್ರಿಯೆ

1-a-www

Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

BJP FLAG

BJP; ಭಿನ್ನರಿಗೆ ವರಿಷ್ಠರ ಬುಲಾವ್‌: ರೆಡ್ಡಿ,ರಾಮುಲುಗೂ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-telkura

ಶ್ರೀ ಸಿಮೆಂಟ್ ಕಾರ್ಖಾನೆ; ರೈತರ ಪರಿಹಾರದಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ ನೀಡಿದ ತೇಲ್ಕೂರ

Attempt to block train for Kalaburagi Railway Divisional Office

Kalaburagi ರೈಲ್ವೇ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಯತ್ನ

KJ-Goerge

Congress: ಸಿಎಂ, ಡಿಸಿಎಂ ನಡುವೆ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ: ಕೆ.ಜೆ.ಜಾರ್ಜ್‌

siddalinga

Kalaburagi: ಜ. 26ರಂದು ಸಿದ್ಧಲಿಂಗೇಶ್ವರ ಪ್ರಕಾಶನ 131 ಗ್ರಂಥಗಳು ಏಕಕಾಲಕ್ಕೆ ಬಿಡುಗಡೆ

1-wewq-wq

Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

Crickter-Mansoor

Mulki: ಸೌದಿಯಲ್ಲಿ ಕಾರು ಚಲಾಯಿಸುವ ವೇಳೆಯೇ ಹೃದಯಾಘಾತ: ಕ್ರಿಕೆಟಿಗ ಮನ್ಸೂರ್‌ ಸಾವು

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Delhi polls: ಬಿಜೆಪಿಗ ಸಿಂಗ್‌ ಆಸ್ತಿ 259 ಕೋಟಿ ರೂ.:ದಿಲ್ಲಿ ಕಣದಲ್ಲಿ ಇವರೇ ಶ್ರೀಮಂತ!

Alankaru

Alankaru: ಅಂತಾರಾಜ್ಯ ಕಳ್ಳನ ಬಂಧನ; ಮಹಜರು ಪ್ರಕ್ರಿಯೆ

1-a-www

Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.