Advertisement
ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಬಲಪಡಿಸಲು ಶಾಸಕರು ದತ್ತು ಪಡೆಯುವ ಕಾರ್ಯಕ್ರಮರೂಪಿಸಲಾಗಿದೆ. ದತ್ತು ಪಡೆಯುವ ಮೂಲಕಆಯಾ ಶಾಲೆಗಳಲ್ಲಿ ಆಗಬೇಕಾದ ಅಭಿವೃದ್ಧಿಕಾರ್ಯಗಳನ್ನು ಮಾಡಬೇಕೆಂದು ರಾಜ್ಯ ಸರ್ಕಾರಶಾಸಕರಿಗೆ ಸಲಹೆ ನೀಡಿದೆ. ಅದರಂತೆ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಬ್ಬ ಶಾಸಕರು ಮೂರು ಶಾಲೆಗಳನ್ನು ದತ್ತುಪಡೆದುಕೊಂಡಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಬಳಸಿಕೊಂಡು ದತ್ತುಗಳ ಶಾಲೆಗಳ ಪ್ರಗತಿ ಯೋಜನೆ ಸಿದ್ಧ ಪಡಿಸಲಾಗುತ್ತಿದೆ.
Related Articles
Advertisement
ಕೆಪಿಎಸ್ ಶಾಲೆ ಕಡ್ಡಾಯ: ಶಾಸಕರ ದತ್ತು ಪಡೆದ ಮೂರು ಶಾಲೆಗಳಲ್ಲಿ ಒಂದು ಕರ್ನಾಟಕ ಪಬ್ಲಿಕ್‌ಶಾಲೆ (ಕೆಪಿಎಸ್) ಸೇರುವುದು ಕಡ್ಡಾಯವಾಗಿದೆ. ಒಂದರಿಂದ ಪದವಿ ಪೂರ್ವ ಕಾಲೇಜು ವರೆಗೆ ಒಂದೇ ಆವರಣದಲ್ಲಿ ಕೆಪಿಎಸ್ ಶಾಲೆ ಇರುತ್ತದೆ.ಆ ಶಾಲೆಯ ಪ್ರಾಥಮಿಕ,ಪ್ರೌಢ ಹಾಗೂ ಪೂರ್ವ ಪದವಿ ವಿಭಾಗದಲ್ಲಿ ಆಗಬೇಕಾದ ಅಭಿವೃದ್ಧಿಕಾರ್ಯಗಳನ್ನು ಶಾಸಕರು ಮಾಡಬೇಕು. ಉಳಿದ ಎರಡು ಶಾಲೆಗಳಲ್ಲಿ ಒಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿರುತ್ತದೆ.
ದತ್ತು ಪಡೆದು ಅಭಿವೃದ್ಧಿ ಪಡಿಸುವುದರಜೊತೆಗೆ ಮೂರ್‍ನಾಲ್ಕು ತಿಂಗಳೊಗೊಮ್ಮೆ ಶಾಸಕರು ಆ ಶಾಲೆಗಳಿಗೆ ಭೇಟಿ ಕೊಡಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಬೇಕೆಂದು ಶಾಸಕರಿಗೆ ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ.
ಶಾಸಕರು ತಮ್ಮ ವಿಧಾನಸಭೆ ಕ್ಷೇತ್ರದ ಮೂರು ಶಾಲೆಗಳನ್ನು ಸ್ವತಃ ಆಯ್ಕೆ ಮಾಡಿಕೊಡು ದತ್ತು ಪಡೆದಿದ್ದಾರೆ. ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಚಟುವಟಿಕೆಗಳನ್ನು ಪಟ್ಟಿ ಮಾಡಿ, ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಿಯಾಯೋಜನೆ ರೂಪಿಸಿದ್ದಾರೆ. –ಎಸ್.ಪಿ. ಬಾಡಗಂಡಿ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
–ರಂಗಪ್ಪ ಗಧಾರ