Advertisement

ಶಿಕ್ಷಕರಿಂದ ದೇಶದ ಅಭಿವೃದ್ಧಿ: ಆಯುಕ್ತೆ ಸುನೀತಾ

02:21 PM Dec 23, 2017 | |

ಕೊಂಡ್ಲಹಳ್ಳಿ: ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಹತ್ವವನ್ನು ಮಕ್ಕಳಿಗೆ ಕಲಿಸುವ ಮೂಲಕ ದೇಶಕ್ಕೆ ಸತøಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಆಯುಕ್ತೆ ಸುನೀತಾ ಮಲ್ಲಿಕಾರ್ಜುನ್‌ ಹೇಳಿದರು. 

Advertisement

ಕೊಂಡ್ಲಹಳ್ಳಿಯ ಬಿಳಿನೀರು ಚಿಲುಮೆ ಕ್ಷೇತ್ರದ ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆಯ ವತಿಯಿಂದ ಮೂಲ ತರಬೇತಿ ಶಿಬಿರದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಇಂತಹ ಅಮೂಲ್ಯ ಶಿಸ್ತಿನ ಶಿಕ್ಷಣ ಕಲಿತು ವಿದ್ಯಾರ್ಥಿಗಳಿಗೆ ಕಲಿಸಬೇ ಕು. ಶಿಕ್ಷಕರಿಂದ ಮಾತ್ರ ಸಮಾಜದ ದೇಶದ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ. ಗುರು ಇಲ್ಲದೇ ನಡೆಯುವ ಕಾರ್ಯವೂ ಅಪೂರ್ಣ ಎಂದರು. ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆ ಕಾರ್ಯದರ್ಶಿ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ರಾಜ್ಯ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆ ಅಧ್ಯಕ್ಷರಾದ ನಂತರ ಎರಡನೇ ಬಾರಿಗೆ ಸ್ಕೌಟ್ಸ್‌ ಸಂಸ್ಥೆಯ ರಾಜ್ಯದ ಪ್ರತಿ ತಾಲೂಕಿಗೆ 50 ಸಾವಿರಗಳ ಅನುದಾನವನ್ನು ಸರ್ಕಾರದಿಂದ ವಿತರಿಸಲು ಕ್ರಮಕೈಗೊಂಡಿದ್ದಾರೆ. ಸಂಸ್ಥೆಯ ವತಿಯಿಂದ ಬರುವ ಜನವರಿಯಲ್ಲಿ ಸಂಸ್ಥೆಯ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಕರ್ನಾಟಕ ದರ್ಶನ ಪ್ರವಾಸ ಏರ್ಪಡಿಸಲಾಗುವುದು ಎಂದರು.

ಜಿಲ್ಲೆಯ ಆರು ತಾಲೂಕುಗಳಿಂದ ಪ್ರತಿ ಶಾಲೆಯಿಂದ ತಲಾ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರವಾಸಕ್ಕಾಗಿ 18 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗುವುದು. ಸೇವಾ ಮನೋಭಾವ ಬೆಳೆಯಲು, ತೃಪ್ತಿ ಹೊಂದಲು ಇಂತಹ ತರಬೇತಿ ಹಾಗೂ ಶಿಕ್ಷಣ ಅತ್ಯವಶ್ಯ ಎಂದು ಹೇಳಿದರು. ಜಿಲ್ಲಾ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆ ಉಪ ಆಯುಕ್ತೆ ನಿರ್ಮಲಾ ಬಸವರಾಜ್‌, ಸುಶೀಲಮ್ಮ, ಬಾಬು ನಿಂಬೂರೆ, ಕರಿಬಸಪ್ಪ, ಗುರುಮೂರ್ತಿ, ಕೆ.ಪಿ. ಗಂಗಾಧರ್‌, ಕೆ. ಶಾಂತವೀರಣ್ಣ, ಬಡಯ್ಯ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next