ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್,ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಅಭಿವೃದ್ಧಿಗೊಳಿಸಿರುವ ತೋಟ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರು, ನರೇಗಾ ಯೋಜನೆಯಡಿ ರೇಷ್ಮೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅಭಿವೃದ್ಧಿ ಗೊಳಿಸಿರುವ ತೋಟಗಳನ್ನು ವೀಕ್ಷಿಸಿ ರೈತ ರೊಂದಿಗೆ ಸಮಾಲೋಚನೆ ನಡೆಸಿದರು.
ಪರಿಶೀಲನೆ: ಗ್ರಾಮೀಣಾಭಿವೃದ್ಧಿ ಮತ್ತುನೈರ್ಮಲ್ಯ ಕಾಪಾಡಲು ಪೂರಕವಾಗಿರುವ ನರೇಗಾ ಯೋಜನೆಯಡಿ ಮಳೆ ನೀರು ಸಂರಕ್ಣೆ ಮಾಡಲು ಮಳೆನೀರು ಕೊಯ್ಲು, ಚೆಕ್ ಡ್ಯಾಂಗಳು ಮತ್ತು ಕಲ್ಯಾಣಿಗಳನ್ನು ನಿರ್ಮಿಸುವ ಜೊತೆಗೆ ರೈತರು ವೈಯಕ್ತಿಕವಾಗಿ ನರೇಗಾ ಯೋಜನೆಯ ಲಾಭ ಪಡೆಯಲು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ಮಾಡಲು ಯೋಜನೆ ರೂಪಿಸಿದರಲ್ಲದೇ ಸ್ವತಃ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅರಿವು ಮೂಡಿಸಲು ಸೂಚನೆ: ಭೇಟಿ ವೇಳೆಯಲ್ಲಿ ರೈತರೊಂದಿಗೆ ಮುಕ್ತವಾಗಿ ಸಮಾ ಲೋಚನೆ ನಡೆಸಿದ ಅವರು, ರೈತರು ಯಾವ ಬೆಳೆ ಬೆಳೆದಿದ್ದಾರೆ, ಇಲಾಖೆಯಿಂದ ಯಾವ ರೀತಿ ಪ್ರೋತ್ಸಾಹ ಮತ್ತು ಸಹಕಾರ ದೊರೆಯುತ್ತಿದೆ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆಸಂವಾದ ನಡೆಸಿ ಜಿಲ್ಲಾ ಪಂಚಾಯಿತಿ ಹಾಗೂರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ದೊರೆಯುವ ಯೋಜನೆಗಳಕುರಿತು ರೈತರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇಜಿಲ್ಲೆಯ ಗುಡಿ ಬಂಡೆ ತಾಲೂಕಿನಲ್ಲಿ ಕೃಷಿ ಬೆಳೆಗಳನ್ನು ವೀಕ್ಷಣೆ ಮಾಡಿ ಮಂಗಳವಾರತಾಲೂಕಿನ ಬೂದಾಳ ಗ್ರಾಮದಲ್ಲಿ ನರೇಗಾಯೋಜನೆಯಡಿ ಸಿದ್ಧ ಪಡಿಸಿರುವ ಹಣ್ಣು ಮಾಗಿಸುವ ಘಟಕ, ವೀರಾಪುರ ಗ್ರಾಮದಲ್ಲಿ ಸೀಬೆ ತೋಟ ಹಾಗೂ ಬಳಿಕ ಬೀರಪ್ಪನ ಹಳ್ಳಿಯಲ್ಲಿ ಗೋಡಂಬಿ ಸಂಸ್ಕರಣ ಘಟಕ, ಚಿಂತಾಮಣಿ ತಿನ್ನಕಲ್ಲು ದ್ರಾಕ್ಷಿ ಮತ್ತು ಗೋಡಂಬಿ, ಸೀಬೆ ತೋಟ ಪರಿಶೀಲಿಸಿದ್ದಾರೆ. ಜಿಪಂ ಸಿಇಒ ಅವರೊಂದಿಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿಮತ್ತಿತರರು ಉಪಸ್ಥಿತರಿದ್ದರು.