Advertisement

ಸನ್ನಡತೆಗಳಿಂದ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯ: ದಿನೇಶ್‌ ಕೆ. ಸನಿಲ್‌

01:10 PM Sep 10, 2021 | Team Udayavani |

ಮುಲುಂಡ್‌: ಹಸನಾದ ಬದುಕಿಗೆ ಹೊಸತನ ನೀಡುವ ನಿವೃತ್ತಿ ಬದುಕು ವಿಶಿಷ್ಟ ಅನುಭ ವಗಳ ಸರಮಾಲೆಯಾಗಿದೆ. ಜೀವನ
ವನ್ನು ಸರಿಯಾದ ಪಥದಲ್ಲಿ ಮುನ್ನಡೆಸಿದಾಗ ಅದು ಫಲಪ್ರದವಾಗಿ ಯಶಸ್ವಿಯಾಗಬಲ್ಲದು. ಉದ್ಯೋಗ, ಕುಟುಂಬದ ಸಂರಕ್ಷಣೆ, ಮುಂಬಯಿ ಮಹಾನಗರದಲ್ಲಿ ಸ್ವಂತ ಮನೆ ಇತ್ಯಾದಿ ಸೌಕರ್ಯಗಳಿಗೆ ಸಹಕರಿಸಿದ ಭಾರತ್‌ ಬ್ಯಾಂಕ್‌ ನಮ್ಮೆಲ್ಲರ ಮಾತೃಸ್ವರೂಪಿಣಿ ಎಂದು ಭಾರತ್‌ ಬ್ಯಾಂಕ್‌ ಎಂಪ್ಲಾ ಯೀಸ್‌ ಯೂನಿಯನ್‌ ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಸನಿಲ್‌ ಅಭಿಪ್ರಾಯಪಟ್ಟರು.

Advertisement

ಇತ್ತೀಚೆಗೆ ಭಾರತ್‌ ಕೋ- ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ಮುಲುಂಡು ಪೂರ್ವ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯ
ಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಶೇಖರ ಎನ್‌. ಬಿಲ್ಲವ ಅವರನ್ನು ಸಮ್ಮಾನಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಬ್ಯಾಂಕ್‌ಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾಗಿದೆ. ಕಾನೂನು ನಿಯ ಮಗಳನ್ನು, ನಮ್ಮಲ್ಲಿರುವ ವಿನೂತನ ಸವಲತ್ತುಗಳನ್ನು ಖಾತೆದಾರರಿಗೆ ವಿವರಿಸಿ ಮಾನವ ಸಂಪನ್ಮೂಲಗಳಗನ್ನು ಕ್ರೋಢೀಕರಿಸಬೇಕು. ಪ್ರಾಮಾಣಿಕತೆ, ಸತ್ಯಸಂಧತೆ, ಸನ್ನಡತೆಗಳಿಂದ ನಾವು ಅಭಿವೃದ್ಧಿಯ ಗುರಿ ತಲಪಲು ಸಾಧ್ಯವಾಗುತ್ತದೆ ಎಂದರು.

ಇದನ್ನೂ ಓದಿ:ಕಲ್ಯಾಣ್‌: ಸಂತ ನಿರಂಕಾರಿ ಮಿಷನ್‌ನಿಂದ ರಕ್ತದಾನ ಶಿಬಿರ

ಮುಲುಂಡು ಪೂರ್ವ ಶಾಖೆಯ ಪ್ರಬಂಧಕಿ ಕಲಾವತಿ ಡಿ. ಬೋಳಾರ್‌ ಮಾತನಾಡಿ, ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿ ಹೊಸ ಬದುಕಿನ ಸಾರ್ಥಕತೆ ಪಡೆಯಬೇಕು. 32 ವರ್ಷಗಳ ಅವರ ಸುದೀರ್ಘ‌ ಸೇವೆಯಲ್ಲಿ ಪಡೆದ ಅನುಭವ ಇತರಿಗೂ ಸ್ಫೂರ್ತಿಯಾಗಲಿ. ಅವರ ನಿವೃತ್ತ ಬದುಕು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಶೇಖರ ಎನ್‌. ಬಿಲ್ಲವ, ಸಮಯ ನೋಡದೆ, ಗ್ರಾಹಕರ ಮನಸ್ಸನ್ನು ನೊಯಿಸದೆ ತನ್ನ ಸೇವಾತತ್ವರತೆಯನ್ನು ಪೂರೈಸಬೇಕು. ಕರ್ತವ್ಯಕ್ಕೆ ನ್ಯಾಯ ಒದಗಿಸುವ ಮನೋಭಾವ ನಮ್ಮದಾಗಬೇಕು. ಸಾಮಾನ್ಯ ಬಡ ಕುಟುಂಬದ ನನಗೆ ಸ್ವಂತ ಮನೆ, ವಿಧ್ಯಾಭ್ಯಾಸ, ಕುಟುಂಬ ಸದಸ್ಯರ ಆರೈಕೆ ಭಾರತ್‌ ಬ್ಯಾಂಕ್‌ ನೀಡಿದ ಸಹಕಾರದಿಂದ ಸಾಧ್ಯವಾಯಿತು ಎಂದು ತಿಳಿಸಿ, ಸಹಕರಿಸಿದ ಸಹೋ ದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ರಮೇಶ್‌ ಕುಂದರ್‌, ಶಿಶಿರ್‌ ಸಾಲ್ಯಾನ್‌, ಭಾರತ್‌ ಬ್ಯಾಂಕ್‌ ಎಂಪ್ಲಾಯಿಸ್‌ ಯೂನಿಯನ್‌ ಅಧ್ಯಕ್ಷ ಅಶೋಕ್‌ ಎಲ…. ಕೋಟ್ಯಾನ್‌, ಉಪಕಾರ್ಯಾಧ್ಯಕ್ಷ ಲೋಹಿತಾಕ್ಷ ಎಸ್‌. ಅಂಚನ್‌, ಜತೆ ಕಾರ್ಯದರ್ಶಿ ಪ್ರಿಯಾ ಬಿ. ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ ಕೆ. ಪೂಜಾರಿ, ಜತೆ ಕೋಶಾಧಿಕಾರಿ ವಿನೂತಾ ಪೂಜಾರಿ, ಪದಾಧಿಕಾರಿಗಳಾದ ಗಿರೀಶ್‌ ಎ. ಸಾಲ್ಯಾನ್‌, ಶ್ರೀಧರ ಎಚ್‌. ಪೂಜಾರಿ, ರಾಘವೇಂದ್ರ ಪ್ರಸಾದ್‌ ಸಾಲ್ಯಾನ್‌, ಸುಜೀತ್‌ ಜಿ. ಕೋಟ್ಯಾನ್‌ ಶುಭ ಹಾರೈಸಿದರು. ಹಿರಿಯ ಅಧಿಕಾರಿ ಸುನೀತಾ ಜೆ. ಪೂಜಾರಿ ಸ್ವಾಗತಿಸಿದರು. ಅರುಣಾ ಕೆ. ಬಂಟ್ವಾಳ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next