ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಲ್ಲಾ ಸಮಾಜದ ಏಳಿಗೆಗೆ ದುಡಿದು ನುಡಿದಂತೆ ನಡೆದು ಜಗಜ್ಯೋತಿ ಬಸವಣ್ಣರವರ ತತ್ವ ಪಾಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಟಗರಪುರ ಮೋಳೆ, ಆಲಹಳ್ಳಿ, ಕಜ್ಜಿಹುಂಡಿ, ಸಿಲ್ಕಲ್‌ಪುರ, ಹೊಸಮಾಲಂಗಿ, ಹೊಸ ಐನೂರಹುಂಡಿ, ಚಿಲಕವಾಡಿ, ಕುಂತೂರುಮೋಳೆ, ಕುಂತೂರು, ಎಡೆಮೋಳೆ, ತೇರಂಬಳ್ಳಿ, ಗೊಬ್ಬಳಿಪುರ ಗ್ರಾಮಗಳಲ್ಲಿ ಬಿರುಸಿನ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದ ಬಳಿಕ ಆಲಹಳ್ಳಿ ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸಿ
ಮಾತನಾಡಿದರು.
ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿರುವ ಅನುಭವ ಮತ್ತು ಎರಡು ವಿಧಾನಸಭಾ ಚುನಾವಣೆಯಲ್ಲಿ ಮತ್ತು ಎರಡು ಲೋಕಸಭಾ ಚುನಾವಣೆಯಲ್ಲಿ ಸೋತು ಸತತ 14 ವರ್ಷಗಳಿಂದ ವನವಾಸ ಇರುವ ನನಗೆ ಮತದಾರರು ಮತ ನೀಡಬೇಕು ಎಂದು ಮನವಿ ಮಾಡಿದರು. ಕಳೆದ 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಂದು ಮತದಿಂದ ಸೋತು ವಂಚಿತರಾಗಿರುವ ನನಗೆ ರಾಜಕೀಯ ಶಕ್ತಿಯನ್ನು ಮತದ ಭೀಕ್ಷೆಯ ಮೂಲಕ ನೀಡಿ ಕ್ಷೇತ್ರ ಅಭಿವೃದ್ಧಿ ಮಾಡಲು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ಎಸ್.ಜಯಣ್ಣ ಮಾತನಾಡಿ, ಈ ಬಾರಿಯ 2018ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿರವರಿಗೆ ಬಿಜೆಪಿ ನೇರ ಸ್ಪರ್ಧೆ ಹೊರತೂ ಬಿಎಸ್‌ಪಿ ನೇರ ಸ್ಪರ್ಧೆ ಅಲ್ಲ ಎಂದು ತಿಳಿಸಿದರು.
ಮತಯಾಚನೆಯ ಸಂದರ್ಭದಲ್ಲಿ ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಶಿವಕುಮಾರ್, ರಸ್ತೆ ಸಾರಿಗೆ ನಿಗಮದ ನಿರ್ದೇಶಕ ರಾಜೇಂದ್ರ, ಚೆಸ್ಕ್ ನಿರ್ದೇಶಕ ಡಿ.ಸಿದ್ದರಾಜು, ಚಾಮುಲ್ ನಿರ್ದೇಶಕರಾದ ತೋಟೇಶ್, ನಂಜುಂಡಸ್ವಾಮಿ, ಆರ್‌ಎಂಸಿ ನಿರ್ದೇಶಕರಾದ ಬಸವಣ್ಣ, ಸೋಮಶೇಖರ್, ನಂಜೇಗೌಡ, ಮಹದೇವಪ್ಪ, ಮೈಸೂರು ಸಿಂಡಿಕೆಟ್ ಸದಸ್ಯ ಕಿನಕಹಳ್ಳಿ ರಾಚಯ್ಯ, ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಎನ್.ನಟರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ನಾಗರಾಜು, ಮುಖಂಡರಾದ ನಿಂಗರಾಜು, ವಡಗೆರೆ ದಾಸ್, ವಜ್ರಮುನಿ, ಮಹದೇವ, ಕಿನಕಹಳ್ಳಿ ಪ್ರಭು ಪ್ರಸಾದ್ ಇದ್ದರು.