Advertisement

ಬೊಮ್ಮಾಯಿ ಸರಕಾರದಿಂದ ಅಭಿವೃದ್ಧಿ ಪರ್ವ

03:52 PM Aug 07, 2022 | Team Udayavani |

ನರಗುಂದ: ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವವನ್ನೇ ಸೃಷ್ಟಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ರೈತರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಲೋಕೋಪ ಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ಸಮೀಪದ ಸವದತ್ತಿ ತಾಲೂಕು ಆಚಮಟ್ಟಿ ಗ್ರಾಮದಲ್ಲಿ 11.15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು, ನಂತರ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ.ನಾನು ಲೋಕೋಪಯೋಗಿ ಸಚಿವನಾದ ಬಳಿಕ ಎಸ್ಸಿಪಿ, ಟಿಎಸ್ಪಿ ಯೋಜನೆಗೆ 950 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯಾವುದೇ ಅನುದಾನ ಬಿಡುಗಡೆ ಮಾಡಿದರೂ ಅದು ನಿಮ್ಮ ತೆರಿಗೆ ಹಣ ಆಗಿರುತ್ತದೆ. ಆದ್ದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅಡೆತಡೆ ಮಾಡದೇ ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕೆಂದು ಸಚಿವ ಸಿ.ಸಿ.ಪಾಟೀಲ ಸಾರ್ವಜನಿಕರಿಗೆ ಕರೆ ನೀಡಿದರು.

ನರಗುಂದ ತಾಲೂಕಿನ ನರಗುಂದದ ಹಿರೇಮಠ, ಪತ್ರಿವನಮಠ, ವಿರಕ್ತಮಠ, ಭೈರನಹಟ್ಟಿ ಮಠ, ಹೂಲಿ ಮಠ, ಚುಳಕಿ ಸಿದ್ದರಾಮೇಶ್ವರ ದೇವಸ್ಥಾನ, ಆಚಮಟ್ಟಿ ಉಡಚಾ ಪರಮೇಶ್ವರಿ ದೇವಸ್ಥಾನಗಳಿಗೆ ತಲಾ 1 ಕೋಟಿ ಹಾಗೂ ಕಲ್ಮೇಶ್ವರ ದೇವಸ್ಥಾನಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಸವದತ್ತಿ ತಾಲೂಕಿಗೆ ಲೋಕೋಪಯೋಗಿ ಇಲಾಖೆಯಿಂದ ಇನ್ನೂ 25 ರಿಂದ 30 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.

ಸ್ಥಳದಲ್ಲಿದ್ದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ ಕೋರಿಕೆಯಂತೆ ಯರಗಟ್ಟಿಯಿಂದ ಮುನವಳ್ಳಿ, ನರಗುಂದ, ಯಾವಗಲ್ಲ, ಗಜೇಂದ್ರಗಡ ಮಾರ್ಗವಾಗಿ ಕುಷ್ಟಗಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಯನ್ನು ಈ ವರ್ಷ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಮಾತನಾಡಿ, ಸವದತ್ತಿ ಮಹಾನಗರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ 100 ಕೋಟಿ ರೂ. ವೆಚ್ಚದ ಬೃಹತ್‌ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಪ್ರಧಾನಮಂತ್ರಿಗಳ ಸಾಕಷ್ಟು ಯೋಜನೆಗಳನ್ನು ನಮ್ಮ ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಜಮಖಂಡಿ, ಉಪಾಧ್ಯಕ್ಷ ಮಹಾಂತೇಶ ರಾಯನಗೌಡ್ರ, ಅಣ್ಣಪ್ಪಗೌಡ ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ ಎಸ್‌.ಎಸ್‌.ಸೊಬರದ ವೇದಿಕೆಯಲ್ಲಿದ್ದರು. ಗುತ್ತಿಗೆದಾರ ಬಿ.ಎಂ.ಪಾಟೀಲ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸನ್ಮಾನ: ಕಾರ್ಯಕ್ರಮದಲ್ಲಿ ನರಗುಂದ ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷ ಉಮೇಶಗೌಡ ಸಿ. ಪಾಟೀಲ ಅವರನ್ನು ಸಚಿವರ ಹುಟ್ಟೂರಾದ ಆಚಮಟ್ಟಿ ಗ್ರಾಮಸ್ಥರು ಸತ್ಕರಿಸಿದರು. ವಿವಿಧ ಕಾಮಗಾರಿಗೆ ಭೂಮಿಪೂಜೆ ಸವದತ್ತಿ ರಾಜ್ಯ ಹೆದ್ದಾರಿಯ ಅಚಮಟ್ಟಿ ಕ್ರಾಸ್‌ ನಿಂದ ಚುಳಕಿ ಗ್ರಾಮದವರೆಗೆ 9.90 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ, 1 ಕೋಟಿ ರೂ. ವೆಚ್ಚದಲ್ಲಿ ಉಡಚಮ್ಮ ದೇವಸ್ಥಾನ ಜೀರ್ಣೋದ್ಧಾರ, 25 ಲಕ್ಷ ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಸಚಿವ ಸಿ.ಸಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next