Advertisement

ಅಭಿವೃದ್ಧಿ ಪ್ರಾಧಿಕಾರ ಸ್ಥಾನಕ್ಕೆ ಹೆಚ್ಚಿದ ಲಾಬಿ!

12:44 PM Jan 22, 2022 | Team Udayavani |

ರಾಮನಗರ: ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಮತದಾರರ ಮನಸ್ಸು ಒಲಿಸಿಕೊಳ್ಳಲು ವಿಫ‌ಲವಾಗಿರುವ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಅಧಿಕಾರಕ್ಕಾಗಿ ಬಣ ರಾಜಕೀಯತೀವ್ರಗೊಂಡಿದೆ.

Advertisement

ಸದ್ಯ ಜಿಲ್ಲೆಯಲ್ಲಿರುವ ಐದು ಅಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಗಳಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಪೈಪೋಟಿ ನಡೆಯುತ್ತಿದೆ. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಗ್ರೇಟರ್‌ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಪ್ರಾಧಿಕಾರ, ಮಾಗಡಿಯೋಜನಾ ಪ್ರಾಧಿಕಾರ, ಕನಕಪುರ ಯೋಜನಾ ಪ್ರಾಧಿಕಾರ, ಚನ್ನಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ಜಿಲ್ಲೆಯಪ್ರಮುಖ ಕಾರ್ಯಕರ್ತರ ನಡುವೆ ಪೈಪೋಟಿ ಆರಂಭವಾಗಿದೆ.

ಪ್ರಾಧಿಕಾರದ ಅಧಿಕಾರ ಹಿಡಿಯಲು ಜಿಲ್ಲಾ ಬಿಜೆಪಿಯಲ್ಲಿರುವ ಮೂರು ಬಣಗಳು ಮುಸುಕಿನ ಗುದ್ದಾಟ ನಡೆಸಿವೆ. ಅಧಿಕಾರದಲ್ಲಿರುವ ಅಧ್ಯಕ್ಷ ಮತ್ತುನಿರ್ದೇಶಕರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲುಪ್ರಯತ್ನ ಪಡುತ್ತಿದ್ದಾರೆ. ಇನ್ನೊಂದೆಡೆ ಇದೇ ಸ್ಥಾನಗಳಿಗೆ ಆಕಾಂಕ್ಷಿಗಳು ಲಾಬಿ ನಡೆಸಲು ಆರಂಭಿಸಿದ್ದಾರೆ.ಮನೆಯೊಂದು ಮೂರು ಭಾಗಿಲು: ಗ್ರಾಪಂನಲ್ಲಿ ಒಂದಿಷ್ಟು ಬೆಂಬಲಿಗರು ಮತ್ತು ಚನ್ನಪಟ್ಟಣ ನಗರಸಭೆಯಲ್ಲಿ ಮಾತ್ರ ಚುನಾಯಿತರಾಗಿರುವ ಬಿಜೆಪಿ ರಾಜಕೀಯವಾಗಿ ತಳವೂರಲು ಹರ ಸಾಹಸ ಪಡುತ್ತಲೇಇದೆ. ಪಕ್ಷದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿ ಸಂಘಟನೆ ಮಾಡುವ ಬದಲಿಗೆ ಬಣ ರಾಜಕೀಯ ಆರಂಭಿಸಿ ಪಕ್ಷವನ್ನು ಅಧೋಗತಿಯತ್ತ ನೂಕುತ್ತಿದ್ದಾರೆ ಎಂದುಸಾಮಾನ್ಯ ಮತ್ತು ನಿಷ್ಠಾವಂತ ಕಾರ್ಯಕರ್ತರು ದೂರಿದ್ದಾರೆ.

ಸಿಪಿವೈ ನಾಯಕತ್ವವೇ ನಿರ್ಣಾಯಕ: ಸ್ಥಳೀಯ ನಗರಸಂಸ್ಥೆಗಳು ಮತ್ತು ಸರ್ಕಾರದ ಸಂಸ್ಥೆಗಳಲ್ಲಿನಾಮಿನಿಗಾಗಿ ಕಚ್ಚಾಟದ ನಂತರ ಈಗ ಪ್ರಾಧಿಕಾರದಸ್ಥಾನಗಳಿಗೆ ಲಾಬಿ ಆರಂಭವಾಗಿದೆ. ಚನ್ನಪಟ್ಟಣ ಬಿಜೆಪಿಗೆ ಮಟ್ಟಿಗೆ ಸಿ.ಪಿ.ಯೋಗೇಶ್ವರ್‌ ನಿರ್ಣಾಯಕನಾಯಕ. ಅಲ್ಲಿ ಸಿ.ಪಿ.ಯೋಗೇಶ್ವರ್‌ ಮಾತೇಅಂತಿಮ. ಹೀಗಾಗಿ ಚನ್ನಪಟ್ಟಣ ತಾಲೂಕು ಬಣ ರಾಜಕೀಯದಿಂದ ಹೊರಗಿದೆ. ಜಿಲ್ಲೆಯಲ್ಲಿ ಉಳಿದಕಡೆ ಕೆಆರ್‌ಐಡಿಸಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌ ಬಣ,ಬಿಜಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡರ ಬಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿದೇವರಾಜ್‌ ಬಣ ಎಂದು ಜಿಲ್ಲಾ ಬಿಜೆಪಿ ಮೂರು ಬಣಗಳಾಗಿವೆ.

ಬಿಎಸ್‌ವೈ ಮುಖ್ಯಮಂತ್ರಿಗಳಾಗಿದ್ದ ವೇಳೆ ಎಂ.ರುದ್ರೇಶ್‌ ಪ್ರಾಧಿಕಾರಿಗಳಿಗೆ ತಮ್ಮ ನಿಷ್ಠರನ್ನು ನೇಮಕ ಮಾಡಿಸಿದ್ದರು. ಹೀಗೆ ರಾಮನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಚ್‌.ಎಸ್‌.ಮುರುಳೀಧರ್‌ ಹಾಲಿ ಅಧ್ಯಕ್ಷರಾಗಿದ್ದಾರೆ. ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಂ.ಜಿ.ರಂಗಧಾಮಯ್ಯ, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್‌.ಜಗನ್ನಾಥ್‌, ಗ್ರೇಟರ್‌ ಬೆಂಗಳೂರು -ಬಿಡದಿ ಸ್ಮಾರ್ಟ್‌ ಸಿಟಿಪ್ರಾಧಿಕಾರದ ಅಧ್ಯಕ್ಷರಾಗಿ ವರದರಾಜ ಗೌಡರು ಅಧಿ ಕಾರದಲ್ಲಿದ್ದಾರೆ.

Advertisement

ಗಾಡ್‌ಫಾದರ್‌ಗಳಿಗೆ ದುಂಬಾಲು: ಇದೀಗ ಈಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳಿಗೆ ಹೊಸಬರನ್ನುನೇಮಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕರ ಲಾಬಿ ಶುರುವಾಗಿದೆ. ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಶಿವಮಾಧು ಮತ್ತು ನಿರ್ದೇಶಕಸ್ಥಾನಗಳಿಗೆ ಡಿ.ನರೇಂದ್ರ, ಸಿಂಗ್ರಯ್ಯ, ರುದ್ರದೇವರುಅವರ ಹೆಸರುಗಳು ಪ್ರಸ್ತಾಪವಾಗಿದೆ ಎನ್ನಲಾಗಿದೆ.ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೇಶ್‌ ಹೆಸರು ಕೇಳಿ ಬರುತ್ತಿದೆ. ಇನ್ನುಳಿದ ಪ್ರಾಧಿಕಾರಗಳಿಗೂ ಪ್ರಮುಖ ಬಿಜೆಪಿ ಮುಖಂಡರು ಲಾಬಿ ಆರಂಭಿಸಿದ್ದಾರೆ. ತಮ್ಮ ಗಾಡ್‌ಫಾದರ್‌ಗಳ ಮೇಲೆ ಒತ್ತಡ ಹೇರಿ ಲಾಬಿ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಪ್ರಾಧಿಕಾರದ ಅಧ್ಯಕ್ಷರುಗಳು ಮತ್ತು ನಿರ್ದೇಶಕರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಪಕ್ಷದ ವರಿಷ್ಠರ ಬಳಿ ಎಡತಾಕಲಾರಂಭಿಸಿದ್ದಾರೆ.

ಸ್ಥಳೀಯ ಸಂಸ್ಥೆ ಸಂಘಟನೆ ಮರಿಚೀಕೆ: ಇತ್ತಿಚೆಗೆ ಬಿಡದಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಕೇವಲ 12 ವಾರ್ಡುಗಳಲ್ಲಿ ಸ್ಪರ್ಧಿಸಿತ್ತು. ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಚನ್ನಪಟ್ಟಣಹೊರತು ಪಡಿಸಿ ಬಿಜೆಪಿ ಸಾಧನೆ ಶೂನ್ಯ. ಮುಂಬರುವ ತಾಪಂ, ಜಿಪಂಗೆ ಒಗ್ಗಟ್ಟಿನ ಪ್ರದರ್ಶನ ಮಾಡಿಪಕ್ಷ ಸಂಘಟಿಸುವ ಬದಲಿಗೆ ಪ್ರಾಧಿಕಾರಗಳು ಮತ್ತುಸ್ಥಳೀಯ ಸಂಸ್ಥೆಗಳಲ್ಲಿ ನಾಮಿನಿಗಾಗಿ ಕಚ್ಚಾಟ ಆರಂಭವಾಗಿರುವ ಬಗ್ಗೆ ಕೆಲವು ತಳ ಮಟ್ಟದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಉಳಿಸಿ ಎಂಬ ತಲೆ ಬರಹದಲ್ಲಿ ಕಾರ್ಯಕರ್ತರ ಸಭೆಯ ಬಗ್ಗೆ ಮಾಹಿತಿ ನೀಡಿದ ಕರಪತ್ರದಲ್ಲಿ ಸಭೆ ಕರೆದಿದ್ದು ಯಾರು ಎಂಬ ಅಂಶವೇ ಇರಲಿಲ್ಲ.ಸಾಮಾಜಿಕ ಜಾಲ ತಾಣಗಳಲ್ಲಿ ಈ ಕರಪತ್ರ ಹರಿದಾಡಿದ ಬೆನ್ನಲ್ಲೇ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್‌ ತಮ್ಮ ಪಕ್ಷದ ಕಾರ್ಯಕರ್ತರ ವಾಟ್ಸಾéಪ್‌ಗುಂಪುಗಳಲ್ಲಿ ಇದು ಪಕ್ಷದ ಅಧಿಕೃತ ಸಭೆಯಲ್ಲ ಎಂದು ಹೇಳಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಹುನ್ನಾರ ಎಂದಿದ್ದಾರೆ.

ಬಿಜೆಪಿಯಲ್ಲಿ ಶೀತಲ ಸಮರ ಶುರು :

ಜಿಲ್ಲೆಯಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ ಎಂಬುದಕ್ಕೆ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಉಳಿಸಿ ಎಂಬ ತಲೆ ಬರಹದೊಂದಿಗೆ ಜ.21ರಶುಕ್ರವಾರ ನಗರದ ಆರ್‌ವಿಸಿಎಸ್‌ ಕನ್‌ವೆನಷನ್‌ಹಾಲ್‌ನಲ್ಲಿ ಆಯೋಜನೆ ಯಾಗಿದ್ದ ಕಾರ್ಯಕರ್ತರ ಸಭೆಯೇ ಸಾಕ್ಷಿ. ಆದರೆ, ಈ ಸಭೆ ಪಕ್ಷದ ಅಧಿಕೃತ ಸಭೆಯಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ಸಹ ವಾಟ್ಸಾéಪ್‌ ಗುಂಪುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

-ಬಿ.ವಿ. ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next