ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಜಲಮೂಲಗಳಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗಾಗಿ ಕೈಗೊಂಡಿರುವ ಮಹತ್ವಾಕಾಂಕ್ಷಿ “ಜಲಶಕ್ತಿ’ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ ದೊರಕಿದ್ದು 10 ದಿನಗಳಲ್ಲಿ ಏಳು ಸಾವಿರಕಾಮಗಾರಿಗಳು ಪ್ರಾರಂಭವಾಗಿವೆ.
ನೂರು ದಿನಗಳ ಅಭಿಯಾನದಡಿ ಮೊದಲ ಹಂತ ದಲ್ಲಿರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆರೆಗಳ ಪುನಶ್ಚೇತನ, ಕಲ್ಯಾಣಿಗಳಪುನಶ್ಚೇತನ, ಕಾಲುವೆ ಹಾಗೂ ನಾಲೆಗಳ ದುರಸ್ತಿ, ಬದುನಿರ್ಮಾಣ, ಕೃಷಿ ಹೊಂಡ, ಬಚ್ಚಲು ಗುಂಡಿ ಗಳನಿರ್ಮಾಣಕ್ಕೆ ಹೆಚ್ಚು ಬೇಡಿಕೆಯಿದ್ದು, ಗ್ರಾಮೀ ಣ ಜನರುಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿದ್ದಾರೆ.ಜಲಶಕ್ತಿ ಯೋಜನೆಗೆ ನರೇಗಾದಡಿ ಶೇ.64 ರಷ್ಟುವೆಚ್ಚ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯಗೊಳಿಸಿರುವುದುವರ ದಾನವೇ ಆಗಿದೆ.
ಗ್ರಾಮೀಣ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ಅಂತರ್ಜಲ ವೃದ್ಧಿ ಕಾಮಗಾರಿ,ಜಲಸಂರಕ್ಷಣೆ, ಅರಣ್ಯೀಕರಣ ಕಾಮಗಾರಿಗಳಿಗೆಚಾಲನೆ ದೊರೆತಿದೆ.100 ದಿನಗಳಲ್ಲಿ 3,00,080 ಕಾಮಗಾರಿಗಳ ಗುರಿಹೊಂದಿ ದ್ದು ಪ್ರಾರಂಭದ ಹತ್ತು ದಿನಗಳಲ್ಲಿ ಆರಂಭಸಿಕ್ಕಿದಂ ತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಮಹತ್ವಾಕಾಂಕ್ಷಿ ಯೋಜನೆಗೆ 4,310 ಕೋಟಿ ರೂ. ವೆಚ್ಚ ಮಾಡಲಾ ಗುತ್ತಿದೆ.
100ದಿನಗಳಲ್ಲಿ ನಿಗದಿತ ಗುರಿ ತಲುಪುವಂತೆ ಸೂಚನೆ ಸಹನೀಡಲಾಗಿದ್ದು ಆ ನಿಟ್ಟಿನಲ್ಲಿ ಜಿಲ್ಲಾ ಪಂಚಾ ಯಿತಿಗಳಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆಸಹ ಹೊರಡಿಸಲಾಗಿದೆ.ಸಮಗ್ರ ಕೆರೆ ಅಭಿವೃದ್ದಿ, ಕೆರೆಗೆ ನೀರು ಹರಿದು ಬರುವಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆಏರಿ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇ ಶದಲ್ಲಿ ಸಸಿಬೆಳೆಸುವುದು, ಕಲ್ಯಾಣಿ ಪುನಶ್ಚೇತನ, ನಾಲಾ ಪುನಶ್ಚೇತನ,ಗೋ ಕಟ್ಟೆ ನಿರ್ಮಾಣ, ಬಚ್ಚಲು ಗುಂಡಿ, ಚೆಕ್ ಡ್ಯಾಂಕೊಳವೆ ಬಾವಿ ಪುನಶ್ಚೇತನ, ಅರಣ್ಯೀಕರಣ ಕಾಮಗಾರಿಗಳಿಗೆ ಅವಕಾಶ ಇರುವ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕು ಎಂಬಬಗ್ಗೆ ಮಾರ್ಗಸೂಚಿ ಸಹ ನೀಡಲಾಗಿದೆ.
ಅದರಂತೆ, ಮೊದಲ ಹಂತದಲ್ಲಿ ಹಾವೇರಿ- 1,177,ಬೆಳಗಾವಿ-1,105, ಬಳ್ಳಾರಿ- 477, ಉತ್ತರ ಕನ್ನಡ-423, ತುಮಕೂರು-407, ಕಲಬುರಗಿ-391, ಧಾರವಾಡ- 372, ಬಾಗಲಕೋಟೆ-262, ಕಾಮಗಾರಿಕೈಗೆತ್ತಿಕೊಳ್ಳಲಾಗಿದೆ.ಇನ್ನು ಳಿ ದಂತೆ ಮೈಸೂರು- 255,ವಿಜಯ ಪುರ-224, ಕೊಪ್ಪಳ- 190, ಕೊಡ ಗು- 181,ಚಿಕ್ಕಬಳ್ಳಾಪುರ-170, ರಾಮನಗರ-160, ಚಿಕ್ಕಮಗಳೂರು- 155, ಮಂಡ್ಯ-148, ಶಿವಮೊಗ್ಗ-132,ಉಡುಪಿ-132, ಕೋಲಾರ-131, ಹಾಸನ- 109,ಗದಗ-76, ಚಾಮರಾಜನಗರ-73, ದಾವಣಗೆರೆ-73,ಚಿತ್ರದುರ್ಗ-63, ಬೆಂಗಳೂರು ಗ್ರಾಮಾಂತರ-56,ಯಾದಗಿರಿ-55, ದಕ್ಷಿಣ ಕನ್ನಡ-18 ಹಾಗೂ ಬೆಂಗಳೂರು ಜಿಲ್ಲೆಯಲ್ಲಿ ಐದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟಾರೆ ಜಲಶಕ್ತಿ ಅಭಿಯಾನದಡಿ ಸಮಗ್ರ ಕೆರೆಅಭಿ ವೃದ್ಧಿ- 4,528, ನಾಲಾ ಪುನ ಶ್ಚೇತನ-11,344,ಕಲ್ಯಾಣಿ ಪುನಶ್ಚೇತನ-1070, ಗೋ ಕಟ್ಟೆಗಳನಿರ್ಮಾ ಣ- 2,514, ಮಳೆ ನೀರು ಕೊಯ್ಲು -4,624,ಮಲ್ಟಿ ಆರ್ಚ್ ಚೆಕ್ ಡ್ಯಾಂ- 2,138, ಬೋಲ್ಡರ್ ಚೆಕ್-5105, ಸೋಕ್ ಪಿಟ್ (ಬಚ್ಚಲು ಗುಂಡಿ)-1,06,345,ಕೊಳವೆ ಬಾವಿ ರೀಚಾರ್ಜ್- 9892, ಅರಣ್ಯೀಕರಣಕಾಮಗಾರಿ- 12,334, ಕೃಷಿ ಹೊಂಡ-39,386, ಬದುನಿರ್ಮಾಣ- 94,135, ತೆರೆದ ಬಾವಿ- 5,665ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆರೂಪಿಸಲಾಗಿದೆ.
ಜಲಶಕ್ತಿ ಅಭಿಯಾನಕ್ಕೆ ಗ್ರಾಮೀಣಜನರಿಂದಲೂ ಉತ್ತಮ ಸ್ಪಂದನೆದೊರೆತಿದ್ದು ಹಳ್ಳಿಗಳಲ್ಲಿ ಕೆರೆ-ಕಲ್ಯಾಣಿಪುನಶ್ಚೇತನಗೊಳ್ಳುತ್ತಿದೆ. 100ದಿನಗಳಲ್ಲಿ ನಿಗದಿತ ಗುರಿಸಾಧಿಸಲಾಗುವುದು.
- ಅನಿರುದ್ಧ್ ಶ್ರವಣ್,ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ
ಎಸ್. ಲಕ್ಷ್ಮಿನಾರಾಯಣ