Advertisement
ಗುಜ್ಜರಕೆರೆ ಅಭಿವೃದ್ಧಿ ಈ ಪರಿಸರದ ಸಾರ್ವಜನಿಕರ ಬಹು ಕಾಲದ ಬೇಡಿಕೆಯಾಗಿತ್ತು. ಗುಜ್ಜರಕೆರೆ ಸಮಿತಿ, ಮಂಗಳಾದೇವಿ ದೇವಸ್ಥಾನ ಭಕ್ತ ವೃಂದ, ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಭಕ್ತವೃಂದವು ಈ ಕೆರೆ ಅಭಿವೃದ್ಧಿಗೆ ಬೇಡಿಕೆ ಇಟ್ಟಿತ್ತು ಎಂದಿದ್ದಾರೆ.
ಕೆಲವು ವರ್ಷಗಳಿಂದ ಕೆರೆಗೆ ಈ ಪರಿಸರದ ಕೊಳಚೆ ನೀರು ಸೋರಿಕೆಯಾಗುತ್ತಿತ್ತು. ಈ ಯೋಜನೆಯಲ್ಲಿ ಅದನ್ನು ತಡೆಯಲು ವ್ಯವಸ್ಥೆ ಮಾಡಲಾಗುತ್ತದೆ. ಕೆರೆಯಲ್ಲಿ ಬೆಳೆವ ಗಿಡಗಂಟಿಗಳಿಂದ ನೀರು ಕಲುಷಿತವಾಗದಂತೆ ಔಷಧಗಳನ್ನು ಸಿಂಪಡಿಸಲಾಗುವುದು. ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಅನುಕೂಲವಾಗುವಂತೆ ವಿಶೇಷ ಯೋಜನೆಯನ್ನು ಕೂಡ ರೂಪಿಸಲಾಗಿದೆ. ಈಗಾಗಲೆ ಕೆರೆಯ ಹೂಳೆತ್ತುವ ಕಾರ್ಯ ಸಹಿತ ಇನ್ನಿತರ ಕೆಲಸಗಳು ಪ್ರಾರಂಭವಾಗಿದೆ. ಮಳೆಗಾಲದ ಸಂದರ್ಭ ಕಾಮಗಾರಿಯ ವೇಗ ಕುಂಠಿತವಾದರೂ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ ನೀಡಿದ್ದಾರೆ.