Advertisement

ಸಾಗರಮಾಲಾ ಯೋಜನೆಯಿಂದ ಅಭಿವೃದ್ಧಿ: ನಳಿನ್‌

01:00 AM Mar 06, 2019 | Harsha Rao |

ಪಣಂಬೂರು: ಸಾಗರಮಾಲಾ ಯೋಜನೆಯಿಂದ ಬಂದರುಗಳ ಅಭಿವೃದ್ಧಿ, ಹೆದ್ದಾರಿ ನಿರ್ಮಾಣ, ಮೀನುಗಾರಿಕೆ ಜೆಟ್ಟಿ ಜಿಲ್ಲೆಯಲ್ಲಿ ಸಾಧ್ಯವಾಗಿದೆ. ಸಂಸದನಾದ ಬಳಿ 16 ಸಾವಿರ ಕೋ.ರೂ. ಕೇಂದ್ರದ ಅನುದಾನ ಪಡೆಯುವಲ್ಲಿ ಯಶಸ್ವಿ ಯಾಗಿದ್ದೇನೆ ಎಂದು ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಕುಳಾç ಜೆಟ್ಟಿ, ಉಡುಪಿ-ದ.ಕ. ನಡುವೆ ಬೈಪಾಸ್‌ ರಸ್ತೆ, ಕೂಳೂರು ಸೇತುವೆ ಸಹಿತ 4,000 ಕೋ.ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಾ.ಹೆ. 66ರ ಮೂಲ್ಕಿ-ಕಟೀಲು, ಬಜಪೆ-ಬಿ.ಸಿ.ರೋಡ್‌ ಮೂಲಕ ಪಾಣೆಮಂಗಳೂರು, ಮೆಲ್ಕಾರ್‌ ಆಗಿ ತೊಕ್ಕೊಟ್ಟು ಸಂಪರ್ಕಿಸುವ ಬೈಪಾಸ್‌ ಹೆದ್ದಾರಿ ರಸ್ತೆಗೆ 2,500 ಕೋಟಿ ರೂ., ಸಾಣೂರು ಜಂಕ್ಷನ್‌ನಿಂದ ಬಿಕರ್ನಕಟ್ಟೆ ರಾ.ಹೆ. 169ನ್ನು ಭಾರತ್‌ ಮಾಲಾ ಯೋಜನೆಯಡಿ ವಿಸ್ತರಣೆಗೆ 1,163 ಕೋಟಿ ರೂ., ಕುಳಾç ಜೆಟ್ಟಿ ನಿರ್ಮಾಣಕ್ಕೆ 196 ಕೋಟಿ ರೂ. ಹಾಗೂ ಕೂಳೂರು ಸೇತುವೆಗೆ 65 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಹೇಳಿದರು.

ರಾಜಕೀಯವಿಲ್ಲ: ಖಾದರ್‌
ಸಚಿವ ಯು.ಟಿ. ಖಾದರ್‌ ಮಾತನಾಡಿ, ಅಭಿವೃದ್ಧಿ ಜನತೆಗೆ ಅನುಕೂಲಕರವಾಗಿದ್ದರೆ ಪಕ್ಷಾತೀತವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ವಿಲ್ಲ ಎಂದರು.

ಶಾಸಕ ಡಾ| ಭರತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್‌, ಜಯ ಸಿ. ಕೋಟ್ಯಾನ್‌, ಸೂರ್ಯವಂಶಿ,  ಗಣೇಶ್‌ ಹೊಸಬೆಟ್ಟು, ಪುರುಷೋತ್ತಮ ಚಿತ್ರಾಪುರ, ಸುಧಿಧೀರ್‌ ಕಣ್ಣೂರು, ಸುಮಿತ್ರಾ ಕೆ., ರಘುವೀರ್‌ ಪಣಂಬೂರು ಮೊದಲಾದವರು ಉಪಸ್ಥಿತರಿದ್ದರು.

Advertisement

ಮೇ ಅಂತ್ಯದೊಳಗೆ ಕುಳಾç ಜೆಟ್ಟಿ: ಗಡ್ಕರಿ
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ವಿಡಿಯೋ ಕಾನ್ಫ ರೆನ್ಸ್‌ ಸಂದೇಶ ನೀಡಿ, ಕುಳಾç ಜೆಟ್ಟಿ 2022ರ ಮೇ ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ. 300 ಮೀನುಗಾರಿಕೆ ದೋಣಿಗಳ ನಿಲುಗಡೆ, 27,100 ಮೆ. ಟನ್‌ ವ್ಯವಹಾರ ನಿರ್ವಹಿಸುವ ಸಾಮರ್ಥ್ಯ, ಹೈಜೆನಿಕ್‌ ಸೋಲಾರ್‌ ಡ್ರೈಯರ್‌ ಮತ್ತಿತರ ಸೌಲಭ್ಯ ಇರಲಿವೆ. ಬೈಪಾಸ್‌ ರಸ್ತೆ, ಪಂಪ್‌ವೆಲ್‌, ತೊಕ್ಕೊಟ್ಟು ಮೇಲ್ಸೇತುವೆಗಳನ್ನು ಮೇ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಸರಕಾರ ಅಗತ್ಯ ಸೌಲಭ್ಯವನ್ನು ಗುತ್ತಿಗೆದಾರರಿಗೆ ಒದಗಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next