Advertisement

ಓದಿನ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಿ: ಅನುರಾಧ

04:15 PM Jul 07, 2022 | Team Udayavani |

ದೇವನಹಳ್ಳಿ: ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಉನ್ನತ ಉದ್ಯೋಗ ಪಡೆಯಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನುರಾಧ ತಿಳಿಸಿದರು.

Advertisement

ತಾಲೂಕಿನ ಸಾದಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಜಿಲ್ಲಾ ಮಹಿಳ ಘಟಕದ ವತಿಯಿಂದ ಉದಯವಾಣಿ ಪತ್ರಿಕೆಯ ಶಿಕ್ಷಣ ಮಾರ್ಗದರ್ಶಿಯನ್ನು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಕೂಡ ಅರಿವಿರಬೇಕು. ಪಠ್ಯಪುಸ್ತಕದ ಜತೆಗೆ ನಮ್ಮ ಸುತ್ತಮುತ್ತಲಿನಲ್ಲಿ ಯಾವ ಯಾವ ಘಟನೆಗಳು ನಡೆಯುತ್ತಿವೆ. ದೇಶ ವಿದೇಶಗಳಲ್ಲಿ ಸನ್ನಿವೇಶಗಳಿವೆ ಎಂಬುದನ್ನು ವಿದ್ಯಾರ್ಥಿಗಳು ಪತ್ರಿಕೆ ಓದುವ ಮೂಲಕ ತಿಳಿಯಬೇಕು ಎಂದರು.

ವಿಚಾರ ತಿಳಿಯಲು ಪತ್ರಿಕೆ ಸುಲಭ ಮಾರ್ಗ: ಪತ್ರಿಕೆ ಒಂದು ಗ್ರಂಥಾಲಯದಂತೆ. ಎಲ್ಲಾ ವಿಷಯಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಚಾರಗಳ ಬಗ್ಗೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಾದಹಳ್ಳಿ ಪ್ರೌಢಶಾಲೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಬರುವುದರಿಂದ ಅವರಿಗೆ ಸಾಮಾನ್ಯ ಜ್ಞಾನ ತಿಳಿಸುವಲ್ಲಿ ಈ ಪತ್ರಿಕೆ ಸಾಕಷ್ಟು ಪ್ರಭಾವ ಬೀರುತ್ತದೆ.

ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಬಹುದು. ನಮ್ಮ ಸುತ್ತಮುತ್ತಲಿನ ವಿಚಾರ ತಿಳಿದುಕೊಳ್ಳಲು ಪತ್ರಿಕೆ ಸುಲಭ ಮಾರ್ಗವಾಗಿದೆ. ಇದರ ಸದುಪಯೋಗ ಪಡೆಯಿರಿ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೆಚ್ಚು ವಿದ್ಯಾಭ್ಯಾಸ ಮಾಡಿ ತಾಲೂಕಿಗೆ ಉತ್ತಮ ಅಂಕ ಪಡೆಯುವುದರ ಮೂಲಕ ತಂದೆ ತಾಯಿಗೆ, ಶಿಕ್ಷಕರಿಗೆ ಕೀರ್ತಿ ತರಬೇಕು. ಎಸ್‌ಎಸ್‌ಎಲ್‌ಸಿ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಗೋಲ್ಡನ್‌ ಲೈಫ್ ಆಗಿದೆ. ಮತ್ತೆ ಈ ಜೀವನ ಸಿಗುವುದಿಲ್ಲ ಎಂದರು.

Advertisement

ಮಕ್ಕಳ ಕಲಿಕೆಗೆ ಅನುಕೂಲ: ಮುಖ್ಯಶಿಕ್ಷಕ ಲಿಂಗಪ್ಪ ಎಸ್‌. ಕೆಂದೂರ್‌ ಮಾತನಾಡಿ, ಗ್ರಾಮೀಣ ಎಸ್‌. ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ದೃಷ್ಟಿಯಿಂದ ಉದಯವಾಣಿ ಪತ್ರಿಕೆಯನ್ನು ಜಿಲ್ಲಾ ಕರವೇ ಸ್ವಾಭಿಮಾನದ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಅವರು ಮಕ್ಕಳ ಅನುಕೂಲಕ್ಕಾಗಿ ಪ್ರತಿನಿತ್ಯ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಯನ್ನು ನೀಡುತ್ತಿರುವುದರಿಂದ ಎಸ್‌ಎಸ್‌ಎಲ್‌ಸಿ ಮಕ್ಕಳ ಕಲಿಕೆಗೆ ಅನುಕೂಲವಾಗಿದೆ.

ವಿದ್ಯಾರ್ಥಿಗಳು ಮತ್ತಷ್ಟು ಪರಿಶ್ರಮ ಹಾಕಿ ಓದಬೇಕು. ಶಿಕ್ಷಕರು ಹೇಳಿಕೊಡುವ ಪಾಠ ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ತಾಲೂಕು ಗೌರವಾಧ್ಯಕ್ಷ ಮುನೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನಿತಾ, ಲಕ್ಷ್ಮೀ, ಶಿಕ್ಷಕಿ ಪ್ರತಿಮಾ, ಶೈಲಜಾ, ಸೈಯಿದಾ ರೂಹಿಲಾ ಹಾಗೂ ಶಿಕ್ಷಕ ವರ್ಗ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next