Advertisement

ದೇವೇಗೌಡರು ನನಗೆ ಮೋಸ ಮಾಡಿದ್ರು

02:55 PM Apr 20, 2018 | Team Udayavani |

ತರೀಕೆರೆ: ಜನತಾದಳದ ಟಿಕೆಟ್‌ ಕೇಳಿಕೊಂಡು ನಾನು ಅವರ ಬಳಿ ಹೋಗಿರಲಿಲ್ಲ. ಪಕ್ಷಕ್ಕೆ ಸೇರ್ಪಡೆಗೊಂಡ ಕೆಲವೇ ತಿಂಗಳ ಅವಧಿಯಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟನೆ ಮಾಡಿದ್ದೆ. ಜೆಡಿಎಸ್‌ ವರಿಷ್ಠ , ಮಾಜಿ ಪ್ರಧಾನಿ ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ತರೀಕೆರೆಯಲ್ಲಿ ಟಿಕೆಟ್‌ ಘೋಷಣೆ ಮಾಡಿದ್ದರು. ಅವರು ಟಿಕೆಟ್‌ ನೀಡದೆ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಟಿ.ಎಚ್‌.ಶಿವಶಂಕರಪ್ಪ ಹೇಳಿದರು.

Advertisement

ಅವರು ತಮ್ಮ ಕಾರ್ಯಾಲಯದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು. ಮಾಜಿ ಶಾಸಕ ಜಿ.ಎಚ್‌. ಶ್ರೀನಿವಾಸ್‌ ತರೀಕೆರೆ ತಾಲೂಕಿನಲ್ಲಿ ಜೆಡಿಎಸ್‌ ಪಕ್ಷವನ್ನು ಧೂಳಿಪಟ ಮಾಡುತ್ತೇನೆ ಎಂದಿದ್ದರು. ಜೊತೆಗೆ ಮುಖ್ಯಮಂತ್ರಿಗಳಿಂದ ಭ್ರಷ್ಟ ಶಾಸಕ ಎನಿಸಿಕೊಂಡಿದ್ದವರಿಗೆ ಪಕ್ಷ ಸೇರ್ಪಡೆಗೊಳಿಸಿರುವುದು, ಅಪ್ಪ ಮಕ್ಕಳು ಜನತೆಗೆ ಉತ್ತರ ನೀಡಬೇಕು.

ಜೆಡಿಎಸ್‌ ಮುಖಂಡರು ರಾಜನಹಳ್ಳಿ ಮಠ, ಹಾಸನ, ಮೂಡಿಗೆರೆ ಮತ್ತು ತರೀಕೆರೆ ನಿನಗೆ ಟಿಕೆಟ್‌ ನೀಡುತ್ತೇನೆ. ಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊ ಎಂದವರು, ಏಕಾಏಕಿ ಟಿಕೆಟ್‌ ನೀಡದೆ ಮಾತು ತಪ್ಪಿದ್ದಾರೆ. ಇದು ನನ್ನ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿತು. ನನಗೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಇದು ನನ್ನ ಕೊನೆಯ ಚುನಾವಣೆ. ರಾಜಕೀಯವಾಗಿ ನಿರಂತರವಾಗಿ ಇರುತ್ತೇನೆ ಎಂದು ಗದ್ಗಿತರಾದರು. 

ತಾಲೂಕಿನಲ್ಲಿ ನೆಲಕಚ್ಚಿದ ಜನತಾದಳ ಪಕ್ಷಕ್ಕೆ ಸಮರ್ಥ ನಾಯಕತ್ವ ನೀಡಿ ಪಕ್ಷ ಸಂಘಟನೆ ಮಾಡಲಾಗಿತ್ತು. ಬುಧವಾರ ತಾಲೂಕು ಕಂಡ ಅತ್ಯಂತ ಭ್ರಷ್ಟಚಾರಿಗೆ ಟಿಕೆಟ್‌ ನೀಡಿರುವುದನ್ನು ಪಕ್ಷದ ಎಲ್ಲಾ ಪದಾಧಿಕಾರಿಗಳು ಖಂಡಿಸಿದ್ದಾರೆ. ಭ್ರಷ್ಟನನ್ನು ಮನೆಗೆ ಕಳುಹಿಸಬೇಕಾಗಿದೆ ಎಂದರು.

ಚುನಾವಣೆಗೆ ಪಕ್ಷ ಸಂಘಟನೆಗೆ ಖರ್ಚು ಮಾಡಿರುವ ದುಡ್ಡನ್ನು ನಾನು ಕೊಡುತ್ತೇನೆ ಎಂಬ ದುರಹಂಕಾರದ ಮಾತನ್ನು ಜಿ.ಎಚ್‌.ಶ್ರೀನಿವಾಸ್‌ ಹೇಳಿದ್ದಾರೆ. ನಾನು ಹಣಕ್ಕಾಗಿ ರಾಜಕಾರಣ ಮಾಡಿದವನಲ್ಲ, ನಾನು ಜನರ ಮಧ್ಯೆ ಬೆಳೆದು ಬಂದವನು, ಯಾರೇ ಹಣದ ಆಮಿಷ ಒಡ್ಡಿದರೂ ಅದಕ್ಕೆ ಭಾಗುವುದಿಲ್ಲ. ಬರಲಿರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದೇನೆ. ತಾಲೂಕಿನ ಮತದಾರರ, ಸ್ನೇಹಿತರ, ಪಕ್ಷದಲ್ಲಿ ಒಡನಾಡಿಗಳ ಎಲ್ಲರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ಮುಖಂಡರಾದ ಜಿ.ಪಂ ಮಾಜಿ ಸದಸ್ಯ ಶಾಂತವೀರಪ್ಪ, ಹೇಮಾವತಿ ಕೃಷ್ಣಪ್ಪ, ಶಾರದಾ ವೇಲುಮುರಗನ್‌, ಕೃಷ್ಣಪ್ಪ, ಡಾಕ್ಯನಾಯ್ಕ, ಡಿ.ವಿ.ಪದ್ಮರಾಜ್‌, ಟಿ.ಎಸ್‌.ರಮೇಶ್‌, ಈರಣ್ಣ, ಟಿಡಿಆರ್‌.ಬಾಬು, ಎಪಿಎಂಸಿ ಉಪಾಧ್ಯಕ್ಷ ಪಾಂಡುರಾವ್‌ ಜಾಧವ್‌, ದೇವೇಗೌಡ, ಗೋವಿಂದಪ್ಪ, ವಿಜಯಕುಮಾರ್‌, ರಂಗಸ್ವಾಮಿ, ರಾಘವೇಂದ್ರ, ಕುರುಬ ಸಮಾಜದ ಮುಖಂಡ ಒಗ್ಗಪ್ಪರ ಮಂಜಣ್ಣ, ಇನ್ನಿತರರು ಮಾತನಾಡಿ, ಟಿ.ಎಚ್‌.ಶಿವಶಂಕರಪ್ಪ ಅವರು ಯಾವುದೇ ಕಾರಣಕ್ಕೂ ದೃತಿಗೆಡುವುದು ಬೇಡ. ನಾವೆಲ್ಲ ನಿಮ್ಮ ಜೊತೆಯಲ್ಲಿದ್ದೇವೆ. ಎಲ್ಲಾ ರೀತಿಯ ಸಹಕಾರ ನೀಡುತ್ತವೆ. ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೇವೆ. ಯಾವುದೇ ಅನುಮಾನ ಬೇಡ. ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಒತ್ತಾಯಿಸಿದರು. ಪಕ್ಷದ ಸಂಘಟನೆಯಲ್ಲಿದ್ದ ಮುಖಂಡರು ಜನತಾದಳಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next