Advertisement

ವಿನಾಶಕಾರಿ ಭೂಕಂಪಗಳು; ಇಲ್ಲಿದೆ ಜಗತ್ತಿನಲ್ಲಿ ಈವರೆಗೆ ದಾಖಲಾದ ಭೂಕಂಪಗಳ ವಿವರ

08:02 PM Feb 06, 2023 | Team Udayavani |

ಪ್ರತಿ ವರ್ಷವೂ ಜಗತ್ತಿನಲ್ಲಿ ಸುಮಾರು 20 ಸಾವಿರ ಭೂಕಂಪಗಳು ಸಂಭವಿಸುತ್ತವೆ. ಅಂದರೆ, ದಿನಕ್ಕೆ ಸರಾಸರಿ 55 ಭೂಕಂಪಗಳು. ಈ ಪೈಕಿ ಕೆಲವು ದೊಡ್ಡಮಟ್ಟದ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಉಂಟುಮಾಡುತ್ತವೆ. ಜಗತ್ತಿನಲ್ಲಿ ಈವರೆಗೆ ದಾಖಲಾದ ಭೂಕಂಪಗಳು ಇಂತಿವೆ.

Advertisement

ರಷ್ಯಾ, 1952
ಇಲ್ಲಿನ ಕಮ್‌ಚಟ್ಕಾ ಪರ್ಯಾಯ ದ್ವೀಪದಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿ 2,000 ಮಂದಿ ಸಾವಿಗೀಡಾದರು. ಸಮುದ್ರದಡಿಯಲ್ಲಿ ಭೂಮಿ ಕಂಪಿಸಿದ ಕಾರಣ, ದೊಡ್ಡ ಮಟ್ಟದ ಸುನಾಮಿಯೂ ಎದ್ದಿತ್ತು. ರಕ್ಕಸ ಅಲೆಗಳು ಪೆರು, ಚಿಲಿ, ನ್ಯೂಜಿಲೆಂಡ್‌ವರೆಗೆ ತಲುಪಿ ಅಪಾರ ಹಾನಿ ಉಂಟುಮಾಡಿದವು.

ಚಿಲಿ, 1960
ಚಿಲಿಯ ಬಯೋ ಬಯೋ ಎಂಬಲ್ಲಿ 1960ರಲ್ಲಿ ಸುಮಾರು 10 ನಿಮಿಷಗಳ ಕಾಲ ಭೂಮಿಯು ಕಂಪಿಸಿತ್ತು. ಪರಿಣಾಮ, 6 ಸಾವಿರ ಮಂದಿ ಮೃತಪಟ್ಟಿದ್ದರು. ಈ ಭೂಕಂಪದ ತೀವ್ರತೆ ಸುಮಾರು 9.4 ಮತ್ತು 9.6 ತೀವ್ರತೆಯಲ್ಲಿತ್ತು.

ಅಲಾಸ್ಕಾ, 1964
ಗುಡ್‌ಫ್ರೈಡೆ ದಿನದಂದೇ ಈ ದುರಂತ ಸಂಭವಿಸಿತ್ತು. ರಿಕ್ಟರ್‌ ಮಾಪಕದಲ್ಲಿ 9.2 ತೀವ್ರತೆಯಲ್ಲಿ ಭೂಮಿ 5 ನಿಮಿಷಗಳ ಕಾಲ ಕಂಪಿಸಿತ್ತು. ಇದು ಉತ್ತರ ಅಮೆರಿಕದಲ್ಲಿ ಹಿಂದೆಂದೂ ದಾಖಲಾಗದ ಪ್ರಬಲ ಭೂಕಂಪವಾಗಿತ್ತು. ಕಂಪನಕ್ಕೆ 9 ಮಂದಿ ಬಲಿಯಾದರೆ, ನಂತರದಲ್ಲಿ ಎದ್ದ ಸುನಾಮಿಗೆ 100 ಮಂದಿ ಅಸುನೀಗಿದ್ದರು.

ಗುಜರಾತ್‌ನ ಭುಜ್‌, 2001
ಎರಡು ಶತಮಾನಗಳಲ್ಲಿ ಭಾರತ ಕಂಡ 3ನೇ ಅತಿ ಪ್ರಬಲ ಭೂಕಂಪವಿದು. ಈ ದುರಂತವು 20 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದಲ್ಲದೇ, ಸಾವಿರಾರು ಮನೆಗಳನ್ನು ನಾಶ ಮಾಡಿತು. ಲಕ್ಷಾಂತರ ಮಂದಿಯನ್ನು ನಿರ್ವಸಿತರನ್ನಾಗಿಸಿತು.

Advertisement

ಸುಮಾತ್ರ ಭೂಕಂಪ-ಸುನಾಮಿ, 2004
ಹಿಂದೆಂದೂ ಕಂಡಿರದಂಥ ವಿನಾಶಕಾರಿ ನೈಸರ್ಗಿಕ ಪ್ರಕೋಪವಿದು. ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ 9.1 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದಲ್ಲದೆ, 100 ಅಡಿ ಎತ್ತರಕ್ಕೆ ಎದ್ದ ಸುನಾಮಿ ಅಲೆಗಳು ಥಾಯ್ಲೆಂಡ್‌, ಶ್ರೀಲಂಕಾ, ಭಾರತ ಮತ್ತು ಇಂಡೋನೇಷ್ಯಾ ಸೇರಿದಂತೆ 14 ದೇಶಗಳ 2.27 ಲಕ್ಷ ಮಂದಿಯನ್ನು ಬಲಿಪಡೆದುಕೊಂಡವು. ಭಾರತದಲ್ಲೇ 42 ಸಾವಿರ ಮಂದಿ ಸಾವನ್ನಪ್ಪಿದರು.

ನೇಪಾಳ, 2015
1934ರ ಬಳಿಕ ಮೊದಲ ಬಾರಿಗೆ ನೇಪಾಳವು 2015ರಲ್ಲಿ ದೊಡ್ಡ ಪ್ರಮಾಣದ ಭೂಕಂಪಕ್ಕೆ ಸಾಕ್ಷಿಯಾಯಿತು. ಇದರಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next