ಚಿಕ್ಕಮಗಳೂರು: ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ವರ್ಷ ವರ್ಷ ಹೆಚ್ಚಾಗುತ್ತಿದೆ ಇದರ ನಡುವೆ ಪ್ರವಾಸಿ ತಾಣಗಳಲ್ಲಿ ಹುಚ್ಚಾಟವೂ ಹೆಚ್ಚಾಗತೊಡಗಿದೆ.
ಇದೀಗ ಶ್ರೀ ಕ್ಷೇತ್ರ ದೇವರಮನೆ ಪ್ರದೇಶದಲ್ಲಿರುವ ಕಾಲಭೈರವೇಶ್ವರನ ಕ್ಷೇತ್ರದಲ್ಲಿ ಪ್ರವಾಸಿಗರು ರಸ್ತೆ ಮಧ್ಯ ವಾಹನಗಳನ್ನು ನಿಲ್ಲಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ ಇದರಿಂದ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಬರುವ ಭಕ್ತರಿಗೂ ಇರುಸು ಮುರಿಸು ಆಗುತ್ತಿದೆ.
ಒಂದು ಕಡೆ ಎಣ್ಣೆ ಹಾಕ್ಕೊಂಡ್, ಧಮ್ ಹೊಡ್ಕೊಂಡ್ ರಸ್ತೆ ಮಧ್ಯೆ ಮೋಜು ಮಸ್ತಿ ಮಾಡುತ್ತಿರುವ ಪ್ರವಾಸಿಗರು, ಇನ್ನೊಂದೆಡೆ ವಾಹನಗಳು ಓಡಾಡಲು ಜಾಗವಿಲ್ಲದಂತೆ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡದಲ್ಲಿ ಘಟನೆ ನಡೆದಿದ್ದು ಪ್ರವಾಸಿಗರಿಗೆ ಪೊಲೀಸರ ಭಯವಿಲ್ಲ, ಸ್ಥಳೀಯರ ಮಾತಿಗೆ ಕಿಮ್ಮತ್ತಿಯಿಲ್ಲ ಎಂಬಂತಾಗಿದೆ.
ಕೂಡಲೇ ಸಂಬಂಧಪಟ್ಟ ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಪ್ರವಾಸಿ ತಾಣಕ್ಕೆ ಕೆಟ್ಟ ಹೆಸರು ಬರುವುದರಲ್ಲಿ ಅನುಮಾನವಿಲ್ಲ.
ಇದನ್ನು ಓದಿ: Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್ ! ತಯಾರಕರ ವಿರುದ್ಧ ಕಾನೂನು ಕ್ರಮ