Advertisement

ಸಾಧಕರ ಸಾಧನೆ ಅರಿಯಲು ಯುವಜನತೆಗೆ ಸಲಹೆ

03:11 PM Jul 07, 2019 | Team Udayavani |

ದೇವರಹಿಪ್ಪರಗಿ: ಸಾಧಕರ ಸಾಧನೆಗಳನ್ನು ಇಂದಿನ ಯುವಜನತೆ ಅರಿತು ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸಾಹಿತಿ ಡಾ| ಕೃಷ್ಣ ಕೋಲಾØರ ಕುಲಕರ್ಣಿ ಹೇಳಿದರು.

Advertisement

ಪಟ್ಟಣದ ಕಲ್ಮೇಶ್ವರ ಶಿವಾನುಭವ ಮಂಟಪದಲ್ಲ್ತಿ ಅಂಬಿಕಾತನಯದತ್ತ ವೇದಿಕೆ ಸಿಂದಗಿ, ದೇವರಹಿಪ್ಪರಗಿ ಗೆಳೆಯರ ಬಳಗ ಹಾಗೂ ನಾಡಗೌಡ ಪರಿವಾರ ಸಂಯುಕ್ತ ಆಶ್ರಯದಲ್ಲಿ ನಡೆದ ದಿ| ಡಾ| ರಾಮರಾವ್‌ ನಾಡಗೌಡ ಸ್ಮರಣೋತ್ಸವ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ವೈದ್ಯರಾಗಿ ತಮ್ಮ ಜೀವಿತದ 45 ವರ್ಷ ಜನಸೇವೆ ಮಾಡಿದ ಡಾ| ರಾಮರಾವ್‌ ನಾಡಗೌಡ ಇಂದಿನ ಯುವ ವೈದ್ಯ ಸಮೂಹಕ್ಕೆ ಮಾದರಿಯಾಗಿದ್ದಾರೆ. ಅಂತೆಯೇ ಇಡಿ ನಾಡಗೌಡ ಪರಿವಾರ ಇಂಥ ಕಾರ್ಯಕ್ರಮ ಮೂಲಕ ಅವರಿಗೆ ನುಡಿನಮನ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಂದಗಿ ದ.ರಾ. ಬೇಂದ್ರೆ ಪ್ರತಿಷ್ಠಾನ ಅಧ್ಯಕ್ಷ ಡಾ| ಬಿ.ಆರ್‌. ನಾಡಗೌಡ ಮಾತನಾಡಿ, ಸಾಧಕರು ಹಾಗೂ ಕರ್ಮಯೋಗಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದ್ದು ಸಾಧಕರು ಗುರುವಿನ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಕರ್ಮಯೋಗಿಗಳು ಕಾಯಾ, ವಾಚಾ, ಮನಸಾ ಶ್ರಮ ಜೀವಿಗಳಾಗಿ ಕಾಯಕದಲ್ಲಿ ನಿರತರಾಗಿರುತ್ತಾರೆ. ಅಂತಹ ಕರ್ಮಯೋಗಿಯಾಗಿ ಬಾಳಿದವರು ನಮ್ಮ ತಂದೆ ರಾಮರಾವ್‌ ನಾಡಗೌಡರು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಗೋಪಾಲ ನಾಯಕ, ಸಿಂದಗಿಯ ಶಿವಪ್ಪಗೌಡ ಬಿರಾದಾರ ಮಾತನಾಡಿದರು. ಈ ವೇಳೆ ಸರೋಜಿನಿ ಕುಲಕರ್ಣಿ ಹಾಗೂ ಬಸಲಿಂಗಮ್ಮ ಕುಂಬಾರರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಎಸ್‌.ಎಸ್‌. ಬಬಲೇಶ್ವರ, ಡಾ| ಆರ್‌.ಆರ್‌. ನಾಯಕ, ಪಿ.ಜಿ. ಹಿರೇಮಠ, ಜಿ.ಬಿ. ಸಾಲಕ್ಕಿ, ಆರ್‌.ಆರ್‌. ಮಣೂರ, ಕೆ.ಬಿ. ಕಡೇಮನಿ, ಸಿ.ಕೆ. ಕುದರಿ, ಬಾಬುಗೌಡ ಪಾಟೀಲ, ಬಿ.ಕೆ. ಪಾಟೀಲ, ಎಸ್‌.ಎನ್‌. ಕೋರಿ, ಸಿ.ಐ. ಯರನಾಳ ಇದ್ದರು.

ರಮೇಶ ದೇಶಪಾಂಡೆ ಪ್ರಾರ್ಥಿಸಿದರು. ಶರಶ್ಚಂದ್ರ ನಾಡಗೌಡ ಸ್ವಾಗತಿಸಿದರು. ಬಿ.ಎಂ. ಪಾಟೀಲ, ನಾಗರಾಜ ಬಿರಾದಾರ ನಿರೂಪಿಸಿದರು. ಆರ್‌.ಕೆ.ನಾಡಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next