Advertisement
ಯಾರದೂ..? ತೋರ್ ಬೆರಳು ತುಟಿಯ ಮೇಲೆ ಹೋಗಿ ನಿಂತಾಗ “ಶ್..ಶ್’ ಸದ್ದು ಬಂತು. ಅವರು ನಿಂತ ಎಡಭಾಗಕ್ಕೆ ಕಲ್ಲಂಕಣದ ಕೋಟೆ ಬಾವಿ. ಅದರಲ್ಲಿ ಏನೋ ಅನಾಹುತವಾಗಿರಬಹುದೇ? ಅನುಮಾನ.
ಕ್ಷಣಾರ್ಧದಲ್ಲಿ ಕ್ಷಣಭಂಗುರ. ಇಣುಕಿದರೆ ಟರ್ಕಿ ಕೋಳಿ ಓಡಾಡುತ್ತಿದೆ. ಅರೆ, ಬಾವಿ ಮುಚ್ಚೋದು ಅಂದರೆ ಇಡೀ ಬಾವಿಗೆ ಮಣ್ಣು ತುರುಕಿ, ಬಂಡೆ ಹಾಸಿ, ನೆಲಸಮಮಾಡಿ ನಿಟ್ಟುಸಿರು ಬಿಟ್ಟುಬಿಡೋದೇ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬರ ಬಡಿದು, ರೈತರ ತೋಟದಲ್ಲಿ ಬಾವಿಗಳು ಮುಚ್ಚಿ ಹಾಕಿದ್ದಾರೆ. ಆದರೆ ಇವರು ಹಾಗೆ ಮಾಡಿಲ್ಲ. ಬಾವಿಯ ಕಂಠಪೂರ್ತಿ ಮುಚ್ಚಿ, ಮೆಟ್ಟಿಲು ಇಟ್ಟು. ಅದರೊಳಗೆ ದೊಡ್ಡ ದೊಡ್ಡ ಕೋಳಿಗಳನ್ನು ಬಿಟ್ಟು ಬಾವಿಯನ್ನು ಸದ್ಬಳಕೆ ಮಾಡಿದ್ದಾರೆ. ಹೀಗೆ ಮಾಡಿದ್ದರಿಂದ ಒಂದು ಕಡೆ ನೀರು ಇಂಗಿಸಿದಂತೆಯೂ ಆಯಿತು. ಮತ್ತೂಂದು ಕಡೆ ಕೋಳಿಗೂ ಮನೆಯಾಯಿತು ಅನ್ನೋದು ರಮೇಶ್ ಲೆಕ್ಕಾಚಾರ. ಅವರು ಆಗಾಗ ಬಾವಿಗಿಳಿದು ಅದನ್ನು ನೋಡಿಕೊಂಡು ಬರುತ್ತಾರೆ.
Related Articles
Advertisement
ಹೀಗೇಕೇ?“ನಾವಂತೂ ಭೂಮಿಗೆ ನೀರು ಕುಡಿಸುತ್ತಿಲ್ಲ. ಈ ರೀತಿಯಾದರೂ ಕುಡೀಲಿ’ ಅಂತ ಹೇಳಿ ರಮೇಶ್ ನಕ್ಕರು.
“ಸ್ವಲ್ಪ, ನೋಡಿ, ನೋಡಿ ಅಲ್ಲಿ, ಅಲ್ಲಿ..’ ಹೀಗೆ ಹೇಳಿ. ಎರಡೂ ಕೈಯನ್ನು ಸೊಂಟದ ಮೇಲೆ ಇಟ್ಟುಕೊಂಡು ನಿಂತರು. ಅವರಿಂದೆ ನಾವು. ನಮ್ಮ ಕಣ್ಣಿಗಂತೂ ಏನೂ ಕಾಣುತ್ತಿಲ್ಲ. ಬರೀ ಚಿಲಿಪಿಲಿ ದನಿಯೇ.. ಹೀಗಿದ್ದಾಗಲೇ, ಒಂದಷ್ಟು ಕಂದು ಬಣ್ಣ ಮರದ ಅಂಚಿಗೆ ಮಿಂಚಿ ಮರೆಯಾದಂತಾಯಿತು.
“ನೋಡಿ, ಕಲ್ಲು ಗೊರವಗಳನ್ನು. ಬಡ್ಡಿಮಂಗದ್ ಎಷ್ಟು ಧೈರ್ಯ ಗೊತ್ತ ಅವಕ್ಕೆ ಹದ್ದುಗಳನ್ನೂ ಅಟ್ಟಿಸಿಕೊಂಡು ಹೋಗ್ತವೆ. ನನ್ನ ಮಗಳು ಎಷ್ಟೋ ಸಲ ಕೋತಿ, ನಾಯಿನಾ ಓಡಿಸಿದಂತೆ ಕೋಲು ತಗೊಂಡು ಅಟ್ಟಿಸಿಕೊಂಡು ಹೋಗಿದ್ದೂ ಉಂಟು ‘ ನಕ್ಕು ನುಡಿದರು.
ಜನ ಕಟ್ಟಿಕೊಂಡು ಹೋಗಿ ಹೋರಾಟ ನಡೆಸಿ ನಿಲ್ಲಿಸಿದರು. ಪ್ರತಿ ಮಳೆಗಾಲದಲ್ಲಿ ಚನ್ನರಾಯಸ್ವಾಮಿ ಬೆಟ್ಟದ ಬಂಡೆಗಳ ಮೇಲಿಂದ ಧುಮುಕುವ ಜೋಗ್‌ಫಾಲ್ಸ್‌ನ್ನು ಛತ್ರಿ ಹಿಡಿದು ನೋಡಿಕೊಂಡು ಬರುತ್ತಾರೆ. ಅಂಥ ಪ್ರಕೃತಿ ಪ್ರೀತಿ ಅವರದ್ದು. “ಪಕ್ಷಿಗಳ ವೀಕ್ಷಣೆ ಮಾಡೋದು ನನಗೆ ಹವ್ಯಾಸ. ಅಂಥಾ ಜ್ಞಾನ ಇಲ್ಲ. ಅದರಲ್ಲಿ ಆಳವಾಗಿ ಇಳಿಯೋಕೆ ಸಮಯ ಬೇಕು. ಕೃಷಿ ಕೆಲಸಗಳು ಜಾಸ್ತಿ ಇರೋದರಿಂದ ಅದನ್ನು ಮಾಡೋಕೆ ಆಗಲಿಲ್ಲ. ಆದರೆ ಒಬ್ಬ ರೈತನಾಗಿ ಹೀಗೂ ಮಾಡಬಹುದಲ್ಲ ಅಂತ ಪ್ರಯೋಗ ಶುರುವಾಡಿದೆ. ನಮ್ಮ ತೋಟದಲ್ಲಿ ಹೆಚ್ಚಾ ಕಡಿಮೆ 60 ಜಾತಿಯ ಹಣ್ಣುಗಳ ಗಿಡಗಳಿವೆ. ಗಿಡದಲ್ಲಿರೋ ಎಲ್ಲಾ ಹಣ್ಣುಗಳನ್ನು ಕೀಳ್ಳೋದಿಲ್ಲ. ಒಂದಷ್ಟು ಹಣ್ಣ ಕೊಳೆಯುತ್ತೆ, ಕೆಳಗೆ ಬೀಳುತ್ತೆ. ಹಾಗೇ ಆಗಲೀ ಅಂತ ಬಿಡುತ್ತೇನೆ. ಏಕೆಂದರೆ ಅವಕ್ಕೆ ಹುಳುಗಳು ನಾಟುತ್ತೆ. ಆ ಹುಳುಗಳನ್ನು ತಿನ್ನಲು ಪಕ್ಷಿಗಳು ಹುಡುಕಿಕೊಂಡು ಬರುತ್ತವೆ. ಇದರಿಂದಾಗಿ ಹಕ್ಕಿಗಳಿಗೆ ಒಂದು ಕಡೆ ಸೂರು, ಇನ್ನೊಂದು ಕಡೆ ಆಹಾರ ಎರಡೂ ಸಿಕ್ಕಂತೆ ಆಯಿತು. ನನ್ನ ತೋಟ ಪೂರ್ತಿ ಸಾವಯವ ಆದ್ದರಿಂದ ವಿಷ ಆಹಾರ ಇಲ್ಲ. ಅದಕ್ಕೆ ರಕ್ಷಣೆ, ಶುದ್ಧ ಆಹಾರ ಎರಡೂ ಸಿಕ್ಕಂತೆ ಆಗುತ್ತದೆ -ರಮೇಶ್ ವಿವರಿಸುತ್ತಾ ಹೋದರು. ಹಾಗಾದರೆ ಹಣ್ಣುಗಳನ್ನೆಲ್ಲ ಪಕ್ಷಿಗಳೇ ತಿಂದರೆ ಲಾಸ್ ಆಗೋಲ್ವೇ?
ಹೇಗೆ ಲಾಸ್ ಆಗುತ್ತದೆ? ಮೂರು ಕೆ.ಜಿ ಹಣ್ಣು ತಿಂದರೆ ನಾಲ್ಕು ಕೆ.ಜಿ ಹುಳ್ಳುಗಳನ್ನು ತಿನ್ನುತೆÌ. ಸಾವಿರಾರು ಹುಳು ಕೊಲ್ಲಲು ರೈತ ಎಷ್ಟೆಲ್ಲಾ ತಲೆ ಕೆಡಿಸಿಕೊಳ್ಳಬೇಕು, ಒದ್ದಾಡಬೇಕು ಗೊತ್ತಾ? ಇದು ಲಾಭ ಅಲ್ವೇ? ಲಾಸ್ ಹೇಗೆ ಆಗುತ್ತೆ?- ರಮೇಶ್ ಸಾರ್ಥಕ ಪ್ರಶ್ನೆ ಕೇಳಿದರು. ಪಕ್ಷಿಗಳಿಗೆ ಸಪೋಟ ಅಂದರೆ ಇಷ್ಟ. ಅದರಲ್ಲೂ ಸಾವಯದ್ದಾದರೆ ಪ್ರಾಣ. ಏಕೆಂದರೆ ಅದರಲ್ಲಿ ಹೆಚ್ಚಿನ ನ್ಯೂಟ್ರೀಷಿಯನ್, ಕಾಬೋìಹೈಡ್ರೇಟ್ ಇರುತ್ತವೆ. ಚೆರ್ರಿ , ಸೀಬೆ ಹಣ್ಣಗಳೂ ಪಕ್ಷಿಗಳಿಗೆ ಪ್ರಾಣಪ್ರಿಯ. ಇವರ ತೋಟದಲ್ಲಿ ಸಣ್ಣ, ಸಣ್ಣ ಚೆರಿಗಿಡಗಳಿವೆ. ಇವುಗಳಲ್ಲಿ ಒಂದಷ್ಟನ್ನು ಪಕ್ಷಿಗಳಿಗೆ ಅಂತಲೇ ಎತ್ತಿಡುತ್ತಾರೆ. ರಮೇಶ್ ಪಕ್ಷಿ ಪ್ರೀತಿ ಎಷ್ಟಿದೆ ಎಂದರೆ, ಎಷ್ಟೋ ಸಲ ನರ್ಸರಿಯಲ್ಲಿನ ಗಿಡಗಳನ್ನು ಮಾರಾಟ ಮಾಡಬೇಕಾದರೆ ಹಕ್ಕಿ ಗೂಡುಗಳು ಇವೆಯೇ ಅಂತ ನೋಡುತ್ತಾರೆ. ಒಂದು ಪಕ್ಷ ಗೂಡು ಕಟ್ಟಿದ್ದರೆ ಆ ಭಾಗದ ಗಿಡಗಳನ್ನು ಮಾರಾಟ ಮಾಡುವುದಿಲ್ಲ. ಹೀಗಾಗಿ ರಮೇಶ್ ಯೋಗ ಮಾಡುತ್ತಿದ್ದರೆ ಪಕ್ಷಿಗಳೇ ವೀಕ್ಷಕವಿವರಣೆ ಕೊಡುತ್ತಿರುತ್ತದೆ. ಇಡೀ ತೋಟದ ರಚನೆ ಕೂಡ ಪಕ್ಷಿಗಳ ಇರುವಿಕೆಗೆ ಪೂರಕವಾಗಿದೆ. ಪಶ್ಚಿಮದ ದಿಕ್ಕಿಗೆ ನೀಲಗಿಗಳಂಥ ಮರಗಳು ಇವೆ. ಹೀಗಾಗಿ ಎಷ್ಟೇ ಜೋರಾಗಿ ಗಾಳಿಬೀಸಿದರು ಹಕ್ಕಿಗಳಿಗೆ, ಗೂಡಿಗೆ ಯಾವುದೇ ತೊಂದರೆ ಆಗೋಲ್ಲ. ನರ್ಸರಿ ಮೂಲೆಯಲ್ಲಿ ಒಂದಷ್ಟು ತೊಗರಿ ಚೆಲ್ಲಿದ್ದಾರೆ. ಅವು ತಲೆ ಎತ್ತರಕ್ಕೆ ಬೆಳೆದಿದ್ದವು. “ನೋಡಿ, ಗಿಳಿಗಳಿಗೆ ತೊಗರಿ ಅಂದರೆ ಇಷ್ಟ. ಅದೋ…ಬಂತು ಬಂತು ನೋಡಿ…. ‘ ಅಂತ ತೋರಿಸಿದರು. ರಮೇಶರ ಪಿಳಿ ಪಿಳಿ ಕಣ್ಣಗಳಲ್ಲಿ ಒಂದಷ್ಟು ಚಿಟ್ಟೆ ಗಿಳಿಗಳು ಹಾರಿಹೋದಂತಾದವು. ಕಟ್ಟೆ ಗುರುರಾಜ್ ಚಿತ್ರಗಳು: ಶಿವಸುಬ್ರಹ್ಮಣ್ಯ ಕೆ.