Advertisement

ದೇವಲೋಕ ದಂಪತಿ ಕೊಲೆ ಪ್ರಕರಣ: ಮಂತ್ರವಾದಿ ಇಮಾಂ ಹುಸೈನ್‌ ಖುಲಾಸೆ

11:19 AM Jun 02, 2019 | Team Udayavani |

ಕಾಸರಗೋಡು.: ಪೆರ್ಲ ಸಮೀಪದ ದೇವಲೋಕದ ಶ್ರೀಕೃಷ್ಣ ಭಟ್‌(45) ಮತ್ತು ಅವರ ಪತ್ನಿ ಶ್ರೀಮತಿ (35) ಅವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಕರ್ನಾಟಕದ ಸಾಗರ ನಿವಾಸಿ, ಮಂತ್ರವಾದಿ ಎಸ್‌.ಎಚ್‌.ಇಮಾಂ ಹುಸೈನ್‌ನನ್ನು ಕೇರಳ ಹೈಕೋರ್ಟ್‌ ಸಾಕ್ಷ್ಯಧಾರಗಳ ಕೊರೆತೆ ಕಾರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.

Advertisement

ಪ್ರಕರಣದ ವಿವರ
1993 ಅ. 9ರಂದು ರಾತ್ರಿ ಶ್ರೀಕೃಷ್ಣ ಭಟ್‌ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಮನೆ ಹಿತ್ತಿಲ ತೋಟದಲ್ಲಿ ನಿಧಿಯಿದೆ ಹಾಗೂ ಅದನ್ನು ಹೊರತೆಗೆಯಲು ಮಂತ್ರವಾದಿ ಹುಸೈನ್‌ನ ಸಹಾಯನ್ನು ಶ್ರೀಕೃಷ್ಣ ಭಟ್‌ ಕೇಳಿದ್ದರು. ಪೂಜೆಗಾಗಿ ಭಟ್ಟರ ತೆಂಗಿನ ತೋಟದಲ್ಲಿ ಓರ್ವ ವ್ಯಕ್ತಿ ನಿಲ್ಲಲು ಸಾಧ್ಯವಾಗುವ ರೀತಿಯಲ್ಲಿ ಹೊಂಡ ತೋಡಿಸಿ ಅದರಲ್ಲಿ ಶ್ರೀಕೃಷ್ಣ ಭಟ್ಟರನ್ನು ಇಳಿಸಿ ಕಣ್ಣು ಮುಚ್ಚಿ ಪ್ರಾರ್ಥಿಸುವಂತೆ ಸೂಚಿಸಿದ್ದ. ಇದಕ್ಕೂ ಮೊದಲು ಪ್ರಸಾದವೆಂದು ತಿಳಿಸಿ ದಂಪತಿಗೆ ನಿದ್ದೆ ಮಾತ್ರೆ ಬೆರೆಸಿದ ನೀರನ್ನು ಕುಡಿಸಿದ್ದ. ಭಟ್ಟರು ಹೊಂಡಕ್ಕಿಳಿದು ಪ್ರಾರ್ಥಿಸುತ್ತಿದ್ದಂತೆ ಹಾರೆಯಿಂದ ಅವರ ತಲೆಗೆ ಹೊಡೆದು ಕೊಲೆಗೈದನೆಂದೂ, ಅನಂತರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀಮತಿಯನ್ನು ಉಸಿರುಗಟ್ಟಿಸಿ ಕೊಂದು 8 ಪವನ್‌ ಚಿನ್ನ ಮತ್ತು ನಗದನ್ನು ದರೋಡೆ ಮಾಡಿದ್ದಾಗಿ ಬದಿಯಡ್ಕ ಪೊಲೀಸರು ಹುಸೈನ್‌ ವಿರುದ್ಧ ಕೇಸು ದಾಖಲಿಸಿದ್ದರು.

19 ವರ್ಷ ಕಳೆದು ಬಂಧನ
ಆತನ ಪತ್ತೆಗಾಗಿ ಬದಿಯಡ್ಕ ಪೊಲೀಸರು 15 ವರ್ಷ ಕಾಲ ಶ್ರಮಿಸಿದ್ದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಪ್ರಕರಣವನ್ನು 2008ರಲ್ಲಿ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾ ಗಿತ್ತು. ಕೊಲೆ ನಡೆದು 19 ವರ್ಷ ಬಳಿಕ ಹುಸೈನ್‌ನನ್ನು ಕರ್ನಾಟಕದ ನೆಲಮಂಗಲದ ಕ್ವಾರ್ಟಸ್‌ನಿಂದ ಬಂಧಿಸಲಾಗಿತ್ತು.

ಜೈಲಿನಿಂದಲೇ ಮೇಲ್ಮನವಿ
ವಿಚಾರಣೆ ನಡೆಸಿದ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯವು ಆತನಿಗೆ 2013 ನ. 21ರಂದು ಅವಳಿ ಜೀವಾವಧಿ ಸಜೆ, 2 ಲ.ರೂ. ದಂಡ ವಿಧಿಸಿತ್ತು. ಹುಸೈನ್‌ ಜೈಲಿನಿಂದಲೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next