Advertisement

ಲಾಕ್‌ಡೌನ್‌ ಆದೇಶ ಸಮರ್ಪಕವಾಗಿ ಜಾರಿಯಾಗಲಿ

04:49 PM Apr 16, 2020 | Naveen |

ದೇವದುರ್ಗ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಮೇ 3ರ ವರೆಗೆ ಘೋಷಣೆಯಾಗಿರುವ ಲಾಕ್‌ಡೌನ್‌ ಆದೇಶ ಸಮರ್ಪಕವಾಗಿ ಜಾರಿಗೊಳಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌.ಎಸ್‌. ಪ್ರಸನ್ನಕುಮಾರ ತಿಳಿಸಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೋವಿಡ್ ನಿಯಂತ್ರಣಕ್ಕೆ ರೂಪಿಸಿರುವ ಎಪಿಎಂಸಿಯಲ್ಲಿ ರೈತರಿಗೆ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಶುದ್ಧ ಕುಡಿವ ನೀರು ಹಾಗೂ ಆರೋಗ್ಯ ಇಲಾಖೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಕೆಲ ಆರೋಗ್ಯ ಸೇವೆಗಳು, ಔಷಧಿ  ಕೊರತೆ ಇರುವುದು ಕಂಡುಬಂದಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಶುದ್ಧ ಕುಡಿವ ನೀರು ನಿರ್ವಹಣೆಗಾಗಿ ಈಗಾಗಲೇ ಗ್ರಾಪಂ, ಪಪಂ ಮತ್ತು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಗತ್ಯ ಖರ್ಚು-ವೆಚ್ಚಗಳಿಗಾಗಿ ಹಣ ಲಭ್ಯವಿದೆ ಎಂದರು.

ವಲಸೆ ಹೋಗಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಸ್ವಗ್ರಾಮಗಳಿಗೆ ಮರಳಿದ್ದು, ಅವರಲ್ಲಿ ರೇಷನ್‌ ಕಾರ್ಡ್‌ಗಳಿಲ್ಲ. ಅವರಿಗೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕಾರ್ಯದರ್ಶಿಗಳು, ದಾನಿಗಳು ನೀಡಿರುವ ಧಾನ್ಯ ವಿತರಿಸಲು ಸೂಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.