Advertisement

ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗ: ಮಹಿಳಾ ದಿನಾಚರಣೆ

04:32 PM Mar 22, 2017 | |

ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು   ನೆರೂಲ್‌ ಪಶ್ಚಿಮದ ದೇವಾಡಿಗ ಭವನದಲ್ಲಿ  ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುಣೆಯ ಖ್ಯಾತ ಕಥಕ್‌ ನೃತ್ಯಪಟು, ಭಾವನಾ ನೃತ್ಯ ಅಕಾಡೆಮಿಯ ಸಂಚಾಲಕಿ ಭಾವನಾ ರಾಮ ದೇವಾಡಿಗ ಅವರು ಆಗಮಿಸಿ ಮಾತನಾಡಿ, ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು. ಸಂಘದ ಪ್ರಗತಿಗಾಗಿ ನಾವೆಲ್ಲ ಸಹಕಾರ ಕೊಡಬೇಕು. ನಮ್ಮಲ್ಲಿರುವ ಕೀಳರಿಮೆ ಬಿಟ್ಟು ನಾವೆಲ್ಲರೂ ಒಂದೇ ಭಾವನೆಯಿಂದ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ ಎಂದು ನುಡಿದರು.

ನವಿ ಮುಂಬಯಿ ಪೊಲೀಸ್‌ ಮಹಿಳಾ ಸೆಲ್‌ನ ಪೊಲೀಸ್‌ ಇನ್ಸ್‌ಪೆಕ್ಟರ್‌ ಸೋನಾಲಿ ರಾಜುYರು ಅವರು ಮಾತನಾಡಿ, ಮಹಿಳೆಯರ ಸಬಲೀಕರಣದ ಬಗ್ಗೆ ವಿಸ್ತಾರವಾಗಿ ವಿವರಿಸಿ ಇಂದಿನ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಯುತವಾಗಿ ಎದುರಿಸಿ ಯಾವ ರೀತಿ ಅದರ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಸಭೆಗೆ ವಿವರಿಸಿ ಎಲ್ಲರಿಗೂ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರವಿ ಎಸ್‌. ದೇವಾಡಿಗ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಆರ್‌. ಮೊಲಿ ಅವರು ಗೌರವಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸುಂದರಿ ಮೊಲಿ ಹಾಗೂ ಇತರರನ್ನು ಅಭಿನಂದಿಸಿ  ಗೌರವಿಸಲಾಯಿತು. ಮಹಿಳಾ ದಿನಾಚರಣೆಯ ಬಗ್ಗೆ ಸವಿಸ್ತಾರವಾಗಿ ಉಪ ಕಾರ್ಯಾಧ್ಯಕ್ಷೆ ಸುರೇಖಾ ಎಚ್‌.  ದೇವಾಡಿಗ ವಿವರಿಸಿದರು.  ಭಾವನಾ ರಾಮ ದೇವಾಡಿಗರ ಸಿದ್ಧಿ-ಸಾಧನೆಗಳನ್ನು ಉಪ ಕಾರ್ಯಾಧ್ಯಕ್ಷೆ  ರಂಜನಿ ಮೊಲಿ ಅವರು ವಿವರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ಪಾಕಸ್ಪರ್ಧೆ, ಸಂಗೀತ ಸ್ಪರ್ಧೆ, ಇನ್ನಿತರ  ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ವಿಜೇತರಿಗೆ  ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು.

ಸ್ಪರ್ಧೆಯ ನಿರ್ವಾಹಕರಾದ ಡಾ| ರೇಖಾ ದೇವಾಡಿಗ, ರಮೇಶ್‌ ಬಿ. ದೇವಾಡಿಗ, ಪ್ರಫುಲ್ಲಾ ವಿ. ದೇವಾಡಿಗ, ಸುಶ್ಮಿತಾ ಡಿ. ದೇವಾಡಿಗ, ಸುರೇಶ್‌ ದೇವಾಡಿಗ, ಪ್ರೇಮಾ ಮೋಹನ್‌ದಾಸ್‌ ಅವರನ್ನು ಗೌರವಿಸಲಾಯಿತು. ರಮೇಶ್‌ ದೇವಾಡಿಗರು ಸಂಗೀತ ಸ್ಪರ್ಧೆಯ ಬಗ್ಗೆ   ಮಾತನಾಡಿದರು. ಪ್ರಫುಲ್ಲಾ ವಿ. ದೇವಾಡಿಗ ಅವರು ಇಂದಿನ ಯುಗದ ಮಹಿಳೆಯ ಬಗ್ಗೆ ವಿವರಿಸಿ, ನಾವೆಲ್ಲರೂ ಒಂದಾಗಿ ಅನ್ಯೋನ್ಯತೆಯಿಂದ ಇರಬೇಕು ಎಂದು ಕರೆಯಿತ್ತರು.

Advertisement

ಸಂಘದ ಪದಾಧಿಕಾರಿಗಳನ್ನು  ಹಾಗೂ ಆಡಳಿತ ಸಮಿತಿಯ ಸದಸ್ಯರನ್ನು, ಎಲ್ಲ ಪ್ರಾದೇಶಿಕ ಸಮನ್ವಯ ಸಮಿತಿಯ ಸದಸ್ಯರನ್ನು ಹಾಗೂ ಯುವ ವಿಭಾಗದ ಸದಸ್ಯರನ್ನು ಗೌರವಿಸಲಾಯಿತು. ಇತ್ತೀಚೆಗೆ ಮಹಿಳಾ ವಿಭಾಗ ಕೈಗೊಂಡ ಆಲಿಭಾಗ್‌ ಪಿಕ್ನಿಕ್‌ನಲ್ಲಿ ನಡೆದ ಅನೇಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ತನ್ವಿ ಡಿ. ದೇವಾಡಿಗ, ಕ್ಷಿತಿ ಜೆ. ದೇವಾಡಿಗ, ತನ್ವಿ ಶೇರಿಗಾರ್‌  ಮತ್ತು ಸ್ಫೂರ್ತಿ ಶೇರಿಗಾರ್‌ ಪ್ರಾರ್ಥನೆಗೈದರು.  ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಡಿ. ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.  ಜತೆ ಕಾರ್ಯದರ್ಶಿ ಪ್ರಮೀಳಾ ವಿ.  ಶೇರಿಗಾರ್‌ ವಂದಿಸಿದರು.  ಸಂಘದ ಶ್ರೀ ರಾಮ ಭಜನ ಮಂಡಳಿಯಿಂದ  ಭಜನ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ  ಮಹಾಪ್ರಸಾದ ವಿತರಿಸಲಾಯಿತು. ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next