Advertisement

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

10:50 PM Jan 26, 2022 | Team Udayavani |

ಹುಕ್ಕೇರಿ: ತಾಲೂಕಿನ ಶಿರಹಟ್ಟಿ ಬಿ.ಕೆ., ಬೆಳವಿ, ರಕ್ಷಿ-ಶಿರಗಾಂವ, ಕೊಟಬಾಗಿ, ಗುಡಸ, ಎಲಿಮುನ್ನೋಳಿ, ಯರಗಟ್ಟಿ, ಬಡಕುಂದ್ರಿ, ಬಸ್ತವಾಡ, ಯರನಾಳ, ಘೋಡಗೇರಿ, ಸುಲ್ತಾನಪುರ, ಹಿಡಕಲ್‌ ಡ್ಯಾಮ್‌ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಎಸ್ಸಿ-ಎಸ್ಟಿ ಕಾಲೋನಿಗಳ ರಸ್ತೆ ಸುಧಾರಣೆ, ಗೋಶಾಲೆ ನಿರ್ಮಾಣ, ವೃತ್ತ ಅಭಿವೃದ್ಧಿ, ಕೆರೆಗಳ ಸುಧಾರಣೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಉಮೇಶ ಕತ್ತಿ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.

Advertisement

ಈ ಮೂಲಕ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಸಂಕಲ್ಪ ಮಾಡಲಾಗಿದೆ. ಲೋಕೋಪಯೋಗಿ, ಜಿಪಂ, ನೀರಾವರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಪ್ರಗತಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಮತ್ತು ಅಧಿ ಕಾರಿಗಳು ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವ  ಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಪಿಡಬ್ಲೂ Âಡಿ ಎಇಇ ಗಿರೀಶ ದೇಸಾಯಿ, ಅಭಿಯಂತರಾದ ಪಿ.ಆರ್‌. ಕಾಮತ್‌, ಎಸ್‌.ಡಿ. ಕಾಂಬಳೆ, ಕಂದಾಯ ನಿರೀಕ್ಷಕ ಪ್ರವೀಣ ಮಾಳಾಜ, ಅ ಧಿಕಾರಿಗಳಾದ ಡಾ| ಎ.ಕೆ. ಚಂದ್ರಶೇಖರ, ತಾತ್ಯಾಸಾಹೇಬ ದೇಸಾಯಿ, ಪಿ.ಲಕ್ಷ್ಮೀನಾರಾಯಣ, ಸಂತೋಷ ಕಬ್ಬಗೋಳ, ಶೀಲಾ ತಳವಾರ ಇನ್ನಿತರರಿದ್ದರು

 

 

Advertisement

Udayavani is now on Telegram. Click here to join our channel and stay updated with the latest news.

Next