ಜೈಪುರ: ಮದುವೆ ದಿನವೇ ವಧು ಓಡಿ ಹೋಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಮೇ.3 ರಂದು ರಾಜಸ್ಥಾನದ ಸೈನಾ ಗ್ರಾಮದ ಮನಿಷಾ ಎಂಬ ಯುವತಿಯ ಮದುವೆ ಕಾರ್ಯಕ್ರಮದ ದಿನ. ವರ ಹಾಗೂ ಅವರ ಕುಟುಂಬಸ್ಥರು ವಧುವಿನ ಮನೆಗೆ ಮುಹೂರ್ತಕ್ಕಿಂತ ಮೊದಲೇ ಬಂದಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ಯಶಸ್ವಿಯಾಗಿ ನಡೆಯಬೇಕು ಎನ್ನುವಷ್ಟರಲ್ಲೇ ವಧು ಹೊಟ್ಟೆ ನೋವೆಂದು ಹೇಳಿ ವಾಸ್ ರೂಮ್ ಹೋಗಿ ಬರುವುದಾಗಿ ವರನ ಬಳಿ ಹೇಳಿದ್ದಾಳೆ.
ಆಯಿತೆಂದು ಮಂಟಪದಲ್ಲೇ ವರ ಕಾದಿದ್ದಾನೆ. ಐದೈದು ನಿಮಿಷ ಕಾದರೂ ವಧು ಬಾರದೇ ಇದ್ದಾಗ, ಎಲ್ಲರೂ ವಧುವನ್ನು ಹುಡುಕಲು ಶುರು ಮಾಡಿದ್ದಾರೆ. ಇದಾದ ಕೆಲ ಸಮಯದ ಬಳಿಕ ವಧು ತನ್ನ ಸಹೋದರ ಸಂಬಂಧಿಯೊಬ್ಬನೊಂದಿಗೆ ಓಡಿಹೋಗಿದ್ದಾಳೆ ಎನ್ನುವುದು ಗೊತ್ತಾಗಿದೆ.
ಈ ಕುರಿತು ವರ ದೂರು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ವಧುವಿನ ಮನೆಯಲ್ಲೇ ಸಿದ್ದವಾದ ಮಂಟಪದಲ್ಲೇ ಕಾದಿದ್ದಾರೆ. ತನ್ನ ಕುಟುಂಬದ 20 ಸದಸ್ಯರನ್ನು ವಧುವಿನ ಗ್ರಾಮದಲ್ಲೇ ನಿಲ್ಲಿಸಿದ್ದಾನೆ. ವರ ಮಂಟಪದಲ್ಲೇ, ವಧುವಿನ ಮನೆಯಲ್ಲೇ ಆಕೆ ಬರುವವರೆಗೆ ಕಾದಿದ್ದಾರೆ.
Related Articles
13 ದಿನಗಳ ಬಳಿಕ ಅಂದರೆ ಮೇ.15 ರಂದು ವಧುವನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಪೊಲೀಸರು ಮನೆಗೆ ತಲುಪಿಸಿದ್ದಾರೆ. ಓಡಿ ಹೋದ ವಧು ಮನೆಗೆ ಬಂದ ಬಳಿಕ ಕುಟುಂಬಸ್ಥರು ಮೊದಲು ನಿಶ್ಚಯವಾಗಿದ್ದ ವರನೊಂದಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ.