Advertisement

ಭೂಸ್ವಾಧೀನ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಿ

11:02 AM Sep 10, 2017 | Team Udayavani |

ಕಲಬುರಗಿ: ಭೂಸ್ವಾಧಿಧೀನ ಪ್ರಕರಣಗಳಲ್ಲಿ ಹೆಚ್ಚಿನ ವ್ಯಾಜ್ಯಗಳಿದ್ದು, ಹೈಕೋರ್ಟ್‌ಗಳಲ್ಲಿರುವ ಭೂಸ್ವಾಧೀನ
ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ
ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ
ಜಯಂತ ಪಟೇಲ್‌ ತಿಳಿಸಿದರು.

Advertisement

ನಗರದ ಹೈಕೋರ್ಟ್‌ ಪೀಠದಲ್ಲಿ ಲೋಕ ಅದಾಲತ್‌ನಲ್ಲಿ ಭಾಗವಹಿಸುವ ನ್ಯಾಯಾಧೀಶರು, ವಿಮಾ ಕಂಪನಿಗಳು,
ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಭೂಸ್ವಾಧೀನ ಪ್ರಕರಣಗಳಿಗೆ ನೀಡುವ ಪರಿಹಾರ ವಿಳಂಬ ಮಾಡಿದಲ್ಲಿ
ಬಡ್ಡಿ ಭರಿಸಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಪರಿಹಾರಕ್ಕಿಂತ ಬಡ್ಡಿ ಮೊತ್ತವೇ ಹೆಚ್ಚಿಗೆ ಆಗಿರುತ್ತದೆ. ಎಲ್ಲರೂ
ಮುತುವರ್ಜಿವಹಿಸಿ ಭೂಸ್ವಾಧೀನ ಪ್ರಕರಣಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಶೀಘ್ರವೇ ಪರಿಹಾರ ದೊರಕಿಸಬೇಕು
ಎಂದರು.

ಹೈಕೋರ್ಟ್‌ಗಳಲ್ಲಿ ಭೂಸ್ವಾಧೀನ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅನುಕೂಲವಾಗುವ ಹಾಗೆ ಅಡಿಶನಲ್‌ ಅಡ್ವೋಕೇಟ್‌ ಜನರಲ್‌ ಕಚೇರಿಯಿದೆ. ಅವರು ಸರ್ಕಾರಿ ಅಡ್ವೋಕೇಟ್‌ಗಳ ಸಹಾಯ ಪಡೆದು ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಜಿಲ್ಲಾ ಧಿಕಾರಿಗಳು ತಮ್ಮ ವಿಭಾಗದ ಸಹಾಯಕ ಆಯುಕ್ತರುಗಳಿಗೆ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಯಾವುದಾದರೂ ಒಂದು ಪ್ರದೇಶದ ಭೂಸ್ವಾಧೀನದ ದರ ನಿಗದಿಪಡಿಸಿ ಈ ಹಿಂದೆ ಪರಿಹಾರ ನೀಡಿದ್ದರೆ ಅದೇ
ಪ್ರದೇಶದ ಭೂಸ್ವಾ ಧೀನ ಪ್ರಕರಣಗಳು ಬಾಕಿ ಇದ್ದಲ್ಲಿ ಅವುಗಳಿಗೂ ಈ ಹಿಂದೆ ನೀಡಿರುವ ಪರಿಹಾರ ನೀಡಿ
ಇತ್ಯರ್ಥಗೊಳಿಸಬೇಕೆಂದು ಸರ್ಕಾರ ಅಧಿಸೂಚನೆ ಜಾರಿಗೊಳಿಸಿದೆ. ಅದರಂತೆ ಭೂಸ್ವಾಧೀನ ಪ್ರಕರಣಗಳನ್ನು
ಇತ್ಯರ್ಥಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, 2015ರಿಂದ ಜಾರಿಗೊಳಿಸಲಾದ ಹೊಸ ಭೂಸ್ವಾ ಧೀನ
ನೀತಿಯಿಂದ ಭೂಸ್ವಾ ಧೀನ ಪ್ರಕರಣಗಳಲ್ಲಿ ಪರಿಹಾರ ನೀಡಲು ಯಾವುದೇ ತೊಂದರೆಯಾಗುತ್ತಿಲ್ಲ. ಆದರೆ 2015ಕ್ಕಿಂತ ಹಿಂದಿನ ಪ್ರಕರಣಗಳಲ್ಲಿ ಪರಿಹಾರ ಇತ್ಯರ್ಥವಾಗದೆ ಹೈಕೋರ್ಟ್‌ ಪೀಠಗಳಲ್ಲಿ ಮೊಕದ್ದಮೆ ದಾಖಲಾಗುತ್ತಿವೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

Advertisement

ಕರ್ನಾಟಕ ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರರಾವ್‌, ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರರಾವ್‌, ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್‌ ಕೆ.ಬಿ. ಅಸೂದೆ, ಉಚ್ಚ ನ್ಯಾಯಾಲಯ
ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಎಸ್‌.ಆರ್‌.ಮಾಣಿಕ್ಯ, ವಕೀಲರ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ,
ಉಪಾಧ್ಯಕ್ಷ ಎಸ್‌.ಜಿ.ಮಠ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ಯಾದವ್‌, ಖಜಾಂಚಿ
ಅಮರೇಶ ರಾವೂರ, ಕಾರ್ಯದರ್ಶಿ ಬಿ.ಎನ್‌. ಪಾಟೀಲ, ಉಪಕಾರ್ಯದರ್ಶಿ ಸತೀಶ ಪಾಟೀಲ, ಜಂಟಿ ಕಾರ್ಯದರ್ಶಿ
ಅಮರೇಶ ಉಡಚಣ, ವೈಜನಾಥ ಝಳಕಿ, ಹೈಕೋರ್ಟ್‌ ಪೀಠದ ಇತರ ನ್ಯಾಯಾ ಧೀಶರು, ನ್ಯಾಯಾಲಯದ
ಅ ಧಿಕಾರಿಗಳು, ಸಿಬ್ಬಂದಿಗಳು, ಬಾರ್‌ ಅಸೋಶಿಯೇಶನ್‌ ಸದಸ್ಯರು, ನ್ಯಾಯವಾದಿಗಳು, ಸರ್ಕಾರಿ ನ್ಯಾಯವಾದಿಗಳು ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next