Advertisement

ಪೈಪ್‌ಲೈನ್‌ ಕಾಮಗಾರಿಗೆ ಹದಗೆಟ್ಟ ರಸ್ತೆ

04:12 PM Oct 26, 2019 | Team Udayavani |

ತಿಪಟೂರು: ಕಸಬಾ ಹೋಬಳಿ ಈಚನೂರು ಗ್ರಾಮದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ ಲೈನ್‌ ಕಾಮಗಾರಿಯಿಂದ ಮಣ್ಣು ಕುಸಿಯುತ್ತಿದ್ದು, ಮಳೆ ಬಂದ ಕಾರಣ ಕೆಸರುಗದ್ದೆಯಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸ ಬೇಕೆಂದು ಗ್ರಾಮಸ್ಥರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.

Advertisement

ಈಚನೂರು ಕೆರೆಯಿಂದ ತಿಪಟೂರು ಅಮಾನಿ ಕೆರೆಗೆ‌ ಪೈಪ್‌ಲೈನ್‌ ಮೂಲಕ 24×7 ಕುಡಿಯುವ ನೀರು ತರಲಾಗುತ್ತಿದೆ. ಈಚನೂರು ಗ್ರಾಮದ ಸಂಪರ್ಕ ರಸ್ತೆ ಬದಿಯಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ತೆಗೆದಿದ್ದ ಮಣ್ಣು ಸರಿಯಾಗಿ ಮುಚ್ಚದಿರುವುದರಿಂದ ಕೆಸರು ಗದ್ದೆಯಂತಾಗಿದೆ.

ರಸ್ತೆಯು ಕರಡಾಳು, ಅರಳಗುಪ್ಪೆ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದೆ. ಅಲ್ಲದೆ ಪ್ರತಿನಿತ್ಯ 10ಕ್ಕೂ ಹೆಚ್ಚು ಕೆಎಸ್‌ಆರ್‌ಟಿ ಬಸ್‌, ಆಟೋ, ಬೈಕ್‌ಗಳು ಓಡಾಡುತ್ತವೆ. ಆದರೆ ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ ರಸ್ತೆ ತುಂಬ ಗುಂಡಿಗಳು ಬಿದ್ದಿದ್ದು, ಮಳೆ ನೀರು ಶೇಖರಣೆಯಾಗಿ ಗುಂಡಿ ಗಳು ಕಾಣದಂತಾಗಿ ಸರ್ಕಸ್‌ ಮಾಡಿಕೊಂಡು ಓಡಾಡುವಂತಾಗಿದೆ. ಇದರಿಂದ ಒಂದಲ್ಲೊಂದು ಅಪಘಾತಗಳು ಸಂಭವಿ ಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿಗೊಳಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next