Advertisement

ಹದಗೆಟ್ಟ ರಸ್ತೆಗೆ ಪ್ರಯಾಣಿಕರು ಹೈರಾಣ

05:09 PM Dec 29, 2020 | Suhan S |

‌ಕಮಲನಗರ: ತಾಲೂಕು ಕೇಂದ್ರ ಕಮಲ ನಗರದಿಂದ ಮದನೂರ ಗ್ರಾಮಕ್ಕೆ ಹೋಗುವಮುಖ್ಯರಸ್ತೆ ತೀರಾ ಹದಗೆಟ್ಟಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ರೋಸಿ ಹೋಗಿದ್ದಾರೆ.

Advertisement

ರಸ್ತೆಯ ಮೇಲೆ ಮೋಣಕಾಲುದ್ದ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ. ಡಾಂಬರುಕಿತ್ತು ಹೋಗಿ ವರ್ಷಗಳೇ ಕಳೆದಿವೆ. ಆದರಈ ರಸ್ತೆ ಸುಧಾರಣೆಯತ್ತ ಮಾತ್ರ ಏಕೆ ಗಮನ ಹರಿಸುತ್ತಿಲ್ಲ ಎಂಬುವುದು ವಾಹನ ಸವಾರರ ಪ್ರಶ್ನೆಯಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೇಲೆ ಪ್ರಯಾಣಿಕರುಹಿಡಿಶಾಪ ಹಾಕುತ್ತಲೇ ಸಂಚರಿಸಬೇಕಾದಅನಿವಾರ್ಯತೆ ಉಂಟಾಗಿದೆ. ಹದಗೆಟ್ಟ ಇಂಥ ರಸ್ತೆಯಿಂದ ಆಸ್ಪತ್ರೆಗೆ ಹೋಗುವ ರೋಗಿಗಳ ಕಷ್ಟಒಂದೆಡೆಯಾದರೆ ಇನ್ನೊಂದೆಡೆ ಗರ್ಭಿಣಿಯರು, ಪ್ರಯಾಣಿಕರ ಪಾಡು ಹೇಳತಿರದು.

ರಸ್ತೆಯ ಮೇಲೆ ದೊಡ್ಡ ಪ್ರಮಾಣದ ತಗ್ಗು ಗುಂಡಿಗಳು ಬಿದ್ದ ಕಾರಣ ವಾಹನ ಸವಾರರು ನರಕಯಾತನೆ ಪಡುವಂಥಾಸ್ಥಿತಿ ನಿರ್ಮಾಣವಾಗಿದೆ ಎಂದು ಮದನೂರಗ್ರಾಮದ ಸಮಾಜ ಸೇವಕರಾದ ಜಯಪ್ರಕಾಶಬಿರಾದಾರ, ಆನಂದ, ಸಂದೀಪ ವ್ಯವಸ್ಥೆಗೆಹಿಡಿಶಾಪ ಹಾಕಿದ್ದಾರೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

‌ ಕಮಲನಗರದಿಂದ ಮದನೂರ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯರಸ್ತೆತೀರಾ ಹದಗೇಟ್ಟಿದ್ದು, ರಸ್ತೆಯೂದ್ದಕ್ಕೂತಗ್ಗು ಗುಂಡಿಗಳು ಬಿದ್ದಿರುವ ಕಾರಣಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ಇದೆ. ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರುಸ್ತಿ ಕಾಮಗಾರಿ ಮಾಡಿಸಲು ಮುಂದಾಗಬೇಕು. – ಗುಂಡಪ್ಪಾ ಬೇಲ್ಲೆ, ಸಾಮಾಜಿಕ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next