Advertisement

ಕಳ್ಳನನ್ನು ಹಿಡಿದ ಪೊಲೀಸರ ಬಂಧನ

05:27 AM May 21, 2020 | Lakshmi GovindaRaj |

ಬೆಂಗಳೂರು: ಕಳ್ಳರನ್ನು ಹಿಡಿಯಲು ಹೋಗಿ ಪೊಲೀಸರೇ “ಬಂಧನಕ್ಕೆ’ ಒಳಗಾದ ಪ್ರಸಂಗವಿದು. ಕಳ್ಳನ ಸುಳಿವು ಸಿಗುತ್ತಿದ್ದಂತೆ ಬಂಧಿಸುವ ಹುರುಪಿನಲ್ಲೇ ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.

Advertisement

ಅಷ್ಟರಲ್ಲೇ ಸಾರ್ವಜನಿಕರೇ ಕಳ್ಳರನ್ನು ಹಿಡಿದಿಟ್ಟಿದ್ದರು. ಯಥಾಸ್ಥಿತಿಯಲ್ಲಿ ಅವರನ್ನು ಠಾಣೆಗೆ ಕರೆತರಲಾಯಿತು. ಹೀಗೆ ಕರೆತಂದ ಕಳ್ಳರ ವಿಚಾರಣೆಗೆ ಮುಂದಾದಾಗ ಪೊಲೀಸರೇ ತಬ್ಬಿಬ್ಟಾಗಬೇಕಾಯಿತು.  ಕಾರಣ, ತಾವು ಕರೆತಂದ  ಕಳ್ಳರಲ್ಲಿ ಒಬ್ಬನಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ “ಯಶಸ್ವಿ ಕಾರ್ಯಾಚರಣೆ’ಯಲ್ಲಿ ಭಾಗಿಯಾದವರೂ ಸೇರಿದಂತೆ ಠಾಣೆಯಲ್ಲಿದ್ದ ಸಿಬ್ಬಂದಿಯೆಲ್ಲಾ ಕ್ವಾರಂಟೈನ್‌ಗೆ ಒಳಪಡುವಂತಾಗಿದೆ. ಜತೆಗೆ ಪೊಲೀಸ್‌  ಠಾಣೆಯೂ ಸೀಲ್‌ಡೌನ್‌ ಆಗಿದೆ.

ಹಿನ್ನೆಲೆ: ಬಂಧಿತರಲ್ಲಿ ಒಬ್ಟಾತ ತಾನು ಜಗಜೀವನ್‌ರಾಮ್‌ ನಗರ ನಿವಾಸಿ ಎಂದು ತಿಳಿಸಿದ್ದಾನೆ. ಹೀಗಾಗಿ, ಪಾದರಾಯನಪುರ ವಾರ್ಡ್‌ ಸಂಪರ್ಕವಿರಬಹುದು ಎಂಬ ಹಿನ್ನೆಲೆಯಲ್ಲಿ ಪೊಲೀಸರು ಆತನಿಗೆ ಕೊರೊನಾ ಸೋಂಕು ಪರೀಕ್ಷೆ  ನಡೆಸಿದ್ದಾರೆ. ಈ ವೇಳೆ ವರದಿ ಪಾಸಿಟಿವ್‌ ಬಂದಿದ್ದು, ಪೊಲೀಸರು ದಿಗಿಲುಬಡಿದಂತಾಗಿದೆ. ಸೋಂಕಿತನನ್ನು ನಗರ ಕೊರೊನಾ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವ್ಯಕ್ತಿಯನ್ನು ಬಂದಿಸಿದ್ದ ಹೆಬ್ಬಗೋಡಿ ಪೊಲೀಸ್‌ ಠಾಣೆಯ  30 ಪೊಲೀಸ್‌ ಸಿಬ್ಬಂದಿಗಳನ್ನು ಪ್ರಾಥಮಿಕ ಸಂಪರ್ಕ ಎಂದು ಗುರುತಿಸಿ ಕ್ವಾರಂಟೈನ್‌ ಮಾಡಲಾಗಿದೆ.

ಈ ಬಂಧನಕ್ಕೊಳಗಾದ ವ್ಯಕ್ತಿಯ ಕುಟುಂಬಸ್ಥರನ್ನು ಸೇರಿ ಕಟ್ಟಡದಲ್ಲಿ ವಾಸವಿದ್ದ 13 ಮಂದಿ  ಯನ್ನು ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡ ಲಾಗಿದೆ. ಆನೇಕಲ್‌ ತಾಲೂಕಿನಲ್ಲಿ ಕಳ್ಳತನ ಮಾಡಲು ಹೋದ ವೇಳೆ ಜಗಜೀವನರಾಂ ವಾರ್ಡ್‌ನ ರೋಗಿ ಸಂಖ್ಯೆ 1,397 ಹಾಗೂ ಕೆ.ಆರ್‌.ಪುರದ 1396 ಇಬ್ಬರಿಗೂ ಸೋಂಕು ದೃಢಪಟ್ಟಿತ್ತು. ಇನ್ನು ಸೋಂಕು  ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದ ವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಪಶ್ಚಿಮ ವಲಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next