ಬೆಂಗಳೂರು: ಪಾದಚಾರಿ ಮಾರ್ಗ ತೆರವುಗೊಳಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದಲ್ಲದೆ, ಅವರ ಕೈ ಕಚ್ಚಿದ್ದ ತಾಯಿ, ಮಗನನ್ನು
ಕೆ.ಆರ್.ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಈತ ನೀಡುವ ಆಹಾರಕ್ಕಾಗಿ ಕೋತಿಗಳ ಸೈನ್ಯವೇ ಬರುತ್ತವೆ
ಕೆಂಗೇರಿ ನಿವಾಸಿ ರಜಿಯಾ (40) ಆಕೆಯ ಪುತ್ರ ಮಾರ್ಟಿನ್(18) ಬಂಧಿತರು. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರ ಬೆಳಗ್ಗೆ ಚಿಕ್ಕಪೇಟೆಯ ಸಂಡೇ ಬಜಾರ್ ರಸ್ತೆಯ ಪಾದಚಾರಿ ಮಾರ್ಗದ ವ್ಯಾಪಾರಿಗಳನ್ನು ಬೆಳಗ್ಗೆ ಐದು ಗಂಟೆ ಯಿಂದಲೇ ತೆರವುಗೊಳಿಸಲಾಗಿತ್ತು.
ಈ ವೇಳೆ ಸುಲ್ತಾನ್ ಪೇಟೆ ಜಂಕ್ಷನ್ ಸಮೀಪದಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದರು. ಆಗ ಕಾನ್ ಸ್ಟೇಬಲ್ ವಿಜಯ್ ಕುಮಾರ್ ಅವರನ್ನು ತೆರವುಗೊಳಿಸುತ್ತಿದ್ದರು. ಅದೇ ವೇಳೆ ರಜಿಯಾ ಮತ್ತು ಆಕೆಯ ಪುತ್ರ ಮಾರ್ಟಿನ್ ಶಾಪಿಂಗ್ ಹೋಗುತ್ತಿದ್ದರು. ಪೊಲೀಸರ ಕೆಲಸ ಕಂಡು ಕೋಪಗೊಂಡ ರಜಿಯಾ, ಕಾನ್ ಸ್ಟೇಬಲ್ ಬಳಿ ಬಂದು ವ್ಯಾಪಾರಿಗಳನ್ನು ತೆರವುಗೊಳಿಸದಂತೆ ಎಚ್ಚರಿಕೆ ನೀಡಿದ್ದಾಳೆ. ಅಲ್ಲದೆ, ಜನರಿಗೇಕೆ ತೊಂದರೆ ಕೊಡುತ್ತಿ
ರಾ ಎಂದು ವಾಗ್ವಾದ ಆರಂಭಿಸಿದ್ದಾಳೆ.
ಆಗ ಕಾನ್ ಸ್ಟೇಬಲ್ ವಿಜಯ್ ಕುಮಾರ್, ನಿಮ್ಮ ಕೆಲಸ ನೋಡಿಕೊಂಡು ಹೋಗಿ. ಇದಕ್ಕೂ ನಿಮಗೂ ಏನು ಸಂಬಂಧ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ ಮಾರ್ಟಿನ್ ಏಕಾಏಕಿ ಕಾನ್ ಸ್ಟೇಬಲ್ ಸಮವಸ್ತ್ರ ಹಿಡಿದು ಎಳೆದಾಡಿದ್ದಾನೆ. ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದುಮಾರ್ಟಿನ್‌ನನ್ನು ಹಿಡಿದು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದಾರೆ.
ಅದರಿಂದ ಕುಪಿತಗೊಂಡ ರಜಿಯಾ ಕಾನ್ ಸ್ಟೇಬಲ್ ಕೈಕಚ್ಚಿದ್ದು ತೀತ್ರ ತರವಾದ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ತಾಯಿ, ಮಗನನನ್ನು ಕರ್ತವ್ಯಕ್ಕೆ ಅಡ್ಡಿ
ಪಡಿಸಿದ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೆ.ಆರ್.ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.