Advertisement

ನಾಲ್ವರು ಸುಲಿಗೆಕೋರರ ಬಂಧನ

02:19 PM May 18, 2022 | Team Udayavani |

ಕಲಬುರಗಿ: ನಗರದ ಹೊರವಲಯದ ಮಾಲಗತ್ತಿ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸಮೀರ ನಭಿಸಾಬ್‌ ಮುಲ್ಲಾವಾಲೆ, ಮಹ್ಮದ್‌ ತಬರೇಷ್‌ ಇಮ್ತಿಯಾಜ್‌ ಬಾಬಾ, ಮೊಹಮ್ಮದ್‌ ಮೌಸಿನ್‌ ಮತ್ತು ಮೊಹಮ್ಮದ್‌ ಸುಕರ್‌ ಬಂಧಿತ ಸುಲಿಗೆಕೋರರು ಎಂದು ಗುರುತಿಸಲಾಗಿದೆ.

ಇವರು ರಸ್ತೆಗಳಲ್ಲಿ ಜನರಿಗೆ ಹರಿತವಾದ ಆಯುಧಗಳನ್ನು ತೊರಿಸಿ ಬೆದರಿಸಿ ಹಣ ಮತ್ತು ಬಂಗಾರದ ಒಡೆವೆ ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಬಂಧಿತರಿಂದ ಒಂದು ಮೊಬೈಲ್‌, ಸ್ಕೂಟಿ ವಾಹನ, ಎರಡು ತಲವಾರ್‌ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಸಬ್‌ ಅರ್ಬನ್‌ ಉಪ ವಿಭಾಗದ ಎಸಿಪಿ ಜೆ.ಎಚ್‌. ಇನಾಂದಾರ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ರಮೇಶ ಕಾಂಬ್ಳೆ, ಪಿಎಸ್‌ಐ ಕವಿತಾ ಚವ್ಹಾಣ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next