Advertisement

ಹಿಂದೂ ದೇವರ ನಿಂದನೆ: ತೊಕ್ಕೊಟ್ಟು ನಿವಾಸಿ ಉದ್ಯಮಿಯ ಬಂಧನ

02:05 PM May 15, 2021 | Team Udayavani |

ಉಳ್ಳಾಲ: ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ ಉದ್ಯಮಿಯನ್ನು ಉಳ್ಳಾಲ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿ  ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Advertisement

ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ  ಇರುವ ಸ್ವಾಲಿಝ್ ಇಕ್ಬಾಲ್ (45) ಬಂಧಿತ.  ಫರ್ನಿಚರ್ ಅಂಗಡಿ ಸಹಿತ ವಿವಿಧ  ಉದ್ಯಮಗಳನ್ನು ನಡೆಸುತ್ತಿದ್ದ ಸ್ವಾಲಿಝ್ ಇಕ್ಬಾಲ್ ಚಾಮುಂಡೇಶ್ವರಿ ದೇವಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ  ಮೂರು ದಿನಗಳಿಂದ ವೈರಲ್ ಆಗಿತ್ತು.

ಇದನ್ನೂ ಓದಿ:ರಕ್ಷಣೆ ಇಲ್ಲದೆ ಸೋಂಕಿತ ಶವ ಹಸ್ತಾಂತರ; ಆರೋಪ

ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದಂತೆ,  ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟಕರು ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ಇಂದು ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next