Advertisement

ಬೈಲಹೊಂಗಲ: ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಂಧನ

09:23 PM Dec 04, 2021 | Team Udayavani |

ಬೈಲಹೊಂಗಲ: ಸೋಯಾಬಿನ್ ಚೀಲಗಳ ಕಳ್ಳತನ ಸೇರಿದಂತೆ ವಿವಿಧ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲೂಕಿನ ನೇಸರಗಿ ಪೋಲಿಸರು ಟ್ರ್ಯಾಕ್ಟರ್ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 7  ಲಕ್ಷ 70 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Advertisement

ನೇಸರಗಿ ಗ್ರಾಮದ ರೈತರಾದ ದೊಡ್ಡಗೌಡ ಬಾಬಾಗೌಡ ಪಾಟೀಲ ಇವರ ಮದನಭಾಂವಿ ಗ್ರಾಮದ ಜಮೀನಿನಲ್ಲಿರುವ ಶೆಡ್ಡಿನಲ್ಲಿ ರೂ.1 ಲಕ್ಷ 25 ಸಾವಿರ ಮೌಲ್ಯದ ಸೋಯಾಬಿನ ಹುರುಳಿ ತುಂಬಿದ 22 ಚೀಲಗಳನ್ನು ನವ್ಹೆಂಬರ 25 ರಂದು ರಾತ್ರಿ ಕಳ್ಳರು ಶೆಡ್ಡಿನ ಕೀಲಿ ಮುರಿದು ದೋಚಿದ್ದರು. ಈ  ಕುರಿತು ಜಮೀನಿನ ಮಾಲೀಕ ನ.26 ರಂದು ನೇಸರಗಿ ಪೊಲೀಸ ಠಾಣೆಗೆ ಕಳ್ಳತನವಾದ ಬಗ್ಗೆ  ದೂರು ನೀಡಿದ್ದರು. ದೂರು ಆದರಿಸಿದ ತನಿಖೆ ನಡೆಸಿದ ಪೋಲಿಸರು ಆರೋಪಿತರಾದ ನೇಸರಗಿ ಗ್ರಾಮದ ತುಕಾರಾಮ ಫಕೀರಪ್ಪ ಹಂಚಿನಮನಿ, ರಾಮಚಂದ್ರ ಅಪ್ಪಣ್ಣ ವಡ್ಡಯಲ್ಲಪ್ಪಗೋಳ, ಫಕೀರಪ್ಪ ಗಂಗಪ್ಪ ಹಂಚಿನಮನಿ, ಶಂಕರ ಹನುಮಂತಪ್ಪ ಹಂಚಿನಮನಿ ಇವರನ್ನು ಪೋಲಿಸರು ಬಂದಿಸಿದ್ದಾರೆ. ಆರೋಪಿತರು ಸೋಯಾಬಿನ್ ಚೀಲಗಳನ್ನು ನ.25 ರಂದು ಕಳ್ಳತನ ಮಾಡಿ ಮಾರಾಟ ಮಾಡಿದ್ದರು. ಈ ಕುರಿತು ಪೊಲೀಸರ ಚಾಣಾಕ್ಷತೆಯಿಂದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿತರಿಂದ 1 ಲಕ್ಷ 25 ಸಾವಿರ ರೂ.ಮೌಲ್ಯದ 22 ಚೀಲ, 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, ಇನ್ನೊಂದು ಪ್ರಕರಣದಲ್ಲಿ 45 ಸಾವಿರ ರೂ. ಮೌಲ್ಯದ 10 ಗ್ರಾಮ ತೂಕದ ಬಂಗಾರ ಚೈನ್, ಮತ್ತೊಂದು ಪ್ರಕರಣದಲ್ಲಿ 50 ಸಾವಿರ ಮೌಲ್ಯದ 6 ಕ್ವಿಂಟಲ್ 50 ಕೆಜಿ ಸೋಯಾಬಿನ್ ಚೀಲಗಳು, ಮತ್ತೊಂದು ಪ್ರಕರಣದಲ್ಲಿ 50 ಸಾವಿರ ಮೌಲ್ಯದ 15 ಸೋಯಾಬಿನ್ ಚೀಲಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಅಮರನಾಥ ರೆಡ್ಡಿ, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ ಇವರ ಮಾರ್ಗದರ್ಶನದಲ್ಲಿ ತಂಡ ರಚಿಸಿ ನೇಸರಗಿ ಪಿಎಸ್‌ಐ ವಾಯ್.ಎಲ್.ಶೀಗಿಹಳ್ಳಿ, ಎಎಸ್‌ಐಗಳಾದ  ಎಸ್.ಎಂ.ಯರಗಟ್ಟಿಮಠ, ಎಸ್.ವ್ಹಿ.ಪತ್ತಾರ, ಪೇದೆಗಳಾದ ವ್ಹಿ.ಎಸ್.ಯರಗಟ್ಟಿಮಠ, ಆರ್.ಕೆ.ಉದಪುಡಿ, ಎಸ್.ಆರ್.ದೇಸಾಯಿ, ಎ.ಎಸ.ಬಡಿಗೇರ, ಎಸ್.ಐ.ಅಮರಾಪುರ, ಐ.ಬಿ.ನಡುವಿನಹಳ್ಳಿ, ಬಿ.ಐ.ಅರಳೀಕಟ್ಟಿ, ಎಸ್.ಬಿ.ಮುರಗೋಡ, ಬಿ.ಬಿ.ಪಾಟೀಲ ಜಾಲ ಬೀಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

ತನಿಖಾ ತಂಡವನ್ನು ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next