Advertisement

ಎಟಿಎಂ ಹಣ ಕಳುವಿಗೆಯತ್ನಿಸಿದವನ ಬಂಧನ

12:38 PM Feb 14, 2018 | Team Udayavani |

ಬೆಂಗಳೂರು: ಎಟಿಎಂ ಕೇಂದ್ರದಲ್ಲಿ ಹಣ ದೋಚಲು ಯತ್ನಿಸಿದ್ದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಠಾಣೆಯ ಹೊಯ್ಸಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೊಟ್ಟಿಗೆಪಾಳ್ಯ ನಿವಾಸಿ ಹರೀಶ್‌(35) ಬಂಧಿತ. ಆರೋಪಿ ಮಂಗಳವಾರ ನಸುಕಿನಲ್ಲಿ ಕೊಟ್ಟಿಗೆಪಾಳ್ಯದ ಆಕ್ಸಿಸ್‌ ಬ್ಯಾಂಕ್‌ ಎಟಿಎಂ ಕೇಂದ್ರವೊಂದಲ್ಲಿ ಕೃತ್ಯವೆಸಗುವಾಗ ಗಸ್ತಿನಲ್ಲಿದ್ದ ಎಎಸ್‌ಐ ರಾಜಣ್ಮ ಮತ್ತು ಪೇದೆ ಬೆಳ್ಳಿಯಪ್ಪ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರಾಂಚಲ್‌ ಮೂಲದ ಹರೀಶ್‌ 10 ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಕೊಟ್ಟಿಗೆಪಾಳ್ಯದಲ್ಲಿ ನೆಲೆಸಿ ದ್ದಾನೆ. ಸುಂಕದಕಟ್ಟೆ ಯಲ್ಲಿನ ವೆಲ್ಡಿಂಗ್‌ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕಟ್ಟಡಗಳಿಗೆ ಗ್ರಿಲ್‌ ಹಾಕುವುದು ಮತ್ತು ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದಾನೆ. 

ಸಂಚು: ಎರಡು ದಿನಗಳ ಹಿಂದೆ ಕೊಟ್ಟಿಗೆಪಾಳ್ಯ ಬಸ್‌ ನಿಲ್ದಾಣ ಬಳಿಯ ಆಕ್ಸಿಸ್‌ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ಹಣ ತುಂಬುತ್ತಿರುವುದನ್ನು ಆರೋಪಿ ಗಮನಿಸಿದ್ದಾನೆ. ಮಂಗಳವಾರ ನಸುಕಿನ 3.30ರ ಸುಮಾರಿಗೆ ಎಟಿಎಂ ಕೇಂದ್ರಕ್ಕೆ ನುಗ್ಗಿದ ಹರೀಶ್‌, ಕೇಂದ್ರ ಬಾಗಿಲನ್ನು ಅರ್ಧಕ್ಕೆ ಎಳೆದುಕೊಂಡು ಸೂðಡ್ರೈವರ್‌, ಕಬ್ಬಿಣದ ಸರಳು ಮತ್ತು ಡ್ರಿಲ್ಲಿಂಗ್‌ ಮೆಷಿನ್‌ ಬಳಸಿ ಎಟಿಎಂ ಯಂತ್ರವನ್ನು ಬಿಚ್ಚಲು ಯತ್ನಿಸಿದ್ದಾನೆ.

ಇದೇ ವೇಳೆ ಕಾಮಾಕ್ಷಿಪಾಳ್ಯ ಠಾಣೆ ಎಎಸ್‌ಐ ರಾಜಣ್ಣ ಮತ್ತು ಪೇದೆ ಬೆಳ್ಳಿ ಯಪ್ಪ ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುತ್ತಿದ್ದರು. ಅರ್ಧಕ್ಕೆ ಬಾಗಿಲು ಮುಚ್ಚಿದ್ದು, ಎಟಿಎಂ ಕೇಂದ್ರದಲ್ಲಿ ಶಬ್ಧ ಉಂಟಾಗಿದೆ. ಇದರಿಂದ ಅನುಮಾನ ಗೊಂಡ ಸಿಬ್ಬಂದಿ ಕೂಡಲೇ ಎಟಿಎಂ
ಕೇಂದ್ರ ಪೂರ್ಣ ಬಾಗಿಲು ತೆರೆದಾಗ ಎಟಿಎಂ ಯಂತ್ರ ಬಿಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆರೋಪಿಯನ್ನು
ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಹರೀಶ್‌ ಸುಂಕದಕಟ್ಟೆಯಲ್ಲಿ ಬಾಡಿಗೆ ರೂಂನಲ್ಲಿ ಸ್ನೇಹಿತರೊಂದಿಗೆ ವಾಸಿ ಸುತ್ತಿದ್ದು, ಕೃತ್ಯದ ಬಗ್ಗೆ ಸ್ನೇಹಿತರಿಗೆ ಮಾಹಿತಿ ಇಲ್ಲ. ಆರೋಪಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಡ್ರಿಲ್ಲಿಂಗ್‌ ಮೆಷಿನ್‌ನನ್ನು ಸೋಮವಾರ ಮನೆಗೆ ತೆಗೆದುಕೊಂಡು ಹೋಗಿದ್ದ.

Advertisement

ಮಂಗಳವಾರ ಹಣ ದೋಚಲು ಇದೇ ಯಂತ್ರ ಬಳಸಿದ್ದಾನೆ. ಆದರೆ, ಎಟಿಎಂ ಯಂತ್ರದ ಬಿಡಿ ಭಾಗಗಳನ್ನು ತೆಗೆದರೂ ಅದರಲ್ಲಿ ರುವ ಹಣ ದೋಚಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next