Advertisement

ಭೂಮಿಯಂಥ ಗ್ರಹ ಪತ್ತೆ

06:30 AM Nov 02, 2017 | Team Udayavani |

ಲಂಡನ್‌: ಮಂಗಳ, ಚಂದ್ರನಲ್ಲಿ ಜೀವಿಗಳು ವಾಸಿಸುವ ವಾತಾವರಣ ಇದೆಯೇ ಎಂಬ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಲೇ ಇದೆ. ಈ ಗ್ರಹಗಳಲ್ಲಿ ವಾಸಿಸಲು ಸಾಧ್ಯ ವಾಗುತ್ತದೆಯೇ ಎಂಬುದು ಖಚಿತವಿಲ್ಲದಿದ್ದರೂ, ಈ ಗ್ರಹಗಳಿಗೆ ಭವಿಷ್ಯದಲ್ಲಿ ತೆರಳಲು ಯೋಜನೆಗಳು ರೂಪುಗೊಳ್ಳುತ್ತಿವೆ. ಈ ಮಧ್ಯೆಯೇ ಇಂಥದ್ದೇ 20 ಗ್ರಹಗಳಿರುವುದಾಗಿ ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನಾಸಾದ ಕೆಪ್ಲರ್‌ ಗಗನನೌಕೆ ಈ ಸಂಶೋಧನೆ ನಡೆಸಿದೆ. ಈಗಾಗಲೇ ನಮಗೆ ಕಂಡುಬಂದ ಗ್ರಹಗಳ ರೀತಿಯಲ್ಲೇ ಹೊಸದಾಗಿ ಕಂಡುಬಂದ ಗ್ರಹಗಳೂ ಇವೆ ಎಂದು ಕೆಪ್ಲರ್‌ನ ಸಂಶೋಧನೆಗಳಿಂದ ತಿಳಿದುಬಂದಿದೆ. ಕೆಲವು ಗ್ರಹಗಳು ಭೂಮಿಯ ವಾತಾವರಣ ವನ್ನೇ ಹೋಲುವಂತಿವೆ. ತಾಪಮಾನ ಸಮಾನ ಶ್ರೇಣಿಯಲ್ಲಿದೆ.

Advertisement

ಈ ಪೈಕಿ ಅತ್ಯಂತ ಉತ್ತಮ ಎನ್ನಬಹುದಾದ ಗ್ರಹವನ್ನು ಕೆಒಐ-7923.0 ಎಂದು ಕರೆಯ ಲಾಗಿದ್ದು, ಇನ್ನೊಂದು ಭೂಮಿಯನ್ನು ಕಂಡು ಕೊಳ್ಳುವ ಪ್ರಯೋಗ ನಡೆಸಲು ಸೂಕ್ತವಾಗಿವೆ ಎನ್ನಲಾಗಿದೆ. ಈ ಗ್ರಹವು ವರ್ಷದಲ್ಲಿ 395 ದಿನಗಳನ್ನು ಹೊಂದಿದ್ದು, ಭೂಮಿಯ ಶೇ. 97ರಷ್ಟಿದೆ. ಆದರೆ ಭೂಮಿಗಿಂತ ಶೀತ ವಾತಾವರಣ ಸ್ವಲ್ಪ ಹೆಚ್ಚಿದೆ.

ಯಾಕೆಂದರೆ ಇದು ಸೂರ್ಯನಿಂದ ಹೆಚ್ಚು ದೂರದಲ್ಲಿದ್ದು, ಸೂರ್ಯನ ಕಿರಣಗಳು ಅಷ್ಟು ತೀಕ್ಷ್ಣವಾಗಿಲ್ಲ. ಈ ಗ್ರಹಕ್ಕೆ ಗಗನನೌಕೆಯನ್ನು ಕಳುಹಿಸುವುದು ಕಷ್ಟವೇನೂ ಅಲ್ಲ ಎಂದು ಕೆಪ್ಲರ್‌ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿರುವ ಜೆಫ್ ಕಫ್ಲಿನ್‌ ಹೇಳಿ ದ್ದಾರೆ. ಈ ಅಂಶಗಳನ್ನು ದೃಢೀಕರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಂಶೋಧನೆ ನಡೆಸಬೇಕಿದೆ. ಆದರೆ ಕೆಪ್ಲರ್‌ ಗಗನನೌಕೆ ಸದ್ಯ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಸಂಗ್ರಹಿ ಸಿದ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸಲು ತೊಂದರೆ ಎದುರಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next