ಮಡಿಕೇರಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜೂನ್‌ನಿಂದ ಮಾರ್ಚ್ ವರೆಗೆ ಪತ್ತೆ ಮಾಡಲಾಗಿದ್ದ 22 ಅಕ್ರಮ ಗಾಂಜಾ ಮಾರಾಟ ಪ್ರಕರಣಗಳಲ್ಲಿ 60 ಆರೋಪಿಗಳನ್ನು ದಸ್ತಗಿರಿ ಮಾಡಿ ವಶಪಡಿಸಿಕೊಂಡಿದ್ದ ಒಟ್ಟು 26.750 ಕೆ.ಜಿ. ಗಾಂಜಾ ಹಾಗೂ 1.161 ಕೆ.ಜಿ ಹಶಿಶ್ ಆಯಿಲ್ ಅನ್ನು ಶುಕ್ರವಾರ ಮೈಸೂರು ಜಿಲ್ಲೆಯ ಗುಜ್ಜೆಗೌಡನಪುರ ಗ್ರಾಮದಲ್ಲಿ ಡ್ರಗ್ ಡಿನ್ಪೋಸಲ್ ಸಮಿತಿ ಮೂಲಕ ನಾಶಪಡಿಸಲಾಯಿತು.
Advertisement
ಈ ಸಂದರ್ಭ ದಕ್ಷಿಣ ವಲಯ ಐ.ಜಿ.ಪಿ ಯವರಾದ ಪ್ರವೀಣ್ ಮಧುಕರ್ ಪವಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಡ್ರಗ್ ಡಿನ್ಪೋಸಲ್ ಸಮಿತಿ ಸದಸ್ಯರು ಹಾಜರಿದ್ದರು.