Advertisement

ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ಧಿ: ಏಕನಾಥ್‌ ಶಿಂಧೆ ಆರೋಪ

07:03 PM May 09, 2023 | Team Udayavani |

ಉಡುಪಿ: ಬಜರಂಗದಳ ನಿಷೇಧಿಸುವ ಪ್ರಸ್ತಾಪ ಮಾಡಿರುವ ಕಾಂಗ್ರೆಸ್‌ “ವಿನಾಶ ಕಾಲೇ ವಿಪರೀತ ಬುದ್ಧಿ’ ಪ್ರದರ್ಶಿಸುತ್ತಿದೆ. ಬಜರಂಗಿ ಶಕ್ತಿ ಏನು ಎಂಬುದು ಚುನಾವಣೆಯಲ್ಲಿ ತಿಳಿಯಲಿದೆ. ದೇಶಭಕ್ತ ಸಂಘಟನೆಯನ್ನು ದೇಶದ್ರೋಹಿ ಸಂಘಟನೆ ಜತೆ ಸೇರಿಸಿರುವ ಕಾಂಗ್ರೆಸ್‌ಗೆ ಜನರು ಬುದಿಟಛಿ ಕಲಿಸಲಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.

Advertisement

ಉಡುಪಿ ಬಿಜೆಪಿಯಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಚುನಾವಣೆ ಬಹಿರಂಗ ಪ್ರಚಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‌, ಬಜರಂಗದಳ ದೇಶಭಕ್ತ ಸಂಘಟನೆಯಾಗಿದ್ದು, ದೇಶದ ರಕ್ಷಣೆ, ಸುಕ್ಷತೆಯಲ್ಲಿ ತೊಡಗಿಸಿಕೊಂಡಿದೆ. ಕಾಂಗ್ರೆಸ್‌ಗೆ ಹಿಂದುತ್ವದ ಮೇಲೆ ಹಿಂದಿನಿಂದಲೂ ದ್ವೇಷವಿದೆ. 2013ರ ಅನಂತರದಲ್ಲಿ ಅವರ ಕಾಂಗ್ರೆಸ್‌ ಅಂಗಡಿ ಮುಚ್ಚುತ್ತಾ ಬಂದಿದೆ. ಆದರೂ ಹಿಂದೂ ವಿರೋಧಿ ನಿಲುವಿನಿಂದ ಹಿಂದೆ ಸರಿದಿಲ್ಲ. ಕಾಂಗ್ರೆಸ್‌ ತನ್ನ ಚಾಳಿಯನ್ನು ಮುಂದುವರಿಸಿದರೆ ಲೋಕಸಭೆಯಲ್ಲಿ 400ರಿಂದ 40 ಬಂದಿದ್ದಾರೆ. 40ರಿಂದ 4ಕ್ಕೆ ಇಳಿಸಲಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಮೋದಿಯವರು ಅಧಿಕಾರಕ್ಕೆ ಬಂದ ಅನಂತರದಲ್ಲಿ ಹಿಂದುಗಳ ಸಮ್ಮಾನ, ಗೌರವ ಹೆಚ್ಚಾಗಿದೆ. ಆದರೂ ರಾಹುಲ್‌ ಗಾಂಧಿಯವರು ವಿದೇಶಗಳಲ್ಲಿ ಪ್ರಧಾನಿ ಮೋದಿ ಹಾಗೂ ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನೆಲ್ಲ ಸಹಿಸುಲು ಸಾಧ್ಯವೇ? ಇದೆಲ್ಲವೂ ಕಾಂಗ್ರೆಸ್‌ಗೆ ಮುಂದೆ ದೊಡ್ಡ ಹೊರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕಳೆದ 9 ವರ್ಷದಲ್ಲಿ ದೇಶಾದ್ಯಂತ ಸಾಕಷ್ಟು ಅಭಿವೃದಿಟಛಿ ಕಾರ್ಯಗಳು ನಡೆದಿವೆ. ಸ್ವಾತಂತ್ರ್ಯ ಅನಂತರದಲ್ಲಿ ಕಾಂಗ್ರೆಸ್‌
ಬಡವರ ಕಲ್ಯಾಣವನ್ನು ಬಾಯಿಯಲ್ಲಿ ಹೇಳಿದ್ದು ಮಾತ್ರ. ಮೋದಿಯವರು ಅದನ್ನು ಮಾಡಿ ತೋರಿಸಿದ್ದಾರೆ. ಡಬಲ್‌
ಇಂಜಿನ್‌ ಸರಕಾರದಿಂದ ಕರ್ನಾಟಕದ ರೀತಿಯಲ್ಲಿ ಮಹಾರಾಷ್ಟ್ರದಲ್ಲೂ ಹೆಚ್ಚು ಅಭಿವೃದಿಟಛಿಯಾಗಿದೆ. ಸಾಮಾನ್ಯ ರೈತನ
ಮಗನನ್ನು ಬಿಜೆಪಿ ಮತ್ತು ಶಿವಸೇನೆ ಮುಖ್ಯಮಂತ್ರಿಯಾಗಿ ಮಾಡಿದೆ. ಸಾಮಾನ್ಯರಿಗೆ ಅವಕಾಶ ಸಿಗುವುದು ಬಿಜೆಪಿ,
ಶಿವಸೇನೆಯಲ್ಲಿ ಮಾತ್ರ ಎಂದರು.

Advertisement

ಮೋದಿಯವರು ದೇಶದ ಎಲ್ಲ ವಲಯದಲ್ಲೂ ಬದಲಾವಣೆ ತಂದಿದ್ದಾರೆ. ವಿಕಾಸ ಪರ್ವವನ್ನು ಕಾಣುತ್ತಿದ್ದೇವೆ. ಆರ್ಥಿಕತೆಯು ಬಲಿಷ್ಠವಾಗುತ್ತಿದೆ. ಕರ್ನಾಟಕದ ಈ ಚುನಾವಣೆ ಮುಂದಿನ ಲೋಕಸಭೆ ಚುನಾವಣೆ ದಿಕ್ಸೂಚಿ. ಮೋದಿಯವರ ಕೈಯನ್ನು ಇನ್ನಷ್ಟು ಬಲಪಡಿಸಲು ಬಿಜೆಪಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಜಯ ಗಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಯಶ್‌ಪಾಲ್‌ ಸುವರ್ಣ ಅವರು ಹೆಚ್ಚಿನ ಬಹುಮತದಿಂದ ಗೆದ್ದು ಬರಲಿದ್ದಾರೆ. ಕಾಂಗ್ರೆಸ್‌ಗೆ ಚುನಾವಣೆ ಎದುರಿಸಲು ವಿಷಯವೇ ಇಲ್ಲ. ಅವರ ಗ್ಯಾರಂಟಿ ಕಾರ್ಡ್‌ ಕೆಲಸ ಮಾಡುವುದಿಲ್ಲ ಎಂದರು.

ಶಾಸಕ ಕೆ.ರಘುಪತಿ ಭಟ್‌ ಮಾತನಾಡಿ, ಕಾಂಗ್ರೆಸ್‌ನವರು ಚುನಾವಣೆ ಸಮೀಪಿಸುತ್ತಿದ್ದಂತೆ ಅಪಪ್ರಚಾರಕ್ಕೆ ಇಳಿದಿದ್ದಾರೆ. ಉಡುಪಿಯ ಪ್ರಬುದಟಛಿ ಮತದಾರರು ಅದಕ್ಕೆ ಬೆಲೆ ಕೊಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅಪಪ್ರಚಾರಕ್ಕೆ ಮತದಾನದ ದಿನ ಸೂಕ್ತ ಉತ್ತರ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಉಪಾಧ್ಯಕ್ಷ ಲಕ್ಷ್ಮೀ ಮಂಜು ಕೊಳ, ಮಹಾರಾಷ್ಟ್ರದ ಸಚಿವ ಉದಯ ಸಾಮಂತ್‌, ಭಿವಂಡಿ ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್‌ ಶೆಟ್ಟಿ, ಬಿರುವೆರ್‌ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ, ಪ್ರಮುಖರಾದ ದಿನಕರ ಬಾಬು, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ರಶ್ಮಿ ಭಟ್‌, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿದರು. ಜಿಲ್ಲಾ ಸಹ ವಕ್ತಾರ ಗಿರೀಶ್‌ ಅಂಚನ್‌ ನಿರೂಪಿಸಿ, ವಂದಿಸಿದರು.

50 ಸಾವಿರ ಮತಗಳ ಅಂತರದ ಜಯಭೇರಿ
ಹಿಜಾಬ್‌ ಪ್ರಕರಣದ ಮೂಲಕ ದೇಶಾದ್ಯಂತ ಯಶ್‌ಪಾಲ್‌ ಸುವರ್ಣ ಅವರು ಜನಪ್ರಿಯತೆ ಪಡೆದಿದ್ದಾರೆ. ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಟಿಕೆಟ್‌ ನೀಡಿದೆ.

ಮೂರು ಬಾರಿ ಶಾಸಕರಾಗಿರುವ ರಘುಪತಿ ಭಟ್‌ ಅವರು ಯಶ್‌ಪಾಲ್‌ ಅವರ ಜತೆಗೆ ನಿಂತು ನಿತ್ಯವೂ ಪ್ರಚಾರ ಪ್ರಕ್ರಿಯೆ
ನಡೆಸಿದ್ದಾರೆ. ಇದು ಡಬಲ್‌ ಶಕ್ತಿ ಯಶ್‌ಪಾಲ್‌ ಸುವರ್ಣರಿಗೆ ಡಬಲ್‌ ಶಕ್ತಿ ತಂದುಕೊಟ್ಟಿದೆ.50 ಸಾವಿರಕ್ಕೂ ಅಧಿಕ ಬಹುಮತದಿಂದ ಅವರು ಜಯ ಸಾಧಿಸಲಿದ್ದಾರೆ ಎಂದು ಏಕನಾಥ್‌ ಶಿಂಧೆಯವರು ಹೇಳಿದರು.

ಭರ್ಜರಿ ರೋಡ್‌ಶೋ
ಬಹಿರಂಗ ಸಭೆಗೂ ಮೊದಲು ಉಡುಪಿ ಕ್ಲಾಕ್‌ ಟವರ್‌ನಿಂದ ಕೆ.ಎಂ. ಮಾರ್ಗ, ಕೋರ್ಟ್‌ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಬೃಹತ್‌ ರೋಡ್‌ ಶೋ ಸಾಗಿ ಬಂದಿತು. ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕೇಸರಿ ಪೇಟ, ಬಿಜೆಪಿ ಬಾವುಟ ರಾರಾಜಿಸುತ್ತಿತ್ತು. ಭಾರತ್‌ ಮಾತಾ ಕೀ ಜೈ, ಮೋದಿ, ಬಿಜೆಪಿ ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.

ಕಾಂಗ್ರೆಸ್‌, ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಎಸ್‌ ಡಿಪಿಐ ಒಳ ಒಪ್ಪಂದ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಡಾ| ವಿ.ಎಸ್‌.ಆಚಾರ್ಯ ಅವರು ಕಂಡ ಅಭಿವೃದ್ಧಿಯ ಕನಸನ್ನು ಶಾಸಕರಾಗಿ ರಘುಪತಿ ಭಟ್‌ ಅವರು ನನಸು ಮಾಡಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಪ್ರಮಾಣಿಕ ಪ್ರಯತ್ನ ಮಾಡಲಿದ್ದೇನೆ.
-ಯಶ್‌ಪಾಲ್‌ ಸುವರ್ಣ, ಉಡುಪಿ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next