Advertisement

ಸೂಕ್ತ ಬೆಲೆ ಸಿಗದ್ದಕ್ಕೆ ಟ್ರ್ಯಾಕ್ಟರ್‌ ಬಳಸಿ ರೇಷ್ಮೆ ಬೆಳೆ ನಾಶ

06:07 PM May 22, 2021 | Team Udayavani |

ಮದ್ದೂರು: ರೇಷ್ಮೆ ಬೆಳೆಗೆ ಸೂಕ್ತ ಬೆಲೆಸಿಗದ ಕಾರಣ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದು ನಿಂತಿದ್ದ ರೇಷ್ಮೆಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿರುವ ಘಟನೆ ತಾಲೂಕಿನ ಹರಳಕೆರೆ ಗ್ರಾಮದಲ್ಲಿ ಜರುಗಿದೆ.

Advertisement

ಹರಳಕೆರೆ ಗ್ರಾಮದ ರೈತ ಗಿರೀಶ್‌ ರೇಷ್ಮೆಬೆಳೆ ನಾಶ ಮಾಡಿದ್ದು, ಒಂದು ಎಕರೆ ಜಮೀನಿನಲ್ಲಿ ಬೆಳೆದುನಿಂತಿದ್ದ ರೇಷ್ಮೆ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿ  ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಕಳೆದ ಹಲವಾರು ವರ್ಷಗಳಿಂದಲೂರೇಷ್ಮೆ ಬೆಳೆಯನ್ನೇ ನಂಬಿ ಜೀವನಸಾಗಿಸುತ್ತಿದ್ದ ತಮಗೆ ಲಾಕ್‌ಡೌನ್ ಸಂದರ್ಭದಲ್ಲಿ ರೇಷ್ಮೆ ಬೆಳೆಗೆ ಸೂಕ್ತಮಾರುಕಟ್ಟೆ ಬೆಲೆ ಸಿಗದೆ ಹಾಗೂ ಸರ್ಕಾರ ವಿತರಿಸುತ್ತಿದ್ದ ಪ್ರತಿ ಕೆ.ಜಿ.ಗೆ 40 ರೂ. ಪ್ರೋತ್ಸಾಹಧನವನ್ನು ಏಕಾಏಕಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ  ಲಾಭಕ್ಕಿಂತನಷ್ಟವೇ ಉಂಟಾದ ಹಿನ್ನೆಲೆಯಲ್ಲಿ ರೇಷ್ಮೆಬೆಳೆಯನ್ನು ನಾಶಪಡಿಸುತ್ತಿರುವುದಾಗಿ ಪತ್ರಿಕೆಗೆ ತಿಳಿಸಿದರು.

ಕಳೆದ ವರ್ಷದ ಹಿಂದೆ 3ಲಕ್ಷ ರೂ. ಸಾಲ ಮಾಡಿ ರೇಷ್ಮೆ ಬೇಸಾಯದಜತೆಗೆ ರೇಷ್ಮೆ ಹುಳು ಸಾಕಾಣಿಕೆ ಮನೆ,ಕೊಳವೆಬಾವಿ ನಿರ್ಮಾಣ ಇನ್ನಿತರೆ ಅಗತ್ಯಸೌಲಭ್ಯಗಳನ್ನು ಪಡೆದಿದ್ದರೂ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಸಿಗದೆ ಜೀವನ ನಿರ್ವಹಣೆಮಾಡುವುದೇ ಕಷ್ಟ ಸಾಧ್ಯ ಹಿನ್ನೆಲೆಯಲ್ಲಿ ಬೆಳೆ ನಾಶಗೊಳಿಸಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ವಿತರಿಸುವ ಜತೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next