Advertisement
ಮುಖ್ಯ ಅತಿಥಿಯಾಗಿ ಕರ್ನಾಟಕದಿಂದ ಬಂದ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರೊಂದಿಗೆ ಕನ್ನಡ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Related Articles
Advertisement
ಸಂಜೆ ಅನುರಾಧ ಭಟ್ ಅವರ ಸಂಗೀತ ಕಾರ್ಯಕ್ರಮ ಅವಿಸ್ಮರಣೀಯ! ತಮ್ಮ ಸುಶ್ರಾವ್ಯ ಕಂಠಸಿರಿಯಲ್ಲಿ ಕನ್ನಡದ ಹಲವಾರು ಸುಪ್ರಸಿದ್ಧ ಹಾಡುಗಳನ್ನು ಹಾಡಿ ಖೀಓ ಕನ್ನಡಿಗರನ್ನು ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅವರು ಹಾಡಿದ “medley’ ಹಾಡುಗಳಿಗೆ ಜನ ಹುಚ್ಚೆದ್ದು ಕುಣಿದರೆಂದರೆ ಅತಿಶಯೋಕ್ತಿಯಲ್ಲ!
ಸಂಗೀತ ಕಾರ್ಯಕ್ರಮದ ಇನ್ನೊಂದು ವೈಶಿಷ್ಟ್ಯವೆಂದರೆ ಅನುರಾಧಾ ಭಟ್ ಅವರೊಡನೆ ನೋಂದಾಯಿಸಿದ ಸಭಿಕರು ಸಹ ಹಾಡಲು ಅವಕಾಶ ದೊರೆತದ್ದು. ಅದು ಅವರ ಜೀವನದ ಅವಿಸ್ಮರಣೀಯ ಅನುಭವವಾಗಿತ್ತು. ಮಧ್ಯಾಹ್ನದ ಪುಷ್ಕಳ ಊಟ, ಸಂಜೆಯ ಲಘು ಉಪಹಾರ (ಮಿರ್ಚಿ ಬಜ್ಜಿ) ಮತ್ತು ರಾತ್ರಿಯ ಊಟ ಬಹಳ ಸ್ವಾದಿಷ್ಟವಾಗಿದ್ದವು. ಪ್ರತಿಯೊಂದು ಪದಾರ್ಥವೂ ಹಿತಮಿತವಾದ ಉಪ್ಪು, ಹುಳಿ, ಖಾರದೊಂದಿಗೆ ನಾಲಿಗೆಗೆ ಮುದನೀಡಿತು.
ನಮ್ಮ ಕಾರ್ಯಕ್ರಮಕ್ಕೆ ವಿಶೇಷ ಕರ್ನಾಟಕ ಶೈಲಿಯ ಸವಿರುಚಿಯಾದ ತಿಂಡಿ ಮತ್ತು ಭೋಜನ ಮಾ ಫ್ಲೆವರ್ಷ್ ಕಡೆಯಿಂದ ಏರ್ಪಾಡಾಗಿತ್ತು ಹಾಗೂ ಓದುಗರಿಗೆ ಕನ್ನಡ ಪುಸ್ತಕ ಮಳಿಗೆ ಇತ್ತು. ದಿನವಿಡೀ ಹಾಜರಿದ್ದವರು ಕರ್ನಾಟಕದ ಖಾದ್ಯಗಳನ್ನು ಸವಿಯುತ್ತ, ಮಕ್ಕಳೂ ಹಿರಿಯರು ಭಾಗವಹಿಸುವಂತೆ ಮಾಡುತ್ತ ಈ ಕಾರ್ಯಕ್ರಮವು ಯುಕೆಯಾದ್ಯಂತದ ಕನ್ನಡಿಗರನ್ನು ಯಶಸ್ವಿಯಾಗಿ ಒಟ್ಟುಗೂಡಿಸಿತು.
ಕಾರ್ಯಕ್ರಮದ ಗೆಲುವಿಗಾಗಿ ಕೈ ಜೋಡಿಸಿದ ಮುಖ್ಯ ಪ್ರಾಯೋಜಕರು “ಕರ್ನಾಟಕ ಸೋಪ್ಸ್ ಡಿಟರ್ಜೆಂಟ್ಸ್(ಮೈಸೂರು ಸ್ಯಾಂಡಲ್)” ಮತ್ತು ಇತರೆ ಪ್ರಾಯೋಜಕರು “ಲಂಡನ್ ಫೈನಾನ್ಶಿಯಲ್ ಲಿ”, ” ಟೊಟಲ್ ಇನ್ವಿರಾನ್ಮೆಂಟ್ ಹೋಮಸ್” , “ಆಹಾ ಬರ್ಜಾ”, “ಶ್ರೀ ರುಚಿ” ; “ಮಿಡಿಯ ಕನೆಕಟ್”. ಯು.ಕೆ.ಯ ಹಾಗೂ ಜಗತ್ತಿನಾದ್ಯಾಂತ ಹಾಸು ಹೊಕ್ಕಾಗಿರುವ ಸಮಸ್ತ ಕನ್ನಡ ಜನತೆಗೆ ನಮ್ಮೆಲ್ಲರ ನಮನಗಳು ಹಾಗೂ ಇದಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧಾನ್ಯವಾದಗಳು. “ಕನ್ನಡ ಬಳಗ ಯುಕೆ ” ಮತ್ತು “ಮಿಡ್ಲಾಂಡ್ಸ್ ಕನ್ನಡಿಗರ” ಸ್ಥಳೀಯ ಗುಂಪುಗಳಾದ “ಕೋವೆಂಟ್ರಿ ಕನ್ನಡಿಗರು”, “ಲೀಮಿಂಗ್ಟನ್ ಸ್ಪಾ/ವಾರ್ವಿಕ್ ಕನ್ನಡಿಗರು, “ಬರ್ಮಿಂಗ್ಹ್ಯಾಮ್ ಕನ್ನಡ ಗ್ರೂಪ್”, “ಯುಕೆ ನಮ್ಮವರು” , “ರಗ್ಬಿ ಕನ್ನಡಿಗರು” , “ಶ್ರಾಪ್ಶೈರ್ಕನ್ನಡಿಗರು” , “ಸ್ಟ್ರಾಟ್ಫೋರ್ಡ್ ಕನ್ನಡಿಗರು” ಸಂಸ್ಥೆಗಳು ಒಗ್ಗಟ್ಟಾಗಿ ಬಂದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದವು.
ವರದಿ: ಅನ್ನಪೂರ್ಣ ಆನಂದ್, ಮಿಲ್ಟನ್ಕೀನ್ಸ್